ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ

ರಿಪಬ್ಲಿಕ್ ಟಿವಿಯ ಏಳು ಉದ್ಯೋಗಿಗಳಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ ಮತ್ತು ಈವರೆಗೆ ಯಾರನ್ನೂ ಬಂಧಿಸಿಲ್ಲ
ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ

ಟಿಆರ್‌ಪಿ ತಿರುಚುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿಗೆ ಸಮನ್ಸ್‌ ನೀಡುವಂತೆ ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಕಾಂಡಿವಿಲಿ ಠಾಣೆಯಲ್ಲಿ ನಂಬಿಕೆ ದ್ರೋಹ, ಮೋಸ ಮತ್ತು ಕ್ರಿಮಿನಲ್‌ ಪಿತೂರಿಯ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ ಅನ್ನು ವಜಾಗೊಳಿಸುವಂತೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್ ಅವರನ್ನೊಳಗೊಂಡ ನ್ಯಾಯಪೀಠವು ಈ ನಿರ್ದೇಶನವನ್ನು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿಯ ಅಂತಿಮ ವಿಚಾರಣೆಯನ್ನು ನವೆಂಬರ್ 5 ರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸುವುದಾಗಿ ನ್ಯಾಯಪೀಠ ಹೇಳಿದೆ. ಹಾಗೂ ನವೆಂಬರ್ 4 ರಂದು ಮೊಹರು ಮಾಡಿದ ಕವರ್‌ನಲ್ಲಿ ತನಿಖಾ ಪತ್ರಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.

ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ
ದ್ವೇಷ ಹರಡುವ ಮಾಧ್ಯಮಗಳಿಗೆ ಜಾಹಿರಾತು ನೀಡದಿರಲು ಪಾರ್ಲೆ ನಿರ್ಧಾರ

ಬಂಧನದಿಂದ ಮಧ್ಯಂತರ ರಕ್ಷಣೆಗಾಗಿ ಅರ್ನಾಬ್‌ ಗೋಸ್ವಾಮಿ ವಕೀಲ ಹರೀಶ್‌ ಸಾಲ್ವೆ ಒತ್ತಾಯಿಸಿದರೂ, ಗೋಸ್ವಾಮಿಯನ್ನು ಇನ್ನೂ ಆರೋಪಿಯನ್ನಾಗಿ ಹೆಸರಿಸದಿರುವುದರಿಂದ, ಪ್ರಸ್ತುತ ಹಂತದಲ್ಲಿ ಅಂತಹ ಆದೇಶವನ್ನು ರವಾನಿಸುವುದು ಕಷ್ಟ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಿಪಬ್ಲಿಕ್ ಟಿವಿಯ ಏಳು ಉದ್ಯೋಗಿಗಳಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ ಮತ್ತು ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತರಲಾಗಿದೆ.

ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ
ಮತ್ತೆ ಸಂಕಷ್ಟದಲ್ಲಿ Republic Tv ಮುಖ್ಯಸ್ಥ ಅರ್ನಬ್ ಗೋಸ್ವಾಮಿ.!

ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸದಿದ್ದರೂ ಮುಂಬೈ ಪೊಲೀಸ್ ಆಯುಕ್ತರು ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿ ವಿರುದ್ಧ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಪ್ರತೀಕಾರ ತೀರಿಸುತ್ತಿದ್ದಾರೆ ಎಂದು ಸಾಲ್ವೆ ಆರೋಪಿಸಿದ್ದಾರೆ. ಪಾಲ್ಘರ್ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಮತ್ತು ಸರ್ಕಾರದ ವಿರುದ್ಧ ಮಾಡಿದ ವಿಮರ್ಶಾತ್ಮಕ ವರದಿಗಳಿಗೆ ಪ್ರತೀಕಾರವಾಗಿ ರಿಪಬ್ಲಿಕ್‌ ಟಿವಿ ಮೇಲೆ ಹಗೆ ಸಾಧಿಸಲಾಗುತ್ತಿದೆಯೆಂದು ಅವರು ಆರೋಪಿಸಿದ್ದಾರೆ.

ರಿಪಬ್ಲಿಕ್ ಟಿವಿಯ ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ನಿಗ್ರಹಿಸಲು ಮಹಾರಾಷ್ಟ್ರ ಸರ್ಕಾರವು ಕೈಗೊಂಡ ಕ್ರಮಗಳ ಸರಣಿಯಲ್ಲಿ ಪ್ರಸ್ತುತ ಎಫ್‌ಐಆರ್ ಇತ್ತೀಚಿನದು ಎಂದು ಸಾಲ್ವೆ ವಾದಿಸಿದ್ದಾರೆ.

ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ
ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್‌ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ

ಅರ್ನಾಬ್‌ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್‌ ಟಿವಿ ಸೇರಿದಂತೆ ಕೆಲವು ಖಾಸಗಿ ಟಿವಿ ಚಾನೆಲ್‌ಗಳು ಟಿಆರ್‌ಪಿ ತಿರುಚುವಿಕೆಯಲ್ಲಿ ಭಾಗಿಯಾಗಿದೆ ಎಂಬ ಸುದ್ದಿ ಕಳೆದೆರಡು ವಾರದ ಹಿಂದೆ ಸಾಕಷ್ಟು ಕೋಲಾಹಲವನ್ನೆಬ್ಬಿಸಿತ್ತು.

“ಅರ್ನಾಬ್‌ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್‌ ಟಿವಿ, ಫಕ್ತ್‌ ಮರಾಠಿ ಮತ್ತು ಬಾಕ್ಸ್‌ ಸಿನಿಮಾ ಚಾನೆಲ್‌ಗಳ ವಿರುದ್ದ ತನಿಖೆಯನ್ನು ಆರಂಭಿಸಲಾಗಿದೆ. ಈ ಮೂರು ಚಾನೆಲ್‌ಗಳು ಟಿಆರ್‌ಪಿ ರೇಟಿಂಗ್‌ ಅನ್ನು ತಿರುಚಿ, ತಮ್ಮ ಚಾನೆಲ್‌ಗೆ ಒಳ್ಳೆಯ ರೇಟಿಂಗ್‌ ಬರುವ ರೀತಿ ಮಾಡುತ್ತಿದ್ದರು,” ಎಂದು ಮುಂಬೈ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಹೇಳಿ ಹೇಳಿದ್ದರು.

ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ
TRP ಹಗರಣ: ವಿಚಾರಣೆಗೆ ಹಾಜರಾದ Republic TV ಮುಖ್ಯಸ್ಥರು

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com