ʼದಿ ಕ್ಯಾರವಾನ್‌ʼ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರು

ಪತ್ರಕರ್ತನಿಗೆ ಸಂಪೂರ್ಣ ಬೆಂಬಲ ಘೋಷಿಸಿರುವ ಪ್ರಸ್‌ ಕ್ಲಬ್‌, ಹಲ್ಲೆ ನಡೆಸಿರುವ ಎಸಿಪಿ ಅಜಯ್‌ ಕುಮಾರ್‌ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೇಳಿಕೊಂಡಿದ್ದಾರೆ.
ʼದಿ ಕ್ಯಾರವಾನ್‌ʼ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರು

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರಗಳು ಮಾಧ್ಯಮದ ಮೇಲೆ ದೌರ್ಜನ್ಯ ನಡೆಸುವ ರೀತಿ ಮಿತಿ ಮೀರಿದೆ. ಸರ್ಕಾರಿ ಪ್ರಾಯೋಜಿತ ಗೂಂಡಾಗಲು ಇಲ್ಲಿಯವರೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದರೆ, ಈಗ ಜನರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಖುದ್ದಾಗಿ ಮಾಧ್ಯಮದ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ.ಇದಕ್ಕೆ ಸಾಕ್ಷಿಯಾಗಿ ದೆಹಲಿಯ ಎಸಿಪಿಯೊಬ್ಬರು ʼದ ಕ್ಯಾರವಾನ್‌ʼ ಸುದ್ದಿ ಸಂಸ್ಥೆಯ ಪತ್ರಕರ್ತನ ಮೇಲೆ ಧಾರುಣವಾಗಿ ಹಲ್ಲೆ ನಡೆಸಿದ್ದಾರೆ.

ಶುಕ್ರವಾರದಂದು ಉತ್ತರ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕುರಿತು ವರದಿ ಮಾಡಲು ಹೋಗಿದ್ದ ಕ್ಯಾರವಾನ್‌ ನ ಅಹನ್‌ ಪೆನ್ಕರ್‌ ಎಂಬ ಪತ್ರಕರ್ತ ತನ್ನ ಗುರುತಿನ ಚೀಟಿಯನ್ನು ಮತ್ತೆ ಮತ್ತೆ ತೋರಿಸಿದರೂ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಷ್ಟು ಮಾತ್ರವಲ್ಲದೇ, ಪತ್ರಕರ್ತನ ಫೋನ್‌ ಕಿತ್ತುಕೊಂಡು ಅದರಲ್ಲಿದ್ದ ಎಲ್ಲಾ ಫೋಟೋ ಹಾಗೂ ವೀಡಿಯೋಗಳನ್ನು ಡಿಲೀಟ್‌ ಅಳಿಸಿಹಾಕಲಾಗಿದೆ. ಸತತ ನಾಲ್ಕುಗಂಟೆಗಳ ಕಾಲ ಪೆನ್ಕಾರ್‌ ಅವರನ್ನು ಬಂಧನದಲ್ಲಿಟ್ಟುಕೊಂಡು ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು, ದ ಕ್ಯಾರವಾನ್‌ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು FIR ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ದೆಹಲಿಯ ʼಮಾಡೆಲ್‌ ಪೊಲೀಸ್‌ ಠಾಣೆʼಯ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರಲ್ಲಿ ಕೆಲವರು ಪೊಲೀಸ್‌ ಠಾಣೆಯ ಒಳ ನುಗ್ಗಿ ಪೊಲೀಸರಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಪೆನ್ಕಾರ್‌ ಅವರು, ಸಂತ್ರಸ್ಥೆಯ ಸಂಬಂಧಿಕರ ಬಳಿ ವೀಡಿಯೋ ಮಾಡುತ್ತಿದ್ದರು.

