ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು
ನ್ಯಾಯಮೂರ್ತಿ ವಿನೋದ್‌ ಬಾಲನಾಯಕ್‌ ಅವರು ಕ್ಯಾತ್ಸಂದ್ರ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸುವಂತೆ ಹೇಳಿದ್ದರು.
ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು

ಕೃಷಿ ಮಸೂದೆಗಳನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾ ರಾಣಾವತ್‌ ವಿರುದ್ದ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಸೋಮವಾರದಂದು ಎಫ್‌ಐಆರ್‌ ದಾಖಲಾಗಿದೆ. ಇದೇ ತಿಂಗಳ 9ನೇ ತಾರೀಕಿನಂದು ಕಂಗಾನ ವಿರುದ್ದ FIR ದಾಖಲಿಸುವಂತೆ ತುಮಕೂರು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿತ್ತು.

ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು
ಕಂಗನಾ ವಿರುದ್ದ FIR ದಾಖಲಿಸುವಂತೆ ನಿರ್ದೇಶನ ನೀಡಿದ ತುಮಕೂರು ನ್ಯಾಯಾಲಯ

ನ್ಯಾಯಮೂರ್ತಿ ವಿನೋದ್‌ ಬಾಲನಾಯಕ್‌ ಅವರು ಕ್ಯಾತ್ಸಂದ್ರ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸುವಂತೆ ಹೇಳಿದ್ದರು. ಕಲಂ 44, 153, 153A, 504 ಮತ್ತು 108 ಮತ್ತು ಐಪಿಸಿ ಸೆಕ್ಷನ್‌ 1860 ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು
ಮೋದಿ ಓಲೈಕೆ ಭರದಲ್ಲಿ ಪ್ರತಿಭಟನಾನಿರತ ರೈತರನ್ನು ಭಯೋತ್ಪಾದಕರೆಂದ ಕಂಗನಾ

ಕಂಗನಾ ವಿರುದ್ದ ತುಮಕೂರು ತಾಲ್ಲೂಕು ಕದರನಹಳ್ಳಿ ತಾಂಡಾ ವಾಸಿ ಹಾಗೂ ಹೈಕೋರ್ಟ್ ವಕೀಲ ಎಲ್‌ ರಮೇಶ್ ನಾಯಕ್ ಅವರು ಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.

ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು
ʻಮಹಾʼ ಹೈಡ್ರಾಮಕ್ಕೆ ನಟಿ ಕಂಗನಾ ರಣಾವತ್‌ ಕಂಗಾಲು..!

ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ನೇರವಾದ ನ್ಯಾಯಾಲಯದ ಕದ ತಟ್ಟಿದ ರಮೇಶ್‌ ಅವರು, ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಮನವ ಸಲ್ಲಿಸಿದ್ದರು. ಇಲ್ಲವಾದಲ್ಲಿ ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದರು.

ಕಂಗನಾ ವಿರುದ್ದ ತುಮಕೂರಿನಲ್ಲಿ FIR ದಾಖಲು
ಕಂಗನಾ ಬಂಗಲೆ ತೆರವು; ಚಟುವಟಿಕೆ ಸ್ಥಗಿತಗೊಳಿಸುವಂತೆ BMCಗೆ ಬಾಂಬೆ ಹೈಕೋರ್ಟ್ ಆದೇಶ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com