ದೇಶದ ಕೃಷಿ ಇಲಾಖೆಗೆ ತುರ್ತಾಗಿ ಬೇಕಾಗಿದೆ ಸಮಗ್ರ ಅಂಕಿ ಅಂಶ ಸಂಗ್ರಹಣಾ ವ್ಯವಸ್ಥೆ
ರಾಷ್ಟ್ರೀಯ

ದೇಶದ ಕೃಷಿ ಇಲಾಖೆಗೆ ತುರ್ತಾಗಿ ಬೇಕಾಗಿದೆ ಸಮಗ್ರ ಅಂಕಿ ಅಂಶ ಸಂಗ್ರಹಣಾ ವ್ಯವಸ್ಥೆ

ಕೃಷಿ ಬೆಳೆಗಳಿಗಿಂತ ಭಿನ್ನವಾಗಿ, ದತ್ತಾಂಶ ಸಂಗ್ರಹಣೆ ಮತ್ತು ಹಾಲಿನ ದೈನಂದಿನ ಬೆಲೆಯನ್ನು ಪ್ರಸಾರ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ ದೇಶದ ನಿಖರ ಉತ್ಪಾದನೆ ಮತ್ತು ಹೋಲಿಕೆ ಸಾದ್ಯವೇ ಆಗುವುದಿಲ್ಲ.

ವಸಂತ ಕೆ

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಕೃಷಿಯೇ ಮೂಲ ಉದ್ಯೋಗ ಎಂದು ಗುರುತಿಸಿಕೊಂಡಿದ್ದು ಕೃಷಿ ರಂಗವು ಇಂದೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಕೇಂದ್ರ ಸರ್ಕಾರ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದರೂ ಕೃಷಿ ರಂಗವು ಇನ್ನೂ ಸಂಪೂರ್ಣ ಡಿಜಿಟಲೀಕರಣಗೊಂಡಿಲ್ಲ. ಕೃಷಿ ಇಲಾಖೆಯಲ್ಲಿ ಕೃಷಿಗೆ ಸಂಬಂದಿಸಿದ ಅಂಕಿ ಅಂಶಗಳೇ ಇಂದಿಗೂ ಲಭ್ಯವಿಲ್ಲ.

