ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

ಕಳೆದ ತಿಂಗಳು ಬ್ರಾಹ್ಮಣ್ಯ ವಿರೋಧಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಕ್ಕೆ ಗುಜರಾತಿನ ಕಛ್‌ ಪ್ರಾಂತ್ಯದ ದಲಿತ ಕಾರ್ಯಕರ್ತ ಹಾಗೂ ವಕೀಲರೂ ಆದ ದೇವ್‌ ಜಿ ಮಹೇಶ್ವರ್‌ ಎಂಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿತ್ತು.
ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

ಕಳೆದ ತಿಂಗಳು ದಲಿತ ವಕೀಲರೊಬ್ಬರನ್ನು ಇರಿದ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಖಂಡನೆ ವ್ಯಕ್ತಪಡಿಸಿದ್ದಾರೆ. ದಲಿತ ವಕೀಲರನ್ನು ಕೊಲೆಗೈಯಲು ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಬೇಕೆಂದೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ನಟ ಚೇತನ್‌, ಕಳೆದ ತಿಂಗಳು ದಲಿತ ವಕೀಲರನ್ನು ಬ್ರಾಹ್ಮಣ ವ್ಯಕ್ತಿಯೊಬ್ಬರು ಇರಿದು ಕೊಂದಿದ್ದಾರೆ. ವಕೀಲರ ಬ್ರಾಹ್ಮಣ್ಯ ವಿರೋಧಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದಾಗಿ ಮನನೊಂದ ಬ್ರಾಹ್ಮಣ ವ್ಯಕ್ತಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ, ದಲಿತರು ಸಹಸ್ರಾರು ವರ್ಷಗಳಿಂದ ಜಾತಿ ತಾರತಮ್ಯ ಅನುಭವಿಸುತ್ತಿದ್ದಾರೆ. ಈಗ ಅದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಬರೆದುದಕ್ಕಾಗಿ ಕೊಲೆಯಾಗುತ್ತಿದ್ದಾರೆ. ಭಾರತೀಯರು ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಬೇಕು, ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಬ್ರಾಹ್ಮಣ್ಯ ವಿರೋಧಿ ಬರಹ; ದಲಿತ ವಕೀಲನ ಕೊಲೆ

ಕಳೆದ ತಿಂಗಳು ಬ್ರಾಹ್ಮಣ್ಯ ವಿರೋಧಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಕ್ಕೆ ಗುಜರಾತಿನ ಕಛ್‌ ಪ್ರಾಂತ್ಯದ ದಲಿತ ಕಾರ್ಯಕರ್ತ ಹಾಗೂ ವಕೀಲರೂ ಆದ ದೇವ್‌ ಜಿ ಮಹೇಶ್ವರ್‌ ಎಂಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿತ್ತು.

ಭಾರತೀಯ ಕಾನೂನು ವೃತ್ತಿಪರರ ಸಂಘ ಮತ್ತು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟದ ಹಿರಿಯ ಸದಸ್ಯರೂ ಆಗಿದ್ದ ದೇವ್‌ ಜಿ, ದಲಿತ ಹಕ್ಕುಗಳ ಬಗ್ಗೆ, ದಲಿತ ದೌರ್ಜನ್ಯದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರಕಟಿಸುತ್ತಾ ಬಂದವರು. ಕೊಲೆಯಾಗುವ ಮೊದಲು ಪರಿಶಿಷ್ಟ ವರ್ಗದವರು ಹಿಂದೂಗಳಲ್ಲ ಎಂದು ಪೋಸ್ಟ್‌ ಹಾಕಿದ್ದರು. ಅದಕ್ಕೂ ಮೊದಲು ಬ್ರಾಹ್ಮಣ ಧರ್ಮದ ವಿರುದ್ಧ ಸತತ ಪೋಸ್ಟ್‌ ಹಾಕುತ್ತಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದು ದೇವ್‌ ಜಿ ಊರವನೇ ಆದ ಭಾರತ್‌ ರಾವಲ್‌ ಎಂಬ ಬ್ರಾಹ್ಮಣ ಯುವಕನೊಡನೆ ವಾಗ್ವಾದಕ್ಕೂ ಕಾರಣವಾಗಿತ್ತು. ಬ್ರಾಹ್ಮಣರ ವಿರುದ್ಧ ಬರೆಯುವುದನ್ನು ರಾವಲ್‌ ತೀವ್ರವಾಗಿ ವಿರೋಧಿಸಿದ್ದ, ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿ ಈರ್ವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತನಿಖಾ ವೇಳೆ ಬಹಿರಂಗಗೊಂಡಿದೆ.

ಸೆಪ್ಟೆಂಬರ್‌ 25 ರಂದು ರಾವಲ್‌ ದೇವ್‌ ಜಿ ಯ ಫೋನಿಗೆ ಕರೆ ಮಾಡಿ ಸುಮಾರು 14 ನಿಮಿಷಗಳ ಕಾಲ ವಾಗ್ವಾದ ನಡೆಸಿದ್ದ, ಹಾಗೂ ಕೊಲೆ ಬೆದರಿಕೆಯನ್ನೂ ಒಡ್ಡಿದ್ದ, ಅವರ ಸಂಭಾಷಣೆಯ ತುಣುಕು ನಾವು ವಶಪಡಿಸಿಕೊಂಡಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಮೃತ ವಕೀಲ ದೇವ್‌ ಜಿ ಅವರಿಗೆ ಈ ಹಿಂದೆಯೂ ಬೆದರಿಕೆ ಕರೆಗಳು ಬರುತ್ತಿದ್ದವು, ಅವರು ರಾವಲ್‌ ಕರೆಯನ್ನೂ ಕೇವಲ ಬೆದರಿಕೆ ಕರೆಯೆಂದು ತಳ್ಳಿ ಹಾಕಿದ್ದರು, ಹಾಗೂ ಆತನ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ದೇವ್‌ ಜಿ ಆಪ್ತ ಮೂಲಗಳು ಇಂಡಿಯನ್‌ ಎಕ್ಸ್ಪ್ರೆಸ್‌ ಗೆ ತಿಳಿಸಿದ್ದಾರೆ.

ಘಟನೆ ಕುರಿತಂತೆ ಮೃತ ವಕೀಲರ ಪತ್ನಿ ಒಂಭತ್ತು ಜನರ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಪ್ರಸ್ತುತ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಭರತ್‌ ರಾವಲ್‌ ನನ್ನು ಮುಖ್ಯ ಆರೋಪಿಯೆಂದು ಹೆಸರಿಸಲಾಗಿತ್ತು. ಇದೀಗ ತನಿಖೆಯನ್ನು ನಡೆಸುತ್ತಿರುವ ಪೊಲೀಸರ ತಂಡ ಆರೋಪಿ ಬ್ರಾಹ್ಮಣ್ಯ ವಿರುದ್ಧದ ಪೋಸ್ಟ್‌ ಗೆ ಸಂಬಂಧಿಸಿ ಕೊಲೆ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿದ್ದಾಗಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com