ಜಬಲ್ಪುರ; ಆತ್ಮಹತ್ಯೆ ಮಾಡಿಕೊಂಡ ವೈದ್ಯ ವಿದ್ಯಾರ್ಥಿಯ ಪೋಷಕರಿಂದ ಮೇಲ್ವರ್ಗದ ವಿದ್ಯಾರ್ಥಿಗಳ ಮೇಲೆ ದೂರು
ರಾಷ್ಟ್ರೀಯ

ಜಬಲ್ಪುರ; ಆತ್ಮಹತ್ಯೆ ಮಾಡಿಕೊಂಡ ವೈದ್ಯ ವಿದ್ಯಾರ್ಥಿಯ ಪೋಷಕರಿಂದ ಮೇಲ್ವರ್ಗದ ವಿದ್ಯಾರ್ಥಿಗಳ ಮೇಲೆ ದೂರು

"ಕೋಟಾ ವಿದ್ಯಾರ್ಥಿ" ಎಂಬ ಕಾರಣಕ್ಕಾಗಿ ದೇವಂಗನ್ ಅವರನ್ನು ಅವರ ಹಿರಿಯ ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಸಂತ ಕೆ

ನಮ್ಮ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯಿಂದ ಸಾವಿರಾರು ಹತ್ಯೆಗಳಾಗಿವೆ, ಆಗುತ್ತಲೂ ಇವೆ. ಆದರೆ ಇನ್ನೂ ಕೂಡ ಜಾತಿ ಎಂಬ ವಿಷ ವರ್ತುಲಕ್ಕೆ ಸಿಲುಕಿ ಸಾವಿರಾರು ಜನರು ನೋವು, ಹಿಂಸೆ ಅನುಭವಿಸುತಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನಲ್ಲಿ 28 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಭಗವತ್ ದೇವಂಗನ್ ಅವರು ಹಾಸ್ಟೆಲ್ ಕೋಣೆಯ ಲ್ಲೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡರು.

