ಸೈನಿಕರಿಗೆ ಬುಲೆಟ್‌ ಪ್ರೂಫ್‌ ವಾಹನಗಳಿಲ್ಲ, ಪ್ರಧಾನಿಗೆ ಐಷಾರಾಮಿ ವಿಮಾನ: ರಾಗಾ ಟೀಕೆ

ಈ ಹಿಂದೆ, ರಾಹುಲ್‌ ಗಾಂಧಿ ಪಂಜಾಬ್‌ನಲ್ಲಿ ʼಖೇತಿ ಬಚಾವೋʼ ಟ್ರ್ಯಾಕ್ಟರ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಅವರನ್ನು ಟೀಕಿಸಿದ್ದ ಬಿಜೆಪಿಯವರಿಗೆ ಐಷಾರಾಮಿ ವಿಮಾನದ ವಿಚಾರವನ್ನು ಮುಂದಿಟ್ಟು ಉತ್ತರ ನೀಡಿದ್ದರು.
ಸೈನಿಕರಿಗೆ ಬುಲೆಟ್‌ ಪ್ರೂಫ್‌ ವಾಹನಗಳಿಲ್ಲ, ಪ್ರಧಾನಿಗೆ ಐಷಾರಾಮಿ ವಿಮಾನ: ರಾಗಾ ಟೀಕೆ

ಪ್ರಧಾನ ಮಂತ್ರಿ ಹಾಗೂ ರಷ್ಟ್ರಪತಿಗಳ ಪ್ರವಾಸಕ್ಕಾಗಿ ಐಷಾರಾಮಿ ವಿಮಾನವನ್ನು ಖರೀದಿಸಿರುವ ಕೇಂದ್ರ ಸರ್ಕಾರದ ವಿರುದ್ದ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. 8,400 ಕೋಟಿ ನೀಡಿ ವಿಮಾನ ಖರೀದಿಸುವ ಕೇಂದ್ರ ಸರ್ಕಾರ ಸೈನಿಕರಿಗೆ ಬುಲೆಟ್‌ ಪ್ರೂಫ್‌ ವಾಹನಗಳನ್ನು ನೀಡುವುದಿಲ್ಲ ಎಂದು ಟೀಕಿಸಿದ್ದಾರೆ.

“ನಮ್ಮ ಸೈನಿಕರನ್ನು ಬುಲೆಟ್‌ ಪ್ರೂಫ್‌ ತಂತ್ರಜ್ಞಾನ ಇಲ್ಲದ ವಾಹನಗಳಲ್ಲಿ ಹುತಾತ್ಮರಾಗಲು ಕಳುಹಿಸುತ್ತಾರೆ. ನಮ್ಮ ಪ್ರಧಾನಿಗಳು 8,400 ಕೋಟಿಗಳ ವಿಮಾನ ಖರೀದಿಸಿದ್ದಾರೆ. ಇದು ನ್ಯಾಯವೇ?” ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸೈನಿಕರು ವಾಹನದಲ್ಲಿ ತೆರಳುತ್ತಿರುವ ವಿಡಿಯೋವೊಂದನ್ನು ಟ್ವೀಟ್‌ನಲ್ಲಿ ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಸೈನಿಕರು, ಬುಲೆಟ್‌ ಪ್ರೂಫ್‌ ವಾಹನಗಳು ಎಷ್ಟು ಅಪಾಯಕಾರಿ ಎಂಬುದನ್ನು ಚರ್ಚಿಸುತ್ತಿದ್ದಾರೆ.

ಈ ಹಿಂದೆ, ರಾಹುಲ್‌ ಗಾಂಧಿ ಪಂಜಾಬ್‌ನಲ್ಲಿ ʼಖೇತಿ ಬಚಾವೋʼ ಟ್ರ್ಯಾಕ್ಟರ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಅವರನ್ನು ಟೀಕಿಸಿದ್ದ ಬಿಜೆಪಿಯವರಿಗೆ ಐಷಾರಾಮಿ ವಿಮಾನದ ವಿಚಾರವನ್ನು ಮುಂದಿಟ್ಟು ಉತ್ತರ ನೀಡಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com