ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು

ಸಾಕ್ಷಿಗಳನ್ನು ಗುಪ್ತ ನಾಮದಿಂದ ಗುರುತಿಸಲಾಗುತಿತ್ತು. ಆದರೆ ಈ ಪ್ರಕರಣದಲ್ಲಿ 15 ಜನ ಸಾಕ್ಷಿದಾರರ ಹೆಸರು ಮತ್ತು ವಿಳಾಸಗಳನ್ನು ಬಹಿರಂಗಪಡಿಸುವ ಮೂಲಕ ಗಂಭಿರ ಲೋಪ ಎಸಗಿದೆ.
ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು

ದೆಹಲಿಯಲ್ಲಿ ನಡೆದ ಕೋಮು ಗಲಭೆಯ ಹಿನ್ನೆಲೆಯಲ್ಲಿ ಪೋಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಛಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಮಾರು 53 ಜನರನ್ನು ಬಲಿ ಪಡೆದುಕೊಂಡ ಈ ಭೀಕರ ಕೋಮು ಗಲಭೆಯಲ್ಲಿ ಮೃತರೆಲ್ಲರೂ ಅಮಾಯಕರೇ ಅಗಿದ್ದರು. ಆದರೆ ಪೋಲೀಸ್ ಇಲಾಖೆ ಸಾಕ್ಷಿಗಳ ಗೌಪ್ಯತೆ ಕಾಪಾಡದೆ ಬಹಿರಂಗಪಡಿಸಿರುವುದು ವ್ಯಾಪಕ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು
ದೆಹಲಿ ಗಲಭೆ: ತನಿಖೆಯಲ್ಲಿ ನಡೆಯುತ್ತಿದೆಯೇ ತಾರತಮ್ಯ? 

ದೆಹಲಿ ಪೋಲೀಸರ ವಿಶೇಷ ಘಟಕವು ಕಳೆದ ಬಾರಿ ದೆಹಲಿಯಲ್ಲಿ ನಡೆದ ಕೋಮುಗಲಭೆಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅರೋಪಿಗಳ ವಿರುದ್ದ ಛಾರ್ಜ್ ಶೀಟ್ ಜತೆಗೆ ಸಾಕ್ಷಿಗಳ ಪಟ್ಟಿಯನ್ನೂ ಸಲ್ಲಿಸಿದೆ. ಎಲ್ಲಾ ಕೋಮು ಗಲಭೆ ಪ್ರಕರಣಗಳಲ್ಲೂ ಸಾಕ್ಷಿಗಳ ಹೆಸರು ವಿಳಾಸಗಳನ್ನು ಪೋಲೀಸ್ ಇಲಾಖೆ ಎಂದಿಗೂ ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಸಾಕ್ಷಿಗಳನ್ನು ಗುಪ್ತ ನಾಮದಿಂದ ಗುರುತಿಸಲಾಗುತಿತ್ತು. ಈ ಪ್ರಕರಣದಲ್ಲಿ 15 ಜನ ಸಾಕ್ಷಿದಾರರ ಹೆಸರು ಮತ್ತು ವಿಳಾಸಗಳನ್ನು ಬಹಿರಂಗಪಡಿಸುವ ಮೂಲಕ ಗಂಭಿರ ಲೋಪ ಎಸಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆಗಳು ಹೆಚ್ಚಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಪ್ರಕರಣ ಸಂಖ್ಯೆ 59/2020 ರಲ್ಲಿ ಪೋಲೀಸರು ಒಟ್ಟು 15 ಸಾಕ್ಷಿದಾರರನ್ನು ಹೆಸರಿಸಿದ್ದು ಅವರಲ್ಲಿ 4 ಹಿಂದೂಗಳು ಮತ್ತು 11 ಮುಸ್ಲಿಮರಿದ್ದಾರೆ. ಈಗಾಗಲೇ ಆರೋಪಿಗಳು ಛಾರ್ಜ್ ಶೀಟ್ ನ ನಕಲು ಪ್ರತಿಗಳನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಹೆಸರು ಬಹಿರಂಗಪಡಿಸಿರುವುದು ನಿಜಕ್ಕೂ ಪೋಲೀಸ್ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಯನ್ನು ಉಂಟುಮಾಡುತ್ತದೆ. ದೆಹಲಿ ಪೊಲೀಸರ ತನಿಖೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಾಗರಿಕರಿಗೆ ಒದಗಿಸುತ್ತಿರುವ ಭದ್ರತೆಯ ಗುಣಮಟ್ಟದ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು
ದೆಹಲಿ ಗಲಭೆ: ಸತ್ಯಶೋಧನಾ ವರದಿಯಲ್ಲಿನ ಸುಳ್ಳುಗಳ ಸರಮಾಲೆ| ಭಾಗ - 1

