TRP ಹಗರಣ: ವಿಚಾರಣೆಗೆ ಹಾಜರಾದ Republic TV ಮುಖ್ಯಸ್ಥರು

TRP ಹಗರಣದ ವಿಚಾರದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿ ಕಾಣುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
TRP ಹಗರಣ: ವಿಚಾರಣೆಗೆ ಹಾಜರಾದ Republic TV ಮುಖ್ಯಸ್ಥರು

TRP ಹಗರಣ ಪ್ರಕರಣದಲ್ಲಿ Republic TV ಯ ಸಿಇಒ ಹಾಗೂ ಸಿಒಒ ಅವರು ಮುಂಬೈ ಪೊಲೀಸರು ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಶನಿವಾರ ಇವರಿಬ್ಬರಿಗೂ ಸಮನ್ಸ್‌ ನೀಡಿದ್ದ ಮುಂಬೈನ ಕ್ರೈಂ ಬ್ಯಾಂಚ್‌, ಭಾನುವಾರದಂದು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.

CEO ಖಾನ್‌ಚಂದಾನಿಯನ್ನು ಒಟ್ಟು 9 ತಾನುಗಳ ಕಾಲ ಹಾಗೂ COO ಹರ್ಷ್‌ ಭಂಡಾರಿಯನ್ನು 5 ತಾಸುಗಲ ಕಾಲ ವಿಚಾರಣೆ ನಡೆಸಲಾಗಿದೆ. ರಿಪಬ್ಲಿಕ್‌ ಟಿವಿಯ ಪ್ರಸಾರಣಾ ಮುಖ್ಯಸ್ಥ ಘನಶ್ಯಾಮ ಸಿಂಗ್‌ ಅವರ ಹೇಳಿಕೆಯನ್ನು ಕೂಡಾ ದಾಖಲಿಸಲಾಗಿದೆ.

ಈ ಹಗರಣದ ವಿಚಾರದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿ ಕಾಣುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಟಿಆರ್‌ಪಿಯನ್ನು ಅಳೆಯುವ ಸಂಸ್ಥೆ BARCಯು ಟಿಆರ್‌ಪಿ ತಿರುಚಲಾಗುತ್ತಿದೆ ಎನ್ನುವ ಕುರಿತು ದೂರು ದಾಖಲಿಸಿದ ನಂತರ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com