"ಕೋಟಾ ವಿದ್ಯಾರ್ಥಿ" ಎಂಬ ಕಾರಣಕ್ಕಾಗಿ ದೇವಂಗನ್ ಅವರನ್ನು ಅವರ ಹಿರಿಯ ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗಕ್ಕೆ ಸೇರಿದ ದೇವಂಗನ್, ಛತ್ತೀಸ್‌ ಘಡದ ಜಂಜಗೀರ್-ಚಂಪಾ ಜಿಲ್ಲೆಯ ರಹೌದ್ ಗ್ರಾಮದವರಾಗಿದ್ದು, ಕೆಲವೇ ತಿಂಗಳ ಹಿಂದೆ ಮೊದಲ ವರ್ಷದ ಪಿಜಿ ಆರ್ಥೋಪೆಡಿಕ್ ಕೋರ್ಸ್‌ನಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿಕೊಂಡರು. ದೇವಂಗನ್ ತಮ್ಮ ಜೀವನವನ್ನು ಅಂತ್ಯಗೊಳಿಸಿ 10 ದಿನಗಳು ಕಳೆದಿವೆ. ಆದಾಗ್ಯೂ, ಪೊಲೀಸರು ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆ ಮಾತ್ರ ನಡೆಸಿದ್ದಾರೆ ಮತ್ತು ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಪ್ರಾಥಮಿಕ ವಿಚಾರಣೆಯಲ್ಲಿ ಜಾತಿ ತಾರತಮ್ಯದ ಸಾಕ್ಷ್ಯ ಕಂಡು ಬಂದಿಲ್ಲ ಎಂದು ಜಬಲ್ಪುರದ ಗರ್ಹಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಹೇಳಿದ್ದಾರೆ. ನಾನು ಮಾತ್ರವಲ್ಲ, ಹಲವಾರು ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ನಮಗೆ ಯಾವುದೇ ಜಾತಿ ವೈ಼ಷಮ್ಯ ಕಂಡುಬಂದಿಲ್ಲ ಆದರೆ ನಾವು ರ್ಯಾಗಿಂಗ್‌ ಆರೋಪವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಆರೋಪಿಗಳು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ಹಲವಾರು ಹೇಳಿಕೆಗಳನ್ನು ದಾಖಲಿಸಿದ್ದೇವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದಾಗ್ಯೂ, ದೇವಂಗನ್ ಅವರ ಸಹೋದರ ಮತ್ತು ಸ್ನೇಹಿತರು, ಅವರು ಬಡ ಮತ್ತು ಕೆಳಜಾತಿಯ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದಾಗಿ ಅವರು ತಮ್ಮ ಹಿರಿಯ ವಿದ್ಯಾರ್ಥಿಗಳಿಂದ ಆಗಿರುವ ಕಿರುಕುಳದ ಬಗ್ಗೆ ಹಲವಾರು ಸಂದರ್ಭಗಳಲ್ಲಿ ದೂರು ನೀಡಿದ್ದರು ಎಂದು ಹೇಳಿದರು. ದೇವಂಗನ್ ಅವರ ಸಹೋದರ ಪ್ರಹ್ಲಾದ್ ಅವರು ಪೋಲೀಸರಿಗೆ ನೀಡಿರುವ ತಮ್ಮ ಎರಡು ಪುಟಗಳ ದೂರಿನಲ್ಲಿ ಐದು ವ್ಯಕ್ತಿಗಳನ್ನು ಹೆಸರಿಸಿದ್ದಾರೆ. ಅವರಲ್ಲಿ, ಒಬ್ಬ ವ್ಯಕ್ತಿ ಬ್ರಾಹ್ಮಣ ಜಾತಿಗೆ ಸೇರಿದವನು, ಇನ್ನೊಬ್ಬ ಮುಸ್ಲಿಂ ಮತ್ತು ಇತರ ಮೂವರು ಹಿಂದುಳಿದ ಜಾತಿ ಗೆ ಸೇರಿದವರು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಅಕ್ಟೋಬರ್ 1 ರಂದು, ದೇವಂಗನ್ ಅವರ ಸಹೋದರ ಪ್ರಹ್ಲಾದ್ ಅವರು ಬೆಳಿಗ್ಗೆ ದೇವಾಂಗನ್ ಅವರನ್ನು ತಮ್ಮ ಫೋನ್‌ನಲ್ಲಿ ಕರೆ ಮಾಡಿ ಮಾತಾಡಿದರು ಎಂದು ಹೇಳಿದರು. ಆದರೆ ಮದ್ಯಾಹ್ನ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ‌. ಪ್ರಹ್ಲಾದ್ ಅವರು ತಕ್ಷಣವೇ ದೇವಂಗನ್ ಅವರ ಸ್ನೇಹಿತ ಸುಮಿತ್ ಅವರಿಗೆ ಕರೆ ಮಾಡಿದರು. ನಂತರ ಕೊಠಡಿ ಒಡೆದು ನೋಡಿದಾಗ ಅತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆ ಆಯಿತು ಎಂದು ಹೇಳಿದರು.

