ರಿಪಬ್ಲಿಕ್‌ ಟಿವಿ ಮತ್ತು ಟೌಮ್ಸ್‌ ನೌ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ಬಾಲಿವುಡ್‌ ಘಟಾನುಘಟಿಗಳು

ಕರಣ್‌ ಜೋಹರ್‌ ನಿರ್ಮಾಣ ಸಂಸ್ಥೆ, ಶಾರುಖ್‌ ಖಾನ್‌ ನಿರ್ಮಾಣ ಸಂಸ್ಥೆ, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಆಮಿರ್‌ ಖಾನ್‌ ಸೇರಿದಂತೆ ಇನ್ನೂ ಹಲವು ಘಟಾನುಘಟಿಗಳು ಸೇರಿ ಎರಡು ದೃಶ್ಯ ಮಾಧ್ಯಮದ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದಾರೆ.
ರಿಪಬ್ಲಿಕ್‌ ಟಿವಿ ಮತ್ತು ಟೌಮ್ಸ್‌ ನೌ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ಬಾಲಿವುಡ್‌ ಘಟಾನುಘಟಿಗಳು

ರಾಷ್ಟ್ರೀಯ ಮಾಧ್ಯಮಗಳು ಮತ್ತು ಬಾಲಿವುಡ್‌ ನಡುವಿನ ಜಟಾಪಟಿ ಈಗ ಕೋರ್ಟ್‌ ಮೆಟ್ಟಿಲೇರಿದೆ. ಸುಶಾಂತ್‌ ಸಿಂಗ್‌ ಸಾವಿನ ನಂತರ ಬಾಲಿವುಡ್‌ನಲ್ಲಿದ್ದ ʼನೆಪೊಟಿಸಂʼನ ಕುರಿತು ಸರಣಿ ಕಾರ್ಯಕ್ರಮಗಳನ್ನು ನೀಡಿದ ನಂತರ, ಮಾಧ್ಯಮಗಳ ಗಮನ ಡ್ರಗ್ಸ್‌ ಕಡೆಗೆ ಹೊರಳಿತ್ತು. ಕೆಲವು ದೃಶ್ಯ ಮಾಧ್ಯಮಗಳ ʼಬೇಜವಾಬ್ದಾಯುತ ವರದಿಗಾರಿಕೆʼಯ ವಿರುದ್ದ, ಬಾಲಿವುಡ್‌ನ ಪ್ರಮುಖ ನಿರ್ಮಾಪಕರು ಹಾಗೂ ನಿರ್ದೇಶಕರು ಈಗ ದೆಹಲಿ ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೋರ್ಟ್‌ಗೆ ನೀಡಿರುವ ದೂರಿನಲ್ಲಿ ರಿಪಬ್ಲಿಕ್‌ ಟಿವಿಯ ಅರ್ನಾಬ್‌ ಗೋಸ್ವಾಮಿ ಮತ್ತು ಪ್ರದೀಪ್‌ ಭಂಡಾರಿ ಹಾಗೂ ಟೈಮ್ಸ್‌ ನೌ ಚಾನೆಲ್‌ನ ರಾಹುಲ್‌ ಶಿವಶಂಕರ್‌ ಮತ್ತು ನವಿಕಾ ಕುಮಾರ್‌ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಾಲಿವುಡ್‌ನ ನಾಲ್ಕು ಪ್ರಮುಖ ಸಂಘಟನೆಗಳು, 34 ನಿರ್ಮಾಪಕರು ಮತ್ತು ʼದ ಪ್ರೊಡ್ಯೂಸರ್ಸ್‌ ಗಿಲ್ಡ್‌ ಆಫ್‌ ಇಂಡಿಯಾʼ ದೂರನ್ನು ನೀಡಿದೆ. ಪ್ರೊಡ್ಯೂಸರ್ಸ್‌ ಗಿಲ್ಡ್‌ʼನಲ್ಲಿ ಒಟ್ಟು 130 ಸದಸ್ಯರಿದ್ದಾರೆ. ಒಟ್ಟಿನಲ್ಲಿ ಸಂಪೂರ್ಣ ಬಾಲಿವುಡ್‌ ಈಗ ಮಾಧ್ಯಮಗಳ ವಿರುದ್ದ ನಿಂತಿರುವಂತೆ ಭಾಸವಾಗುತ್ತಿದೆ. ಕರಣ್‌ ಜೋಹರ್‌ ನಿರ್ಮಾಣ ಸಂಸ್ಥೆ, ಶಾರುಖ್‌ ಖಾನ್‌ ನಿರ್ಮಾಣ ಸಂಸ್ಥೆ, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಆಮಿರ್‌ ಖಾನ್‌ ಸೇರಿದಂತೆ ಇನ್ನೂ ಹಲವು ಘಟಾನುಘಟಿಗಳ ಹೆಸರು ಇದರಲ್ಲಿ ಸೇರಿದೆ. ರಿಲಯನ್ಸ್‌ ಎಂಟರ್ಟೈನ್‌ಮೆಂಟ್‌ ಕೂಡಾ ದೂರಿನಲ್ಲಿ ಶಾಮೀಲಾಗಿದೆ.

ದೃಶ್ಯ ಮಾಧ್ಯಮಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್‌ ಸದಸ್ಯರ ವಿರುದ್ದ ಬೇಜವಾಬ್ದಾರಿತನದ, ಅವಹೇಳನಕಾರಿಯಾದ ಸುದ್ದಿಯನ್ನು ಬಿತ್ತರಿಸುವುದರಿಂದ ನಿರ್ಬಂಧ ಹೇರಬೇಕು ಎಂದು ಕೋರಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com