ಉದಾಹರಣೆಗೆ ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆಎಂಎಸ್) 2020-21 (ಅಕ್ಟೋಬರ್-ಸೆಪ್ಟೆಂಬರ್) ನಲ್ಲಿ ಭತ್ತದ ಖರೀದಿ ಮತ್ತು 2019-20ರಲ್ಲಿ ಅದಕ್ಕೆ ಸಂಬಂಧಿಸಿದ ಸಂಗ್ರಹಣೆಯನ್ನು ಹೋಲಿಸಲು ಸಾಧ್ಯವಿಲ್ಲ ಏಕೆಂದರೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್ಸಿಐ) ವೆಬ್ಸೈಟ್ ಒಂದು ನಿರ್ದಿಷ್ಟ ದಿನಾಂಕದಂದು ಸಂಗ್ರಹಣೆಯ ಅಂಕಿ ಅಂಶಗಳನ್ನು ಒದಗಿಸುತ್ತದೆ ಆದರೆ ಹಿಂದಿನ ವರ್ಷದ ಅದೇ ದಿನಾಂಕದ ಅಂಕಿ ಅಂಶಗಳು ಇಲ್ಲಿ ಲಭ್ಯವಿಲ್ಲ. ಕೆಎಂಎಸ್ 2019-20ರಲ್ಲಿ ಧಾನ್ಯದ ಒಟ್ಟು ಸಂಗ್ರಹಣೆಯ ಅಂಕಿಅಂಶವನ್ನು ಪಡೆಯಬಹುದು ಆದರೆ ಅದು ಈ ವರ್ಷ ಅಗಿರುವ ಪ್ರಗತಿಯನ್ನು ಹೋಲಿಸಲು ಸಹಾಯವಾಗುವುದಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬರೇ ಇದೊಂದೆ ಅಲ್ಲ. ನಾಫೆಡ್ ಸಂಸ್ಥೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸುವ ಅಂಕಿ ಅಂಶಗಳೂ ಇಲ್ಲಿ ಲಭ್ಯವಿಲ್ಲ. ನಾಫೆಡ್ ವೆಬ್ ಸೈಟ್ ನಲ್ಲಿ 2019-20 ರಲ್ಲಿ ಆಂಧ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ, ತೆಲಂಗಾಣದಲ್ಲಿ ದ್ವಿದಳ ಧಾನ್ಯಗಳ ಸಂಗ್ರಹದ ಛಾಯಾಚಿತ್ರಗಳನ್ನು ನೋಡಬಹುದು. ಆದರೆ ಇದು ನಫೆಡ್ ಸಂಗ್ರಹಿಸಿದ ಪ್ರಮಾಣದ ಬಗ್ಗೆ ಯಾವುದೇ ಅಂಕಿ ಅಂಶಗಳು ದಾಖಲಾಗಿಲ್ಲ. ಇದು ಕೆಎಂಎಸ್ 2020-21ರಲ್ಲಿ ಉದ್ದು ಮತ್ತು ಕೊಬ್ಬರಿ ಸಂಗ್ರಹಣೆಯ ಅಂಕಿಅಂಶಗಳನ್ನು ನೀಡುತ್ತದೆ ಆದರೆ ಕಳೆದ ವರ್ಷ ಇದೇ ದಿನಾಂಕದಂದು ಸಂಗ್ರಹಣೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ವೆಬ್ ಸೈಟ್ ಪ್ರಕಾರ ಕಳೆದ ಐದು ವರ್ಷಗಳಲ್ಲಿ (2014-15 ರಿಂದ 2018-19), ಕನಿಷ್ಟ ಬೆಂಲ ಬೆಲೆ ಯೋಜನೆಯಡಿ 91.098 ಲಕ್ಷ ಮೆ. ಟನ್ ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ನಾಫೆಡ್ ಸಂಗ್ರಹಿಸಿದೆ, 7.02 ಲಕ್ಷದ 2009-10 ರಿಂದ 2013-14ರ ಅವಧಿಯಲ್ಲಿ ಈ ಸಂಗ್ರಹ 7.02 ಲಕ್ಷ ಮೆ ಟನ್ ಆಗಿತ್ತು ಈಗ ಶೇಕಡಾ 1205 ರಷ್ಟು ಏರಿಕೆ ದಾಖಲಿಸಿದೆ. ಸಂಗ್ರಹದ ಪ್ರಸ್ತುತ ಮತ್ತು ನವೀಕರಿಸಿದ ವಿವರಗಳಿಗಾಗಿ, ವಾರ್ಷಿಕ ವರದಿಯನ್ನು ನೋಡಬಹುದು ಎಂದು ವೆಬ್ಸೈಟ್ ಹೇಳುತ್ತದೆ. ಆದರೆ 2019-20ರ ವಾರ್ಷಿಕ ವರದಿ ಇನ್ನೂ ಇಲ್ಲಿ ಲಭ್ಯವಿಲ್ಲ.

2015-16ರಲ್ಲಿ, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯನ್ನು (ಪಿಎಸ್ಎಫ್) ಸ್ಥಾಪಿಸಿತು. ನಾಫೆಡ್ ಗಣನೀಯವಾಗಿ ಸಂಗ್ರಹಣೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ರಬಿಯಲ್ಲಿ 2019-20ರಲ್ಲಿ 2.1 ಮಿಲಿಯನ್ ಟನ್ ಬೇಳೆ ಕಾಳುಗಳು ಮತ್ತು 8.03 ಲಕ್ಷ ಟನ್ ಸಾಸಿವೆ ಸಂಗ್ರಹಿಸಿದೆ. ಈ ಹೆಚ್ಚಿನ ಸಂಗ್ರಹವು ಕರೋನವೈರಸ್- ಲಾಕ್ಡೌನ್ ಸಮಯದಲ್ಲಿ, ವಾಹನ ಸಂಚಾರದ ಮೇಲೆ ನಿರ್ಬಂಧಗಳ ನಡುವೆ ಮಾಡಲಾಗಿದೆ. ಆದರೆ, 2020 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್ಡೌನ್ ಗರಿಷ್ಠವಾಗಿದ್ದಾಗ ಬೇಳೆ ಮತ್ತು ಸಾಸಿವೆಗಳನ್ನು ಸಂಗ್ರಹಿಸಿದ ಬಗ್ಗೆ ವೆಬ್ಸೈಟ್ ಯಾವುದೇ ಅಂಕಿ ಅಂಶವನ್ನು ನೀಡಿಲ್ಲ.