ಈ ಹಿಂದೆ ಅನೇಕ ಬಾರಿ ಹಿರಿಯ ವಿದ್ಯಾರ್ಥಿಗಳಿಂದ ಅವಮಾನ ಹಿಂಸೆಗೆ ತುತ್ತಾಗಿರುವುದನ್ನು ದೇವಾಂಗನ್‌ ಅವರು ತಮ್ಮೊಂದಿಗೆ ಹೇಳಿಕೊಂಡಿದ್ದರು ಎಂದು ಸಮಿತ್‌ ಮತ್ತು ಪ್ರಹ್ಲಾದ್‌ ತಿಳಿಸಿದರು. ಈ ಕುರಿತು ಕಾಲೇಜಿನಲ್ಲಿರುವ ರ್ಯಾಗಿಂಗ್‌ ವಿರೋಧಿ ಸಮಿತಿಗೂ ದೂರು ನೀಡಲಾಯಿತು. ಆದರೆ ಸಮಿತಿಯು ರ್ಯಾಗಿಂಗ್‌ನ ಘಟನೆಯನ್ನು ನಿರಾಕರಿಸಿತು. ಸಮಿತಿಯ ಸದಸ್ಯರಾಗಿರುವ ವೈದ್ಯ ಅರವಿಂದ ಶರ್ಮಾ, ರ್ಯಾಗಿಂಗ್ ಮತ್ತು ಜಾತಿ ತಾರತಮ್ಯದ ಬಗ್ಗೆ ದೇವಂಗನ್ ಅವರ ಕುಟುಂಬದ ಹೇಳಿಕೆಯನ್ನು ತಳ್ಳಿ ಹಾಕಿದರು. ಇದಲ್ಲದೆ ಇದು ರ್ಯಾಗಿಂಗ್‌ ಕುರಿತು ಸಮಿತಿಗೆ ನೀಡಿದ ಮೊದಲ ದೂರು ಅಲ್ಲ ಎಂದು ಪ್ರಹ್ಲಾದ್ ಹೇಳಿದರು. ಭಗವತ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವು ವಾರಗಳ ಮೊದಲು, ಅವರು ಕಾಲೇಜು ಅಧಿಕಾರಿಗಳಿಗೆ ಅನಾಮಧೇಯವಾಗಿ ದೂರು ನೀಡಿದ್ದರು. ಈ ದೂರನ್ನು ಆನ್‌ಲೈನ್‌ನಲ್ಲಿ ಕಳಿಸಲಾಗಿತ್ತು. . ಆದರೆ ಕಾಲೇಜು ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಆರೋಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅರವಿಂದ ಶರ್ಮಾ ಅವರು, ಕೆಲವು ತಿಂಗಳ ಹಿಂದೆ ದೂರು ಬಂದಿದೆ ಆದರೆ ಅದು ದೇವಂಗನ್ ಅವರದ್ದೇ ಎಂದು ಹೇಳಲು ಸಾಧ್ಯವಿಲ್ಲ. ದೂರು ಬಂದ ನಂತರ ಸಮಿತಿ ಸಭೆ ಸೇರಿತ್ತು. ಆದರೆ ನಮಗೆ ಯಾವುದೇ ಪುರಾವೆಗಳು ಸಿಗದ ಕಾರಣ, ಪ್ರಕರಣವನ್ನು ಮುಂದುವರೆಸಲು ಸಾದ್ಯವಾಗಲಿಲ್ಲ ಎಂದು ಹೇಳಿದರು.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸೆಕ್ಷನ್ 6 (4) (1) (ವೈದ್ಯಕೀಯ ಕಾಲೇಜುಗಳು/ಸಂಸ್ಥೆಗಳಲ್ಲಿ ರ್ಯಾಗಿಂಗ್ ತಡೆಗಟ್ಟುವಿಕೆ ಮತ್ತು ನಿಷೇಧ) ನಿಯಮಗಳ ಪ್ರಕಾರ, ಒಂದು ಸಮಿತಿಯನ್ನು ರಚಿಸಬೇಕು ಮತ್ತು ಕಾಲೇಜು ಅಧಿಕಾರಿಗಳು, ನಾಗರಿಕ ಸಮಾಜದ ಸದಸ್ಯರು, ಪೊಲೀಸ್ ಆಡಳಿತ, ಎನ್‌ಜಿಒಗಳು ಮತ್ತು ಸ್ಥಳೀಯ ಮಾಧ್ಯಮಗಳನ್ನು ಸಹ ಸೇರಿಸಿರಬೇಕು. ಈ ಸಮಿತಿಯೂ ಇದೆ.

ಆದರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಎಚ್‌ಒ ತಿವಾರಿ ಕೂಡ ಸಮಿತಿಯಲ್ಲಿದ್ದಾರೆ. ಕಳೆದ ಜುಲೈ 24 ರಂದು, ದೇವಂಗನ್ ಅವರು ವಿಮಾನ ನಿಲ್ದಾಣದಿಂದ ಸ್ನೇಹಿತ ಸುಮಿತ್‌ ಗೆ ಕರೆ ಮಾಡಿ ವೈದ್ಯಕೀಯ ಕಾಲೇಜಿನಿಂದಲೇ ಓಡಿ ಹೋಗುವುದಾಗಿ ಹೇಳಿದ್ದರು ಎಂದು ಸುಮಿತ್ ಹೇಳಿದ್ದಾರೆ. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಮತ್ತು ನಿದ್ರೆ ಮಾತ್ರೆ ಸೇವಿಸಿದ್ದರು. ಕೂಡಲೇ ಅವರನ್ನು ಅವರದೇ ವೈದ್ಯಕೀಯ ಕಾಲೇಜಿಗೆ ಕರೆದೊಯ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ್ಯೂ, ಕಾಲೇಜು ದೂರು ದಾಖಲಿಸಲಿಲ್ಲ. ಬದಲಿಗೆ ಮನೋವೈದ್ಯಕೀಯ ಚಿಕಿತ್ಸೆಗೆ ಮಾತ್ರ ಶಿಫಾರಸು ಮಾಡಲಾಗಿದೆ ಎಂದು ಸುಮಿತ್ ಹೇಳಿದರು. ಸುಮಿತ್ ಮತ್ತು ದೇವಂಗನ್ ಆಪ್ತರಾಗಿದ್ದರು ಮತ್ತು ಪುಣೆಯ ಬಿ.ಜೆ. ವೈದ್ಯಕೀಯ ಕಾಲೇಜಿನಲ್ಲಿ ಒಟ್ಟಿಗೆ ಎಂಬಿಬಿಎಸ್ ಅಧ್ಯಯನ ಮಾಡಿದ್ದರು.

