ಪಿಎಫ್‌ಐ ಮತ್ತು ಭೀಮ್‌ ಆರ್ಮಿ ಮಧ್ಯೆ ನೂರು ಕೋಟಿ ವ್ಯವಹಾರ ನಡೆದಿಲ್ಲ - ED
ಉತ್ತರ ಪ್ರದೇಶದ ಡಿಜಿಪಿ ಅವರ ಆರೋಪಕ್ಕೆ ವ್ಯತಿರಿಕ್ತವಾಗಿ ಸ್ಪಷ್ಟನೆ ನೀಡಿರುವ ಇಡಿ, ಪಿಎಫ್‌ಐ ಹಾಗೂ ಭೀಮ್‌ ಆರ್ಮಿ ನಡುವೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಹೇಳಿರುವುದು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ.
ಪಿಎಫ್‌ಐ ಮತ್ತು ಭೀಮ್‌ ಆರ್ಮಿ ಮಧ್ಯೆ ನೂರು ಕೋಟಿ ವ್ಯವಹಾರ ನಡೆದಿಲ್ಲ - ED

ದಲಿತ ನಾಯಕ ಚಂದ್ರಶೇಖರ್‌ ಆಝಾದ್‌ ನೇತೃತ್ವದ ಭೀಮ್‌ ಆರ್ಮಿಗೂ ಪಿಎಫ್‌ಐಗೂ ಯಾವುದೇ ಸಂಬಂಧವಿಲ್ಲ. ನೂರು ಕೋಟಿ ಮೊತ್ತದ ವ್ಯವಹಾರ ಈ ಎರಡು ಸಂಘಟನೆಗಳ ನಡುವೆ ನಡೆದಿಲ್ಲ, ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

ಸಿಎಎ ವಿರುದ್ದದ ಪ್ರತಿಭಟನೆಯಲ್ಲಿ ಪಿಎಫ್‌ಐನಿಂದ ಹಣ ಪಡೆದುಕೊಂಡು ಗಲಭೆಗಳನ್ನು ಹುಟ್ಟುಹಾಕಿದ ಆರೋಪ ಭೀಮ್‌ ಆರ್ಮಿ ಎದುರಿಸುತ್ತಿತ್ತು. ಈಗ ಎಲ್ಲಾ ಆರೋಪಗಳಿಗೂ ತೆರೆ ಬಿದ್ದಿದ್ದು, ಅಂತಹ ಯಾವುದೇ ವ್ಯವಹಾರದ ಕುರಿತಾಗಿ ಮಾಹಿತಿಯಿಲ್ಲ. ನೂರು ಕೋಟಿ ಹಣವನ್ನು ವಶಪಡಿಸಿಕೊಂಡಿರುವ ಸುದ್ದಿ ಸುಳ್ಳು ಎಂದು ಇಡಿ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಥ್ರಾಸ್‌ನಲ್ಲಿ ನಡೆದ ಅಮಾನವೀಯ ಘಟನೆಯನ್ನು ಖಂಡಿಸಿ ಸಂತ್ರಸ್ಥೆಯ ಕುಟುಂಬವನ್ನು ಭೇಟಿಯಾಗಲು ಹೊರಟ ಭೀಮ್‌ ಆರ್ಮಿ ಮತ್ತು ಇತರ ಸಂಘಟನೆಗಳ ವಿರುದ್ದ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಈ ಸ್ಪಷ್ಟನೆಯನ್ನು ಇಡಿ ನೀಡಿದೆ.

ಹಥ್ರಾಸ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಿಎಫ್‌ಐ ಸಕ್ರಿಯವಾಗಿ ಪಾಲ್ಗೊಂಡಿತ್ತು ಮತ್ತು ಗಲಭೆಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕೂಡಾ ಒದಗಿಸಿತ್ತು ಎಂದು ಡಿಜಿಪಿ ಬ್ರಿಜ್‌ ಲಾಲ್‌ ಹೇಳಿದ್ದಾರೆ.

ಪಿಎಫ್‌ಐ ಮತ್ತು ಭೀಮ್‌ ಆರ್ಮಿ ಮಧ್ಯೆ ನೂರು ಕೋಟಿ ವ್ಯವಹಾರ ನಡೆದಿಲ್ಲ - ED
‌ಹಥ್ರಾಸ್:‌ ಸಂತ್ರಸ್ತೆಯ ಕುಟುಂಬವೇ ಆಕೆಯನ್ನು ಕೊಂದಿದೆ - ಆರೋಪಿಯಿಂದ ಪೊಲೀಸರಿಗೆ ಪತ್ರ

“ಸಂತ್ರಸ್ಥೆಯ ಕುಟುಂಬದವರು ದುಃಖದಲ್ಲಿರುವಾಗಲೇ ಭೀಮ್‌ ಆರ್ಮಿ ಮುಖ್ಯಸ್ಥ ಆಝಾದ್‌ ಅವರು ತಮ್ಮ ಸಂಗಡಿಗರೊಡನೆ ಕುಟುಂಬವನ್ನು ಭೇಟಿಯಾಗಲು ಹೊರಟಿದ್ದರು. ಮೊದಲೇ ಗೊಂದಲದಲ್ಲಿದ್ದ ಸಂತ್ರಸ್ಥೆಯ ಕುಟುಂಬವು ಸಿಬಿಐ ವಿಚಾರಣೆಯನ್ನು ಕೂಡಾ ನಿರಾಕರಿಸಿತ್ತು,” ಎಂದು ಬ್ರಿಜ್‌ ಲಾಲ್‌ ಹೇಳಿದ್ದಾರೆ.

ಆದರೆ,ಡಿಜಿಪಿ ಅವರ ಆರೋಪಕ್ಕೆ ವ್ಯತಿರಿಕ್ತವಾಗಿ ಸ್ಪಷ್ಟನೆ ನೀಡಿರುವ ಇಡಿ, ಪಿಎಫ್‌ಐ ಹಾಗೂ ಭೀಮ್‌ ಆರ್ಮಿ ನಡುವೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಹೇಳಿರುವುದು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com