ದುರ್ಗಾ ಪೂಜೆಯ ಜನಜಂಗುಳಿ ಕೋವಿಡ್‌ ಹರಡುವುದಕ್ಕೆ ಪೂರಕ; ತಜ್ಞರ ಎಚ್ಚರಿಕೆ

ಕೋಲ್ಕತ್ತಾದಲ್ಲಿ ಮತ್ತು ಪ್ರತಿ ಜಿಲ್ಲೆಯಲ್ಲೂ ಲಕ್ಷಾಂತರ ಜನರು ಬೀದಿಗಳಲ್ಲಿ ಇಳಿಯುತ್ತಾರೆ ಮತ್ತು ಒಂದು ಪಂಡಲ್‌ನಿಂದ ಮತ್ತೊಂದಕ್ಕೆ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಸಂಜೆ 6 ರಿಂದ 11 ರವರೆಗೆ, ಒಂದೇ ಪಂಡಲ್‌ನಲ್ಲಿ ಹತ್ತಾರು ಸಾವಿರಗಳವರೆಗೆ ...
ದುರ್ಗಾ ಪೂಜೆಯ ಜನಜಂಗುಳಿ ಕೋವಿಡ್‌ ಹರಡುವುದಕ್ಕೆ ಪೂರಕ; ತಜ್ಞರ ಎಚ್ಚರಿಕೆ

ಪ್ರಪಂಚದಾದ್ಯಂತ ಇರುವ ಬಂಗಾಳಿಗಳು ಆಚರಿಸುವ ಅತ್ಯಂತ ಪ್ರಮುಖ ಹಬ್ಬವೆಂದರೆ ದುರ್ಗಾ ಪೂಜೆ. ಈ ಸಮಯದಲ್ಲಿ ಪಶ್ಚಿಮ ಬಂಗಾಳದ ಪ್ರತೀ ಊರುಗಳಲ್ಲೂ ಹೆಚ್ಚಿನ ಜನಸಂದಣಿ ಕಂಡು ಬಂದರೆ ಕೋಲ್ಕತಾ ನಗರದಲ್ಲಿ ಲಕ್ಷಾಂತರ ಜನರು ಸೇರಿ ಹಬ್ಬ ಆಚರಿಸುತ್ತಾರೆ. ಆದರೆ ಜನಜಂಗುಳಿಗೆ ಅವಕಾಶ ಮಾಡಿಕೊಟ್ಟರೆ ಕೋವಿಡ್‌ ಸಾಂಕ್ರಮಿಕವು ಹರಡಿ ಭಾರೀ ಅನಾಹುತಕ್ಕೆ ಕಾರಣವಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ದುರ್ಗಾ ಪೂಜೆ ಬಂಗಾಳಿಗಳ ಅತ್ಯಂತ ಪ್ರಮುಖವಾದ ಧಾರ್ಮಿಕ ಹಬ್ಬವಾಗಿದ್ದು, ಈ ವರ್ಷ ಅಕ್ಟೋಬರ್ 22 ರಿಂದ 26 ರವರೆಗೆ ನಡೆಯುವ ನಿರೀಕ್ಷೆಯಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ದಿನಗಳಲ್ಲಿ, ಕೋಲ್ಕತ್ತಾದಲ್ಲಿ ಮತ್ತು ಪ್ರತಿ ಜಿಲ್ಲೆಯಲ್ಲೂ ಲಕ್ಷಾಂತರ ಜನರು ಬೀದಿಗಳಲ್ಲಿ ಇಳಿಯುತ್ತಾರೆ ಮತ್ತು ಒಂದು ಪಂಡಲ್‌ನಿಂದ ಮತ್ತೊಂದಕ್ಕೆ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಸಂಜೆ 6 ರಿಂದ 11 ರವರೆಗೆ, ಒಂದೇ ಪಂಡಲ್‌ನಲ್ಲಿ ಹತ್ತಾರು ಸಾವಿರಗಳವರೆಗೆ ಜನರು ಸೇರುತ್ತಾರೆ. ಕಳೆದ ಅಕ್ಟೋಬರ್ 6 ರಂದು, ಮೆಡಿಕಲ್‌ ಅಸೋಸಿಯೇಷನ್‌ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದುರ್ಗಾ ಪೂಜೆಯ ನಂತರ ಉಂಟಾಗಬಹುದಾದ ಕೋವಿಡ್‌ ೧೯ ಸೋಂಕಿನ ಸುನಾಮಿ ಬಗ್ಗೆ ಎಚ್ಚರಿಕೆ ಪತ್ರವನ್ನು ಕಳುಹಿಸಿತು. ಈ ಪತ್ರದಲ್ಲಿ ಸೆಪ್ಟೆಂಬರ್‌ನಲ್ಲಿ ಓಣಂ ಹಬ್ಬದ ನಂತರ ಕೇರಳದಲ್ಲಿ ಕೋವಿಡ್‌ ೧೯ ಪ್ರಕರಣಗಳು ಹೇಗೆ ಹೆಚ್ಚಾದವು ಎಂದು ಪತ್ರವು ವಿವರಿಸಿದೆ.

ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಯಶಸ್ವಿ ಕ್ರಮಗಳನ್ನು ಕೈಗೊಂಡು ಶ್ಲಾಘನೆಗೆ ಒಳಗಾಗಿದ್ದ ಕೇರಳವು ಅಕ್ಟೋಬರ್‌ ೭ ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ನಾವು ಈ ನಿದರ್ಶನಗಳಿಂದ ಕಲಿಯದಿದ್ದರೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅದು ಆತ್ಮಹತ್ಯೆಯಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪಶ್ಚಿಮ ಬಂಗಾಳ ವೈದ್ಯರ ವೇದಿಕೆ ಮತ್ತು ಭಾರತೀಯ ವೈದ್ಯಕೀಯ ಸಂಘ ಕೂಡ ದುರ್ಗಾ ಪೂಜೆಗೆ ರಾಜ್ಯದ ಸಿದ್ಧತೆಗಳ ಬಗ್ಗೆ ಪ್ರತಿಕ್ರಿಯಿಸಿದೆ.

ಪಶ್ಚಿಮ ಬಂಗಾಳ ಸರ್ಕಾರವು ಈ ವರ್ಷ ಪೂಜಾ ಸಂಘಟಕರಿಗೆ ಅನೇಕ ಸೂಚನೆಗಳನ್ನು ನೀಡಿದೆ, ಇದನ್ನು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ನೇತೃತ್ವದ ರಾಜ್ಯದ ಜಾಗತಿಕ ಸಲಹಾ ಮಂಡಳಿಯು ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದರಲ್ಲಿ ಅತ್ಯಂತ ಮುಖ್ಯವಾದುದು ಸರಿಯಾದ ಗಾಳಿ ಬೀಸಲು ಈ ವರ್ಷ ಪಂಡಲ್‌ಗಳು ಕನಿಷ್ಠ ಮೂರು ಕಡೆ ತೆರೆದಿರಬೇಕು. ಪ್ರತಿ ಪಂಡಲ್ ಬಳಿ ಮಾಸ್ಕ್‌ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಇಟ್ಟಿರಬೇಕು. ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಕ್ಲಬ್‌ಗಳು ಹೆಚ್ಚಿನ ಸ್ವಯಂಸೇವಕರನ್ನು ನಿಯೋಜಿಸಬೇಕು.

ಪೂಜೆಗಳನ್ನು ಏರ್ಪಡಿಸುವವರು ಸ್ಥಳೀಯ ಅಧಿಕಾರಿಗಳಿಂದ ಆನ್‌ಲೈನ್‌ನಲ್ಲಿ ಮೊದಲೇ ಅನುಮತಿ ಪಡೆಯಬೇಕು. ಸೆಪ್ಟೆಂಬರ್ 24 ರಂದು ಕೋಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಪೂಜಾ ಸಂಘಟಕರನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ರಾಜ್ಯಾದ್ಯಂತ 37,000 ಪೂಜಾ ಸಮಿತಿಗಳಲ್ಲಿ ತಲಾ 50,000 ರೂ.ಗಳ ಆರ್ಥಿಕ ನೆರವು ಘೋಷಿಸಿದರು (ಒಟ್ಟು 185 ಕೋಟಿ ರೂ.) ಆದರೆ ರಾಜ್ಯದ ಕೊರತೆ ಹಣಕಾಸಿನ ದೃಷ್ಟಿಯಿಂದ ಈ ಕ್ರಮವನ್ನು ಅನೇಕರು ಟೀಕಿಸಿದ್ದಾರೆ. ನಂತರ, ಈ ವರ್ಷ ಜನರು ತೃತೀಯ ರಾತ್ರಿಯಿಂದ ಏಕಾದಸಿಯ ವರೆಗೆ ಪಂಡಲ್‌ಗಳಿಗೆ ಭೇಟಿ ನೀಡಬಹುದು. ನಾವು ಕರೋನವೈರಸ್ ಅನ್ನು ಲಾಕ್‌ಡೌನ್‌ನಲ್ಲಿ ಇಡುತ್ತೇವೆ ಮತ್ತು ದುರ್ಗಾ ಪೂಜೆಯನ್ನು ಮಾಡುತ್ತೇವೆ. ಎಂದು ಹೇಳಿದರು. ಭಾನುವಾರ, ರಾಜ್ಯ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯ ಅವರು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟರನ್ನೂ ವಿಡಿಯೋ ಮೂಲಕ ಉದ್ದೇಶಿಸಿ, ಮಾತನಾಡಿ ಜಿಲ್ಲೆಯ ಎಲ್ಲ ಆಸ್ಪತ್ರೆ ಗಳಲ್ಲೂ ಹಾಸಿಗೆಗಳು ಮತ್ತು ಕ್ವಾರಂಟೈನ್‌ ಗೃಹಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಳಿಕೊಂಡರು.

ಸರ್ಕಾರದ ಸಿದ್ದತೆಗೆ ವ್ಯತಿರಿಕ್ತವಾಗಿ ಅಕ್ಟೋಬರ್ 10 ರಂದು, ರಾಜ್ಯವು ಹೊಸ ಸೋಂಕುಗಳ ದೈನಂದಿನ ಸಂಖ್ಯೆ 3,591 ಕ್ಕೆ ಏರಿಕೆ ಆಗಿದ್ದು 62 ಸಾವುಗಳನ್ನು ದಾಖಲಿಸಿದೆ. ಕಳೆದ ಕೆಲವು ವಾರಗಳವರೆಗೆ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 3,200 ರ ಆಸುಪಾಸಿನಲ್ಲಿ ಸ್ಥಿರವಾಗಿ ಉಳಿದಿತ್ತು. ಕೆಲವು ವಾರಗಳಿಂದ ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯೂ ಸ್ಥಿರವಾಗಿ ಉಳಿದಿದೆ. ರಾಜ್ಯ ಸರ್ಕಾರದ ಆರೋಗ್ಯ ಪೋರ್ಟಲ್‌ನ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳವು ಸೆಪ್ಟೆಂಬರ್ 14 ರಂದು 47,537 ಮಾದರಿಗಳನ್ನು ಪರೀಕ್ಷಿಸಿತ್ತು - ಆದರೆ ಅಕ್ಟೋಬರ್ 8 ರಂದು 42,441, ಸುಮಾರು ಮೂರು ವಾರಗಳಲ್ಲಿ 5,096 ರಷ್ಟು ಕಡಿಮೆಯಾಗಿದೆ.

ಅಕ್ಟೋಬರ್ 11 ರ ಹೊತ್ತಿಗೆ, ರಾಜ್ಯ ಸರ್ಕಾರವು ಪ್ರತಿ ಮಿಲಿಯನ್ ಜನಸಂಖ್ಯೆಗೆ 40,567 ಪರೀಕ್ಷೆಗಳನ್ನು ನಡೆಸುತ್ತಿದೆ - ಇದು ರಾಷ್ಟ್ರೀಯ ಸರಾಸರಿ 60,323 ಗಿಂತ ತೀರಾ ಕಡಿಮೆಯಾಗಿದೆ. ಇದಲ್ಲದೆ, ಕೋಲ್ಕತ್ತಾದ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಇತರ ಜಿಲ್ಲೆಗಳಲ್ಲಿರುವ ಹೆಚ್ಚಿನವುಗಳು ಸಂಪೂರ್ಣ ಭರ್ತಿಯಾಗಿವೆ. ಆದಾಗ್ಯೂ, ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ಗೆ ಪ್ರತಿದಿನ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಸರ್ಕಾರಿ ಆಸ್ಪತ್ರೆಗಳು ಇನ್ನೂ ಕೆಲವು ಖಾಲಿ ಬೆಡ್‌ ಗಳನ್ನು ಹೊಂದಿವೆ.

ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಅಂಕಿಅಂಶಗಳ ಸಹಾಯಕ ಪ್ರಾಧ್ಯಾಪಕ ಮತ್ತು ಕೋಲ್ಕತಾ ಮೂಲದ ಶ್ರೀಜನ್ ಸೇನ್‌ಗುಪ್ತಾ ಮಾತನಾಡಿ, ರಾಜ್ಯದಲ್ಲಿ ಹೊಸ ಸೋಂಕುಗಳ ಸಂಖ್ಯೆಯು ದಿನಕ್ಕೆ 3,200 - 3,500 ಆಸು ಪಾಸಿನಲ್ಲಿದ್ದರೂ ದುರ್ಗಾ ಪೂಜೆಯು ಓಣಂ ತರಹದ ಪರಿಣಾಮಕ್ಕೆ ಕಾರಣವಾಗಬಹುದು - ಅಂದರೆ, ಹಬ್ಬದ ಸಮಯದಲ್ಲಿ ಸಂಖ್ಯೆಯಲ್ಲಿ ಸಣ್ಣ ಇಳಿಕೆ ಕಂಡು ಬಂದು ನಂತರ ಗಣನೀಯ ಏರಿಕೆ ದಾಖಲಿಸಬಹುದೆಂದು ಎಚ್ಚರಿಸಿದ್ದಾರೆ. ಆದರೆ ಮುಂದಿನ ವರ್ಷ ವಿಧಾನ ಸಭಾ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿದ್ದು ಬಹುಸಂಖ್ಯಾತ ಹಿಂದೂಗಳ ಮತದ ಮೇಲೆ ಕಣ್ಣಿಟ್ಟಿದೆ. ಈ ಸಂದರ್ಭದಲ್ಲಿ ಹಿಂದೂಗಳ ಅತೀ ದೊಡ್ಡ ಹಬ್ಬದ ಅಚರಣೆಯ ಮೇಲೆ ನಿರ್ಬಂಧ ಹೇರಿದರೆ ಅದೂ ಕೂಡ ಚುನಾವಣಾ ವಿಷಯವೇ ಆಗಬಹುದು. ಅಚರಣೆಗೆ ಮುಕ್ತ ಅನುಮತಿ ನೀಡದರೂ ಅದು ಕೋವಿಡ್‌ ಪ್ರಸರಣಕ್ಕೆ ದೊಡ್ಡ ವೇದಿಕೆಯೂ ಆಗಿಬಿಡಬಹುದು ಎನ್ನಲಾಗಿದೆ. ಸರ್ಕಾರವು ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.

ಆರೋಗ್ಯ ತಜ್ಞರು ಈ ನಿಟ್ಟಿನಲ್ಲಿ, ಅವರು ಈ ಕೆಳಗಿನ ಕ್ರಮಗಳನ್ನು ಸೂಚಿಸಿದ್ದಾರೆ. ಪೂಜಾ-ಸಂಘಟನಾ ಸದಸ್ಯರು ಮಾತ್ರ ಸೂಕ್ತವಾದ ವೈಯಕ್ತಿಕ ರಕ್ಷಣೆ ಸಲಕರಣೆಯೊಂದಿಗೆ ಪೆಂಡಾಲ್‌ಗಳಲ್ಲಿ ಇರಬಹುದು. ಪೂಜೆಯ ನೇರ ಪ್ರಸಾರವನ್ನು ಆನ್‌ಲೈನ್ ಮೂಲಕ ನೀಡಬೇಕು. ಪೆಂಡಾಲ್‌ ನಲ್ಲಿ ಯಾವುದೇ ಸಮಯದಲ್ಲಿ 50 ಕ್ಕಿಂತ ಹೆಚ್ಚು ಜನರನ್ನು ಸೇರಲು ಬಿಡಬಾರದು. ನಿರ್ದಿಷ್ಟ ನೆರೆಹೊರೆಗಳಿಗೆ ನಿರ್ದಿಷ್ಟವಾದ ಪೆಂಡಾಲ್‌ಗಳನ್ನು ನಿಗದಿಪಡಿಸುವುದು ಮತ್ತು ಪೂರ್ವ-ನಿಗದಿಪಡಿಸಿದ ಭೇಟಿ ಸಮಯವನ್ನು ಹೊಂದಿರುವ ಸಂದರ್ಶಕರಿಗೆ ಟೋಕನ್ ವ್ಯವಸ್ಥೆಯನ್ನು ಬಳಸುವುದು ಮುಂತಾದ ಗುಂಪು ನಿರ್ವಹಣಾ ತಂತ್ರಗಳ ಬಳಕೆ; ಮತ್ತು ಜ್ವರ, ಕೆಮ್ಮು ಮತ್ತು /ಅಥವಾ ಶೀತ ಇರುವ ಯಾವುದೇ ವ್ಯಕ್ತಿಯನ್ನು ಪಾಂಡಲ್‌ಗಳಲ್ಲಿ ಬಿಡಬಾರದು. ಪೂರ್ವ ಭಾರತದ ದುರ್ಗಾ ಪೂಜೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ಒಂದು ಸಾಮಾಜಿಕ ಹಬ್ಬವಾಗಿದ್ದು ಅದು ಧರ್ಮ, ಜಾತಿ ಮತ್ತು ಆರ್ಥಿಕ ಅಂತಸ್ತನ್ನೂ ಮೀರಿರುತ್ತದೆ. ಈ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಎಲ್ಲರೊಂದಿಗೆ ಆಚರಿಸಲು ಮತ್ತು ಆಚರಿಸುವ ಆಸೆಗೆ ತಡೆಯೊಡ್ಡುವುದು ಯಾವುದೇ ಚುನಾಯಿತ ಸರ್ಕಾರಕ್ಕೆ ಕಷ್ಟವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com