ಕಳೆದ ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆಗಳು ನಾಲ್ಕು ದಿನಗಳ ಕಾಲ ದೆಹಲಿಯನ್ನೇ ಭಯಬೀತವನ್ನಾಗಿಸಿದ್ದವು. ಈ ಗಲಭೆ ಒಬ್ಬ ಪೊಲೀಸ್ ಸೇರಿದಂತೆ 53 ಜೀವಗಳನ್ನು ಬಲಿ ಪಡೆಯಿತು. ಈ ಗಲಭೆಯಲ್ಲಿ ಕೊಲ್ಲಲ್ಪಟ್ಟ ನಾಗರಿಕರಲ್ಲಿ 40 ಮಂದಿ ಮುಸ್ಲಿಮರು ಮತ್ತು 12 ಮಂದಿ ಹಿಂದೂಗಳು ಆಗಿದ್ದಾರೆ. ಹಿಂಸಾಚಾರದ ಸ್ಪಷ್ಟವಾಗಿ ಉದ್ದೇಶಿತ ಸ್ವರೂಪ ಮತ್ತು ಗಲಭೆಗಳವರೆಗೆ ದ್ವೇಷ ಭಾಷಣ ಮಾಡುವಲ್ಲಿ ಹಿಂದುತ್ವ ರಾಜಕಾರಣಿಗಳ ಪಾತ್ರದ ಹೊರತಾಗಿಯೂ, ದೆಹಲಿ ಪೊಲೀಸರು ಪೌರತ್ವ ತಿದ್ದುಪಡಿ ವಿರುದ್ಧದ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾದ ಹಲವಾರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ಪೊಲೀಸರು ಸಲ್ಲಿಸಿದ 17,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ದೇಶಕ್ಕೆ ಅಪಖ್ಯಾತಿ ತರಲು ಸಂಚು ರೂಪಿಸಲಾಗಿದೆ ಎಂದು ಅದು ಆರೋಪಿಸಿದೆ.

ಕಳೆದ ಜೂನಿನಲ್ಲಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ, ದೆಹಲಿ ಪೊಲೀಸ್ ವಿಶೇಷ ಪ್ರಾಸಿಕ್ಯೂಟರ್ ಈ ಸಾಕ್ಷಿಗಳು ಬಂಧಿತ ಆರೋಪಿಗಳು ನಡೆಸಿದ ದೊಡ್ಡ ಪಿತೂರಿಗೆ ಸಂಬಂಧಿಸಿದ ಸಂಗತಿಗಳನ್ನು ಹೇಳಿದ್ದಾರೆ ಮತ್ತು ಬಂಧಿಸಲ್ಪಟ್ಟವರಲ್ಲದೆ ಇತರ ಕೆಲವು ವ್ಯಕ್ತಿಗಳೂ ಗಲಭೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ತಿಳಿಸಿದ್ದಾರೆ. ಈ ಬಹುತೇಕ ಸಾಕ್ಷಿಗಳು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಪರಿಚಿತರಾಗಿರುವುದರಿಂದ ಆರೋಪಿಗಳಿಂದ ತಮ್ಮ ಜೀವಕ್ಕೆ ಭಯ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು, ಅವರಲ್ಲಿ ಕೆಲವರು ತಮ್ಮ ಸುರಕ್ಷತೆಗೆ ಬೆದರಿಕೆಯ ಬಗ್ಗೆ ಲಿಖಿತವಾಗಿ ದೂರನ್ನೂ ಪೋಲೀಸರಿಗೆ ನೀಡಿದ್ದಾರೆ. ಅವರ ಸುರಕ್ಷತೆಯ ಉದ್ದೇಶಕ್ಕಾಗಿ ಈ ಸಾಕ್ಷಿಗಳಿಗೆ ಅವರ ಗುರುತನ್ನು ಮರೆಮಾಚಲು ಹುಸಿ ಹೆಸರುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು
ದೆಹಲಿ ಗಲಭೆ: ʼಸತ್ಯʼಶೋಧನಾ ವರದಿಯಲ್ಲಿ ಬುಡಮೇಲಾದ ಘಟನಾವಳಿಗಳ ವಿಶ್ಲೇಷಣೆ | ಭಾಗ-2