ಮತ್ತೊಂದು ಉದಾಹರಣೆ ಎಂದರೆ ಅನಾನಸ್ ಈಶಾನ್ಯ ರಾಜ್ಯಗಳ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಅಸ್ಸಾಂ, ಮಣಿಪುರ ಮತ್ತು ತ್ರಿಪುರ ಈ ಪ್ರದೇಶದಲ್ಲಿ ಅನಾನಸ್ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ, ಅಗ್ಮಾರ್ಕ್ನೇಟ್‌ 2019 ರ ಅಕ್ಟೋಬರ್‌ನಿಂದ 2020 ರ ಸೆಪ್ಟೆಂಬರ್ ವರೆಗೆ ಅನಾನಸ್ನ ಯಾವುದೇ ಖರೀದಿ ಅಥವಾ ಬೆಲೆಯನ್ನು ತೋರಿಸುವುದಿಲ್ಲ. ಮಣಿಪುರ ಮತ್ತು ತ್ರಿಪುರ ಕ್ರಮವಾಗಿ 52 ಟನ್ ಮತ್ತು 146 ಟನ್ ಬೆಳೆ ಮಾರುಕಟ್ಟಗೆ ಬಂದಿರುವುದನ್ನು ತೋರಿಸುತ್ತವೆ. ಅನಾನಸ್ನ ಪ್ರಮುಖ ಉತ್ಪಾದಕ ಪಶ್ಚಿಮ ಬಂಗಾಳವು ಕೇವಲ 939 ಟನ್ಗಳಷ್ಟು ಮಾರುಕಟ್ಟೆಗೆ ಬಂದಿರುವುದನ್ನು ತೋರಿಸುತ್ತದೆ, ಈ ರಾಜ್ಯಗಳಲ್ಲಿನ ಉತ್ಪಾದನೆಗೆ ಹೋಲಿಸಿದರೆ, ಮಾರುಕಟ್ಟೆಗೆ ಬಂದಿರುವ ಅಂಕಿ ಅಂಶಗಳು ಕಡಿಮೆ. ಇದಲ್ಲದೆ, ಅಗ್ಮಾರ್ಕ್ನೇಟ್‌ ಪೋರ್ಟಲ್‌ ಬೆಳೆ ಆಗಮನದ ದಿನಾಂಕದ ಅಂಕಿ ಅಂಶವನ್ನು ಮಾತ್ರ ತೋರಿಸುತ್ತದೆ ಮತ್ತು 2020 ರ ಸೆಪ್ಟೆಂಬರ್ ನಡುವಿನ ಡೇಟಾವನ್ನು ತೋರಿಸುವುದಿಲ್ಲ.

ಕೃಷಿ ಸಚಿವಾಲಯವು ವಿವಿಧ ಬೆಳೆಗಳ ಉತ್ಪಾದನೆಯ ನಾಲ್ಕು ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ವಿವಿಧ ರಾಜ್ಯಗಳಲ್ಲಿನ ಅಂದಾಜು ಉತ್ಪಾದನೆಯ ದತ್ತಾಂಶವನ್ನು ವಾಸ್ತವ ಉತ್ಪಾದನೆಯೊಂದಿಗೆ ಹೋಲಿಸಲು ಆಗುವುದಿಲ್ಲ. ಏಕೆಂದರೆ. ಉತ್ಪಾದನೆಯ ರಾಜ್ಯವಾರು ಅಂಕಿ ಅಂಶಗಳು ವೆಬ್ ಸೈಟ್ ನಲ್ಲಿ ಅಪ್ ಡೇಟ್ ಮಾಡಿರುವುದಿಲ್ಲ. ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆ, ವ್ಯಾಪಾರದ ಉತ್ಪಾದನೆಯ ಅಂದಾಜುಗಳು ಸಾಮಾನ್ಯವಾಗಿ ಸರ್ಕಾರದ ಅಂದಾಜುಗಳಿಗಿಂತ ಕಡಿಮೆ ಅಗಿರುತ್ತವೆ. 2019-20ರಲ್ಲಿ, ಸೆಪ್ಟೆಂಬರ್ 22, 2020 ರಂದು ಹೊರಡಿಸಿದ ಸಾಸಿವೆ ಉತ್ಪಾದನೆಯ ನಾಲ್ಕನೇ ಮುಂಗಡ ಅಂದಾಜು 91.16 ಲಕ್ಷ ಟನ್. ಆದರೆ ಎಣ್ಣೆ ಮಿಲ್ ಮಾಲೀಕರ ಸಂಘದ (ಎಸ್ಇಎ) ಅಂದಾಜು ಕೇವಲ 74 ಲಕ್ಷ ಟನ್ ಮಾತ್ರ. 2020 ರ ಏಪ್ರಿಲ್ ನಿಂದ ಜೂನ್ ವರೆಗೆ 9.6 ಲಕ್ಷ ಟನ್ ಸಾಸಿವೆ ಮಾರುಕಟ್ಟೆಗೆ ಬಂದಿದೆ ಇದು ಕಳೆದ ವರ್ಷಕ್ಕಿಂತ ಸುಮಾರು 6 ಲಕ್ಷ ಟನ್ ಕಡಿಮೆ. ಅಂತೆಯೇ, 2019-20ರಲ್ಲಿ ದೇಶದ ಸೋಯಾಬೀನ್ ಉತ್ಪಾದನೆಯು ಅಂದಾಜು 85 ಲಕ್ಷ ಟನ್. ಆದರೆ ಸರ್ಕಾರದ ನಾಲ್ಕನೇ ಮುಂಗಡ ಅಂದಾಜು 112.15 ಲಕ್ಷ ಟನ್ ಆಗಿತ್ತು. ಉತ್ಪಾದನಾ ಅಂದಾಜುಗಳಲ್ಲಿ ಇಂತಹ ದೊಡ್ಡ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಕೃಷಿ ಸಚಿವಾಲಯ ಮತ್ತು ವ್ಯಾಪಾರ ಸಂಸ್ಥೆಗಳ ನಡುವೆ ಉತ್ತಮವಾದ ಸಂವಹನ ನಡೆಯುವ ಅವಶ್ಯಕತೆಯಿದೆ.

