ಭೀಮಾ ಕೋರೆಗಾಂವ್‌ ಪ್ರಕರಣ: ಚಾರ್ಜ್‌ಶೀಟ್‌ ದಾಖಲಿಸಿದ NIA

ಸಾಮಾಜಿಕ ಕಾರ್ಯಕರ್ತ ಆನಂದ ತೇಲ್ತುಂಬ್ಡೆ, ಡೆಲ್ಲಿ ಯೂನಿವರ್ಸಿಟಿ ಪ್ರಾದ್ಯಾಪಕ ಹನಿ ಬಾಬು ಸೇರಿದಂತೆ ಒಟ್ಟು ಎಂಟು ಜನರ ವಿರುದ್ದ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ.
ಭೀಮಾ ಕೋರೆಗಾಂವ್‌ ಪ್ರಕರಣ: ಚಾರ್ಜ್‌ಶೀಟ್‌ ದಾಖಲಿಸಿದ NIA

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ NIA ತನ್ನ ಚಾರ್ಜ್‌ಶೀಟ್‌ ಅನ್ನು ದಾಖಲಿಸಿದೆ. ಸಾಮಾಜಿಕ ಕಾರ್ಯಕರ್ತ ಗೌತಮ್‌ ನೌಲಾಖಾ, ಡೆಲ್ಲಿ ಯೂನಿವರ್ಸಿಟಿ ಪ್ರಾದ್ಯಾಪಕ ಹನಿ ಬಾಬು ಮತ್ತು ಆದಿವಾಸಿ ನಾಯಕನ ತಂದೆ ಸ್ಟ್ಯಾನ್‌ ಸ್ವಾಮಿ ಅವರು ಸೇರಿದಂತೆ ಒಟ್ಟು ಎಂಟು ಜನರ ಮೇಲೆ ಆರೋಪ ಹೊರಿಸಲಾಗಿದೆ.

ಎನ್‌ಐಎ ಡಿಐಜಿ ಸೋನಿಯಾ ನಾರಂಗ್‌ ಅವರು “ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಎಂಟು ಜನರನ್ನು ಬಂಧಿಸಲಾಗಿದೆ,” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜನವರಿ 1, 2018ರಂದು ನಡೆದ ಕೋರೆಗಾಂವ್‌ ಯುದ್ದದ 200ನೇ ಜಯಂತಿಯ ಉತ್ಸವದ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಒಬ್ಬ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಗಲಭೆಯಲ್ಲಿ ಪಾಲ್ಗೊಂಡಿದ್ದರ ವಿಚಾರವಾಗಿ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ.

ಭೀಮಾ ಕೋರೆಗಾಂವ್‌ ಪ್ರಕರಣ: ಚಾರ್ಜ್‌ಶೀಟ್‌ ದಾಖಲಿಸಿದ NIA
ಭೀಮಾ ಕೊರೆಗಾಂವ್‌ ಹಿಂಸಾಚಾರ: ಇನ್ನೂ ವಿಚಾರಣೆಗೊಳಗಾಗದ ಹಿಂದುತ್ವ ನಾಯಕರು

ಸಾಮಾಜಿಕ ಕಾರ್ಯಕರ್ತ ಆನಂದ ತೇಲ್ತುಂಬ್ಡೆ, ಜ್ಯೋತಿ ಜಗ್ತಾಪ್‌, ಸಾಗರ್‌ ಘೋರ್ಖೆ ಮತ್ತು ರಮೇಶ್‌ ಗಾಯ್ಚೋರ್‌ ಅವರು ಇತರ ಬಂಧಿತರು.

ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಎಂದು ಹೇಳಲಾಗಿರುವ ಮಿಲಿಂದ್‌ ತೇಲ್ತುಂಬ್ಡೆ ಪರಾರಿಯಾಗಿದ್ದಾರೆಂದು ಸೋನಿಯಾ ನಾರಂಗ್‌ ತಿಳಿಸಿದ್ದಾರೆ.

ಭೀಮಾ ಕೋರೆಗಾಂವ್‌ ಪ್ರಕರಣ: ಚಾರ್ಜ್‌ಶೀಟ್‌ ದಾಖಲಿಸಿದ NIA
ಜನ ಹೋರಾಟ ಬಗ್ಗುಬಡಿಯಲು ಭೀಮಾ ಕೋರೆಗಾಂವ್ ಮಾಡೆಲ್!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com