ಈ ಸಾಕ್ಷಿಗಳಲ್ಲಿ ಕೆಲವರು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 161 ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಿದ್ದಾರೆ ಮತ್ತು ಇತರರು ಸೆಕ್ಷನ್ 164 ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದಾರೆ. ಚಾರ್ಜ್‌ಶೀಟ್‌ ದಾಖಲೆಗಳಲ್ಲಿ ಅಂಕಿಅಂಶಗಳು - ನಂತರ ಅವರ ಪೂರ್ಣ ಹೆಸರುಗಳು ಮತ್ತು ವಿಳಾಸಗಳು ಮತ್ತು ಅದಕ್ಕೆ ಅನುಗುಣವಾದ ‘ಹುಸಿ ಹೆಸರಿ’ನೊಂದಿಗೆ ರಕ್ಷಣೆ ಅಗತ್ಯವಿರುವ ಸಾಕ್ಷಿಗಳನ್ನು ಪಟ್ಟಿ ಮಾಡುತ್ತದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 44 ರ ಪ್ರಕಾರ ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಅವರ ಹೆಸರುಗಳಿಗೆ ವಿರುದ್ಧವಾಗಿ, ಮೇಲೆ ತಿಳಿಸಲಾದ ಸಾರ್ವಜನಿಕ ಸಾಕ್ಷಿಗಳ ಗುರುತನ್ನು ಹುಸಿ ಹೆಸರುಗಳೊಂದಿಗೆ ಗುರುತಿಸುವಂತೆ ಗೌಪ್ಯವಾಗಿಡಬೇಕೆಂದು ವಿನಂತಿಸಿಕೊಂಡಿದ್ದಾರೆ.

ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು
ದೆಹಲಿ ಗಲಭೆ: ಸತ್ಯಶೋಧನಾ ವರದಿಯಲ್ಲಿನ ಸುಳ್ಳುಗಳ ಸರಮಾಲೆ| ಭಾಗ - 1

ಚಾರ್ಜ್‌ಶೀಟ್‌ ಸಾರ್ವಜನಿಕ ದಾಖಲೆಯಾಗಿದ್ದರೂ ಮತ್ತು ಅದರ ಪ್ರತಿಗಳು ಎಲ್ಲಾ ಆರೋಪಿಗಳು ಮತ್ತು ಅವರ ವಕೀಲರ ಜೊತೆಗೆ ಮಾಧ್ಯಮಗಳು ಮತ್ತು ಇತರರ ಬಳಿ ಇದ್ದರೂ, ತಮ್ಮ ಗುರುತನ್ನು ರಕ್ಷಿಸುವ ಸಲುವಾಗಿ 15 'ಸಾರ್ವಜನಿಕ ಸಾಕ್ಷಿಗಳ' ಹೆಸರು ಮತ್ತು ವಿಳಾಸಗಳನ್ನು ಇಲ್ಲಿ ಪ್ರಕಟಿಸುತ್ತಿಲ್ಲ. ಅಲ್ಲದೆ ದೆಹಲಿ ಪೊಲೀಸ್ ವಿಶೇಷ ಘಟಕ ಸಲ್ಲಿಸಿರುವ ಚಾರ್ಜ್‌ಶೀಟ್‌ ನ ವಿಭಾಗದ ಮಾಹಿತಿಯನ್ನು ಸಹ ತಡೆಹಿಡಿಯಲಾಗಿದೆ. ಈ ಪ್ರಕರಣಕ್ಕೆ ದೆಹಲಿ ಪೊಲೀಸರು ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸಿದರೆ, ರಹಸ್ಯ ಸಾಕ್ಷಿಗಳ ಗುರುತು ಸೋರಿಕೆಯಾದ ಸಾಂದರ್ಭಿಕ ವಿಧಾನವು ಅದರ ತನಿಖೆಯ ಸಾಮರ್ಥ್ಯದ ಬಗ್ಗೆ ಮಾತ್ರವಲ್ಲದೆ ಅದರ ನಿರ್ದೇಶನದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಸಾಕ್ಷಿಗಳು ತುಂಬಾ ನಿರ್ಣಾಯಕವಾಗಿದ್ದರೆ, ಪೊಲೀಸರು ತಮ್ಮ ಗುರುತನ್ನು ಚಾರ್ಜ್‌ಶೀಟ್‌ ನಲ್ಲಿ ಬಹಿರಂಗಪಡಿಸುವ ಮೂಲಕ ಅವರ ಜೀವವನ್ನು ಅಪಾಯಕ್ಕೆ ತಳ್ಳಲು ಏಕೆ ಅವಕಾಶ ಮಾಡಿಕೊಟ್ಟಿದ್ದಾರೆ, ಇದು ಮೂಲಭೂತವಾಗಿ ಸಾರ್ವಜನಿಕ ದಾಖಲೆಯಾಗಿದೆ. ಅಥವಾ ಈ ‘ಸಾಕ್ಷಿಗಳ’ ಸುರಕ್ಷತೆಯ ಬಗೆಗಿನ ಈ ಅಧಿಕೃತ ನಿರ್ಲಕ್ಷ್ಯವು ಪೊಲೀಸರ ಬಗೆಗೆ ಅಪನಂಬಿಕೆ ಬರುವಂತೆ ಮಾಡಿದೆ. ಅವರ ಸಾಕ್ಷ್ಯವು ವಿಶ್ವಾಸಾರ್ಹವಲ್ಲ ಮತ್ತು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ಪೋಲೀಸರು ಪರಿಗಣಿಸಿದ್ದಾರೆಯೆ ಎಂಬ ಪ್ರಶ್ನೆ ಮೂಡಿದೆ.

