ಹೈದರಾಬಾದ್:‌ ಭಾರೀ ಮಳೆಗೆ 14 ಕ್ಕೂ ಹೆಚ್ಚು ಮಂದಿ ಸಾವು
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯು ಕುಸಿತಕ್ಕೆ ತೆಲಂಗಾಣ , ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉದ್ಭವಿಸಿದ್ದು 14 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಹೈದರಾಬಾದ್:‌ ಭಾರೀ ಮಳೆಗೆ 14 ಕ್ಕೂ ಹೆಚ್ಚು ಮಂದಿ ಸಾವು

14 ಕ್ಕೂ ಹೆಚ್ಚು ಮಂದಿ ಆಂಧ್ರ, ತೆಲಂಗಾಣದ ಭೀಕರ ಮಳೆಗೆ ಬಲಿಯಾಗಿದ್ದಾರೆಂದು ವರದಿಯಾಗಿದೆ. ಹೈದರಾಬಾದಿನ ಬಂದ್ಲಾಗುಡದಲ್ಲಿ ಬಂಡೆಯೊಂದು ಎರಡು ಮನೆಗಳ ಮೇಲೆ ಉರುಳಿದ ಪರಿಣಾಮ 19 ದಿನಗಳ ಮಗು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿರುವುದಾಗಿ ಇಂಡಿಯನ್‌ ಎಕ್ಸ್ಪ್ರೆಸ್‌ ವರದಿ ಮಾಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಪರಿಣಾಮ ತೆಲಂಗಾಣ, ಆಂಧರ ಪ್ರದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ.

ಹೈದರಾಬಾದ್‌ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉದ್ಭವಿಸಿದ್ದು, NDRF, SDRF ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳೀಯ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಳೆ ನೀರು ಮನೆಗಳಿಗೆ ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದ ನೀರಿನಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿದ್ದು ಭಾರೀ ನಷ್ಟ ಉಂಟಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com