ಹತ್ತು ನಿಮಿಷಗಳ ನಂತರ ಸುಮಾರು 15 ಜನ ಪೊಲೀಸರು ಠಾಣೆಯಿಂದ ಹೊರಗೆ ಬಂದು, ಪ್ರತಿಭಟನಾಕಾರರಿಗೆ ತೆರಳುವಂತೆ ಸೂಚಿಸಿದರು. ಪ್ರತಿಭಟನಾಕಾರರು ನಿರಾಕರಿಸಿದಾಗ, ಪ್ರತಿಭಟನಾ ನಿರತ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆಯಲು ಆರಂಭಿಸಿದರು. ಬಹಳಷ್ಟು ಜನ ಪೊಲೀಸರು ಸಮವಸ್ತ್ರದಲ್ಲೇ ಇರದ ಕಾರಣ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪೆನ್ಕಾರ್‌ ಹೇಳಿದ್ದಾರೆ.

ಪೆನ್ಕಾರ್‌ ಅವರನ್ನು ವಶಕ್ಕೆ ಪಡೆದ ನಂತರ ಇವರೊಂದಿಗೆ ಇನ್ನೂ ನಾಲ್ಕು ಜನ ಪ್ರತಿಭಟನಾಕಾರರನ್ನು ಸೇರಿಸಿ ಠಾಣೆಯ ಒಂದು ಕೊಠಡಿಯಲ್ಲಿ ಕೂರಿಸಲಾಯಿತು. ನಂತರ ಸತತ ನಾಲ್ಕು ತಾಸುಗಳ ಕಾಲ, ಎಸಿಪಿ ಅಜಯ್‌ ಕುಮಾರ್‌ ಸೇರಿದಂತೆ ಇನ್ನೂ ಹಲವು ಪೊಲೀಸರು ಸತತವಾಗಿ ಇವರ ಮೇಲೆ ಹಲ್ಲೆ ನಡೆಸಿದ್ದಾರೆ.

“ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದರಿಂದ ನಾನು ನೆಲದ ಮೇಲೆ ಬಿದ್ದಿದ್ದೆ. ಆಗಲೂ ನನ್ನ ಬೆನ್ನಿಗೆ ಒದ್ದು, ನನ್ನ ಹಿಮ್ಮಡಿಯನ್ನು ನೆಲಕ್ಕೆ ಬೂಟುಗಾಲಿನಿಂದ ಒತ್ತಿ ಹಿಡಿದಿದ್ದರು,” ಎಂದು ಪೆನ್ಕಾರ್‌ ಹೇಳಿದ್ದಾರೆ.

ಭಾರತದ ಪ್ರೆಸ್‌ ಕ್ಲಬ್‌ನಿಂದ ಖಂಡನೆ:

ಈ ವಿಚಾರವಾಗಿ ಹೇಳಿಕೆ ನೀಡಿರುವ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ, ದೆಹಲಿ ಪೊಲೀಸರು, ದೌರ್ಜನ್ಯ ನಡೆಸುವ ವಿಚಾರದಲ್ಲಿ ಉತ್ತರ ಪ್ರದೇಶದ ಪೊಲೀಸರನ್ನೂ ಮೀರಿಸಿದ್ದಾರೆ ಎಂದು ಹೇಳಿದೆ. ಪತ್ರಕರ್ತನಿಗೆ ಸಂಪೂರ್ಣ ಬೆಂಬಲ ಘೋಷಿಸಿರುವ ಪ್ರಸ್‌ ಕ್ಲಬ್‌, ಹಲ್ಲೆ ನಡೆಸಿರುವ ಎಸಿಪಿ ಅಜಯ್‌ ಕುಮಾರ್‌ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೇಳಿಕೊಂಡಿದ್ದಾರೆ.

“ಇಂತಹ ಬೇಜವಾಬ್ದಾರಿಯುತ ಮತ್ತು ಗೂಂಡಾ ಪ್ರವೃತ್ತಿಯ ಪೊಲೀಸರು ಖಾಕಿ ಸಮವಸ್ತ್ರ ಧರಿಸಲು ಅನರ್ಹರು. ಎಸಿಪಿ ಅಜಯ್‌ ಅವರೊಂದಿಗೆ ಅವರ ಕಿರಿಯ ಅಧಿಕಾರಿಗಳ ವಿರುದ್ದ ಕೂಡಾ ತನಿಖೆ ನಡೆಸಬೇಕು,” ಪ್ರಸ್‌ ಕ್ಲಬ್‌ ಆಫ ಇಂಡಿಯಾ ಹೇಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com