ದ್ವೇಷ ಹರಡುವ ಮಾಧ್ಯಮಗಳಿಗೆ ಜಾಹಿರಾತು ನೀಡದಿರಲು ಪಾರ್ಲೆ ನಿರ್ಧಾರ

ಪಾರ್ಲೆಗಿಂತಲೂ ಮೊದಲು, ಭಾರತೀಯ ನ್ಯೂಸ್‌ ಚಾನೆಲ್‌ಗಳ ವಿರುದ್ಧ ಬಜಾಜ್‌ ಸಂಸ್ಥೆ ಕೂಡಾ ಕಠಿಣ ನಿಲುವು ತಳೆದಿತ್ತು. CNBC-TV18 ನೊಂದಿಗೆ ಮಾತನಾಡಿದ್ದ ಬಜಾಜ್‌ ಮುಖ್ಯಸ್ಥ ರಾಜೀವ್‌ ಬಜಾಜ್‌ ಮೂರು ಸುದ್ದಿ ಸಂಸ್ಥೆಗಳನ್ನು ಕಂಪೆನಿಯು ಕಪ್ಪು ಪಟ್ಟಿ ...
ದ್ವೇಷ ಹರಡುವ ಮಾಧ್ಯಮಗಳಿಗೆ ಜಾಹಿರಾತು ನೀಡದಿರಲು ಪಾರ್ಲೆ ನಿರ್ಧಾರ

ಪಾರ್ಲೆ-ಜಿ ಬಿಸ್ಕೆತ್‌ ತಯಾರಕರಾದ ಪಾರ್ಲೆ ಹಾಗೂ ಬಜಾಜ್ ಸಂಸ್ಥೆಗಳು ವಿಷಕಾರಿ ಚಿಂತನೆಗಳನ್ನು, ಧ್ವೇಷವನ್ನು ಹರಡುವ ಹಾಗೂ ಟಿಆರ್‌ಪಿ ಹಗರಣದಲ್ಲಿ ಭಾಗಿಯಾದ ಭಾರತೀಯ ನ್ಯೂಸ್‌ ಚಾನೆಲ್‌ಗಳಿಗೆ ತಮ್ಮ ಜಾಹಿರಾತನ್ನು ನೀಡದಿರಲು ನಿರ್ಧಾರ ಮಾಡಿದೆ.

ಟಿಆರ್‌ಪಿ ಹಗರಣದಲ್ಲಿ ಭಾಗಿಯಾದ ಹಾಗೂ ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು, ವಿಚಾರಗಳನ್ನು ಹರಡುವ ನ್ಯೂಸ್‌ ಚಾನೆಲ್‌ಗಳಿಗೆ ಇನ್ನುಮುಂದೆ ಸಂಸ್ಥೆಯು ಜಾಹಿರಾತು ನೀಡುವುದಿಲ್ಲ ಎಂದು ತೀರ್ಮಾನಿಸಿದೆ ಎಂದು ಪಾರ್ಲೆಯ ಹಿರಿಯ ಮುಖ್ಯಸ್ಥ ಕೃಷ್ಣರಾವ್‌ ಬುದ್ದ ಹೇಳಿದ್ದಾರೆ.


ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತರ ಜಾಹಿರಾತುದಾರರು ಕೂಡಾ ಈ ನಿರ್ಧಾರ ತೆಗೆದುಕೊಂಡರೆ ವಿಷಕಾರಿ ವಿಷಯಗಳನ್ನು, ದ್ವೇಷವನ್ನು ಹರಡುವ ಸುದ್ದಿ ಸಂಸ್ಥೆಗಳು ತಮ್ಮ ಪ್ರಸಾರದ ವಿಷಯವನ್ನು ಬದಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಕೃಷ್ಣ ಬುದ್ಧ ಅಭಿಪ್ರಾಯಪಟ್ಟಿದ್ದಾರೆ.

ಟಿಆರ್‌ಪಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಸಂಸ್ಥೆ ಈ ನಿರ್ಧಾರವನ್ನು ತಳೆದಿದೆ.

ಪಾರ್ಲೆಗಿಂತಲೂ ಮೊದಲು, ಭಾರತೀಯ ನ್ಯೂಸ್‌ ಚಾನೆಲ್‌ಗಳ ವಿರುದ್ಧ ಬಜಾಜ್‌ ಸಂಸ್ಥೆ ಕೂಡಾ ಕಠಿಣ ನಿಲುವು ತಳೆದಿತ್ತು. CNBC-TV18 ನೊಂದಿಗೆ ಮಾತನಾಡಿದ್ದ ಬಜಾಜ್‌ ಮುಖ್ಯಸ್ಥ ರಾಜೀವ್‌ ಬಜಾಜ್‌ ಮೂರು ಸುದ್ದಿ ಸಂಸ್ಥೆಗಳನ್ನು ಕಂಪೆನಿಯು ಕಪ್ಪು ಪಟ್ಟಿಗೆ ಹಾಕಿದ್ದಾಗಿ ತಿಳಿಸಿದ್ದರು.

ಪಾರ್ಲೆಯ ಈ ಪ್ರಕಟನೆಯ ನಂತರ #ParleG ಹ್ಯಾಷ್‌ಟ್ಯಾಗ್‌ ಟ್ವಿಟರಿನಲ್ಲಿ ಟ್ರೆಂಡ್‌ ಆಗಿದ್ದು ʼಸಾಮಾಜಿಕ ಜವಾಬ್ದಾರಿಯುಳ್ಳ ಬ್ರಾಂಡ್‌ʼ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಸಂಸ್ಥೆಯನ್ನು ಮೆಚ್ಚಿಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com