ಸಹಕಾರಿ ವಲಯವು ರಚಿಸಿದ ಸಂಸ್ಕರಣಾ ಸಾಮರ್ಥ್ಯದ ದತ್ತಾಂಶಗಳು ಲಭ್ಯವಿದ್ದರೂ ಸಂಘಟಿತ ಖಾಸಗಿ ವಲಯವು ರಚಿಸಿದ ಹಾಲು ಸಂಸ್ಕರಣಾ ಸಾಮರ್ಥ್ಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್‌ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್ಎಸ್ಎಐ) ಖಾಸಗಿ ಡೈರಿ ಸಂಸ್ಕರಣಾ ಘಟಕಗಳ ನೋಂದಣಿ ಮತ್ತು ಪರವಾನಗಿ ಕುರಿತ ಅಂಕಿ ಅಂಶವನ್ನು ಸಂಗ್ರಹಿಸುತ್ತದೆ ಆದರೆ ಅದನ್ನು ಸಾರ್ವಜನಿಕ ವಲಯದಲ್ಲಿ ಸಂಗ್ರಹಿಸಿ ಬಿಡುಗಡೆ ಮಾಡಲಾಗುವುದಿಲ್ಲ.

ಭಾರತದಲ್ಲಿ ಡೈರಿ ಕ್ಷೇತ್ರದ ಅಭಿವೃದ್ಧಿಯ ಕುರಿತಾದ ಎಫ್ಐಸಿಸಿಐ ಪ್ರಬಂಧವೊಂದು ಸಹಕಾರಿ ಹಾಲು ಸಂಸ್ಕರಣಾ ಘಟಕಗಳು ವಾರ್ಷಿಕ ಸುಮಾರು 33 ದಶಲಕ್ಷ ಟನ್ ಹಾಲಿನ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದೆ. ಆದರೆ ಸಂಘಟಿತ ಖಾಸಗಿ ವಲಯದಿಂದ ನರ‍್ವಹಿಸಲ್ಪಡುವ ಹಾಲು ಸಂಸ್ಕರಣಾ ಸಾಮರ್ಥ್ಯ ತಿಳಿದಿಲ್ಲ. ಕೃಷಿ ಬೆಳೆಗಳಿಗಿಂತ ಭಿನ್ನವಾಗಿ, ದತ್ತಾಂಶ ಸಂಗ್ರಹಣೆ ಮತ್ತು ಹಾಲಿನ ದೈನಂದಿನ ಬೆಲೆಯನ್ನು ಪ್ರಸಾರ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ ದೇಶದ ನಿಖರ ಉತ್ಪಾದನೆ ಮತ್ತು ಹೋಲಿಕೆ ಸಾದ್ಯವೇ ಆಗುವುದಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com