ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್‌ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ

ಈ ಪ್ರಕರಣದ ವಿಚಾರವಾಗಿ 2 ಮರಾಠಿ ಚಾನೆಲ್‌ಗಳ ಮಾಲಕರನ್ನು ಬಂಧಿಸಲಾಗಿದ್ದು, Republic TVಯ ನಿರ್ದೇಶಕರನ್ನು ಕೂಡಾ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ
ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್‌ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ

TRP ರೇಟಿಂಗ್‌ ಅನ್ನು ತಿರುಚಲು ಯತ್ನಿಸಿದ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಸೇರಿದಂತೆ ಇತರ ಮೂರು ಸುದ್ದಿವಾಹಿನಿಗಳ ವಿರುದ್ದ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವ ಸುದ್ದಿವಾಹಿನಿ ಹಾಗೂ ಕಾರ್ಯಕ್ರಮವನ್ನು ಜನರು ಇಷ್ಟ ಪಡುತ್ತಾರೆ ಎಂಬುದನ್ನು ಟಿಆರ್‌ಪಿ ರೇಟಿಂಗ್‌ ತಿಳಿಸುತ್ತದೆ.

ಮುಂಬೈ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಹೇಳಿರುವಂತೆ, “ಅರ್ನಾಬ್‌ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್‌ ಟಿವಿ, ಫಕ್ತ್‌ ಮರಾಠಿ ಮತ್ತಯ ಬಾಕ್ಸ್‌ ಸಿನಿಮಾ ಚಾನೆಲ್‌ಗಳ ವಿರುದ್ದ ತನಿಖೆಯನ್ನು ಆರಂಭಿಸಲಾಗಿದೆ. ಈ ಮೂರು ಚಾನೆಲ್‌ಗಳು ಟಿಆರ್‌ಪಿ ರೇಟಿಂಗ್‌ ಅನ್ನು ತಿರುಚಿ, ತಮ್ಮ ಚಾನೆಲ್‌ಗೆ ಒಳ್ಳೆಯ ರೇಟಿಂಗ್‌ ಬರುವ ರೀತಿ ಮಾಡುತ್ತಿದ್ದರು,” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿರುವ ಕಮಿಷನರ್‌ ಅವರು, ʼಹಂಸʼ ಎನ್ನುವ ಸಂಸ್ಥೆಯು ಚಾನೆಲ್‌ಗಳಿಗೆ ಟಿಆರ್‌ಪಿಯನ್ನು ತಿರುಚಲು ಸಹಾಯ ಮಾಡುತ್ತಿತ್ತು. ಸುಮಾರು 2,000 ಬ್ಯಾರೋಮೀಟರ್‌ (ಟಿಆರ್‌ಪಿ ಅಳೆಯಲು ಬಳಸುವ ಸಾಧನ)ಗಳನ್ನು ಬಳಸಿ ತಿಆರ್‌ಯನ್ನು ತಿರುಚಲಾಗುತ್ತಿತ್ತು, ಎಂದು ತಿಳಿಸಿದ್ದಾರೆ.

ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್‌ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ
ಕರೋನಾ ಸಂಕಷ್ಟ ಕಾಲದ TRP ಜಿದ್ದಾಜಿದ್ದಿಯಲ್ಲಿ ಗೆದ್ದ ಪಬ್ಲಿಕ್ ಟಿವಿ ರಂಗಣ್ಣ!

“Republic tv ಸೇರಿದಂತೆ ಇತರ ಚಾನೆಲ್‌ಗಳ ಪರವಾಗಿ ಕೆಲವು ಜನರು ಮನೆ ಮನೆಗಳಿಗೆ ಭೇಟಿ ನೀಡಿ ಜನರಿಗೆ ತಮ್ಮ ಚಾನೆಲ್‌ ಅನ್ನು ಪದೇ ಪದೇ ನೋಡುವಂತೆ ದುಡ್ಡು ಹಂಚುತ್ತಿದ್ದರು,” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಿಚಾರವನ್ನು ಬಹಳಷ್ಟು ಕುಟುಂಬಗಳು ಒಪ್ಪಿಕೊಂಡಿವೆ ಎಂದು ಕೂಡಾ ಅವರು ಹೇಳಿದ್ದಾರೆ.

ಈ ಪ್ರಕರಣದ ವಿಚಾರವಾಗಿ 2 ಮರಾಠಿ ಚಾನೆಲ್‌ಗಳ ಮಾಲಕರನ್ನು ಬಂಧಿಸಲಾಗಿದ್ದು, Republic TVಯ ನಿರ್ದೇಶಕರನ್ನು ಕೂಡಾ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್‌ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ
‘ಮೀಡಿಯಾ ಟ್ರಯಲ್’ ಹಿಂದಿರುವುದು ಕೇವಲ TRP ಹಪಾಹಪಿಯಲ್ಲ!

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಅರ್ನಾಬ್‌ ಗೋಸ್ವಾಮಿ, ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ವಿರುದ್ದ ಸುದ್ದಿ ಪ್ರಸಾರ ಮಾಡಿದ ಕಾರಣಕ್ಕಾಗಿ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಅವರು ಕ್ಷಮೆ ಕೇಳಬೇಕು ಇಲ್ಲವಾದರೆ, ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿ ಹೊರಬರುತ್ತಿದ್ದಂತೇ, ಸಾಮಾಜಿಕ ಜಾಲತಾಣಗಳಲ್ಲಿ ರಿಪಬ್ಲಿಕ್‌ ಟಿವಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com