ದೇವಂಗನ್ ಅವರ ಕುಟುಂಬವು ಅವರ ಖಿನ್ನತೆ ಮತ್ತು ಒಂಟಿತನದ ಬಗ್ಗೆ ಆರೋಪಗಳನ್ನು ನಿರಾಕರಿಸಿದೆ. ನನ್ನ ಸಹೋದರನು ಆರನೇ ತರಗತಿಯಿಂಧಳೂ ಒಂಟಿಯಾಗೆ ಇರುತ್ತಿದ್ದನು. ಅವನು ಸ್ವಾವಲಂಬಿಯಾಗಿದ್ದನು. ಜಬಲ್ಪುರಕ್ಕೆ ಬಂದ ನಂತರವೇ ಅವನು ತುಂಬಾ ಅವಮಾನ ಮತ್ತು ತಾರತಮ್ಯವನ್ನು ಎದುರಿಸಬೇಕಾಯಿತು ಎಂದು ಪ್ರಹ್ಲಾದ್ ಹೇಳಿದರು. ದೇವಂಗನ್ ಅವರನ್ನು ಮಾನಸಿಕವಾಗಿ ಹಿಂಸಿಸುವುದರ ಜೊತೆಗೆ, ಆರೋಪಿಗಳು ಸಹ ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಜುಲೈ ಘಟನೆಯ ನಂತರ ನಾವು ಅವನನ್ನು ಕೆಲವು ವಾರಗಳವರೆಗೆ ಮನೆಗೆ ಕರೆತಂದೆವು. ಅವರು ಶೀಘ್ರದಲ್ಲೇ ಗುಣಮುಖನಾಗುತ್ತಾನೆ ಎಂದು ನಾವು ಭಾವಿಸಿದ್ದೆವು. ಅದರೆ ಕಾಲೇಜಿನಲ್ಲಿ ಪರಿಸ್ಥಿತಿ ಕೆಟ್ಟದಾಗಿವೆ ಎಂದು ನಮಗೆ ತಿಳಿದಿತ್ತು ಆದರೆ ಅದು ಅಂತಿಮವಾಗಿ ನಮ್ಮ ಮಗನನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಗೊತ್ತಿರಲಿಲ್ಲ‌ ಮೃತರ ಕುಟುಂಬಸ್ಥರು ಹೇಳಿದರು. ಭಗವತ್ ನಮ್ಮ ಸಮುದಾಯಕ್ಕೆ ಮಾತ್ರ ಮೊದಲ ವೈದ್ಯರಲ್ಲ‌. ನಮ್ಮ ಇಡೀ ಹಳ್ಳಿಗೇ ಅವರು ಮೊದಲ ವೈದ್ಯರು ಎಂದು ಹೇಳಿದ ಪ್ರಹ್ಲಾದ್‌ ದೊಡ್ಡ ಕನಸು ಕಾಣಲು ನಾವು ಇಷ್ಟು ದೊಡ್ಡ ಬೆಲೆಯನ್ನು ಪಾವತಿಸಬೇಕಾಗಿರುವುದು ನಮಗೆ ಗೊತ್ತಿರಲಿಲ್ಲ ಎಂದು ಕಣ್ಣೀರಿಟ್ಟರು. ಇಂತಹ ಘಟನೆಗಳು ಇನ್ನು ಮುಂದಕ್ಕೆ ನಡೆದಿರುವಂತೆ ನೋಡಿಕೊಳ್ಳಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com