ಪೊಲೀಸರಿಂದ ಸಾಕ್ಷಿಗಳ ಗುರುತು ಬಹಿರಂಗ; ಜೀವ ಭಯದಲ್ಲಿ ದೆಹಲಿ ಗಲಭೆ ಸಾಕ್ಷಿಗಳು
ದೆಹಲಿ ಕೋಮು ಹತ್ಯಾಕಾಂಡದ ಹಿಂದೆ ಪ್ರಭುತ್ವದ ಕೈ?: ಇದು ಪ್ರಜಾತಂತ್ರದ ಕಗ್ಗೊಲೆ – Part 1

ಈ ಹಿನ್ನೆಲೆಯಲ್ಲಿ ದೆಹಲಿ ಮೂಲದ, ದಿ ವೈರ್ ಸುದ್ದಿ ಮಾಧ್ಯಮ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರಿಗೆ ತಮ್ಮ ಪೋಲೀಸ್ ದಳವು ಮಾಡಿದ ಕೆಲಸಗಳ ಬಗ್ಗೆ ನಾಲ್ಕು ಪ್ರಶ್ನೆಗಳನ್ನು ಕಳಿಸಿಕೊಟ್ಟಿದೆ.

  1. ದೆಹಲಿ ಪೊಲೀಸರು [ಸಾಕ್ಷಿಗಳ ಬಗ್ಗೆ] ಮಾಹಿತಿಯನ್ನು ಆರೋಪಿಗಳಿಗೆ ಹಸ್ತಾಂತರಿಸಿದ್ದಾರೆ/ಸಾರ್ವಜನಿಕಗೊಳಿಸಿದ್ದಾರೆ ಎಂಬ ಅಂಶ ನಿಮಗೆ ತಿಳಿದಿದೆಯೇ?

  2. 15 ಸಾಕ್ಷಿಗಳು ಇನ್ನು ಮುಂದೆ ಯಾವುದೇ ಬೆದರಿಕೆಯನ್ನು ಎದುರಿಸುವುದಿಲ್ಲ ಮತ್ತು ಆದ್ದರಿಂದ ಈ ಅವರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ ಎಂದು ದೆಹಲಿ ಪೊಲೀಸರು ಭಾವಿಸಿದ್ದಾರೆಯೇ ?

  3. ದೆಹಲಿ ಪೊಲೀಸರು ಇನ್ನೂ ಬೆದರಿಕೆ ಇದೆ ಎಂದು ನಂಬಿರುವ ಸಂದರ್ಭದಲ್ಲಿ, 15 ಸಾರ್ವಜನಿಕ ಸಾಕ್ಷಿಗಳ ಸುರಕ್ಷತೆಗಾಗಿ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಬಯಸುತ್ತೀರಿ?

  4. ಬೆದರಿಕೆ ಇದೆ ಎಂದು ನೀವು ಇನ್ನೂ ನಂಬಿರುವ ಸಂದರ್ಭದಲ್ಲಿ, ಈ ಮಾಹಿತಿಯನ್ನು ಚಾರ್ಜ್‌ಶೀಟ್‌ ನಲ್ಲಿ ಸಲ್ಲಿಸಲು ಅನುಮತಿ ನೀಡಿದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್ಗಳ ವಿರುದ್ಧ ದೆಹಲಿ ಪೊಲೀಸರು ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆಯೇ?

ಆದರೆ ದೆಹಲಿ ಪೋಲೀಸ್ ಕಮೀಷನರ್ ಅವರು ಇನ್ನೂ ಈ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com