ಚುನಾವಣೆಗೆ ನಿಲ್ಲುವ ಬಿಹಾರ ಮಾಜಿ ಡಿಜಿಪಿಯ ಕನಸು ಭಗ್ನ

ನಿವೃತ್ತಿಗೂ ಮೊದಲು ವೀಡಿಯೊವೊಂದನ್ನು ಬಿಡುಗಡೆ ಮಾಡಿಸಿದ್ದ ಪಾಂಡೆ ಅವರು ಸಾಮಾಜಿಕ ತಾಣಗಳಲ್ಲೆಲ್ಲ ಇದು ವೈರಲ್ ಅಗುವಂತೆ ನೋಡಿಕೊಂಡಿದ್ದರು. ಈ ವೀಡಿಯೋ ಕ್ಲಿಪ್ ನಲ್ಲಿ ಪಾಂಡೆ ಅವರು ರಾಬಿನ್ ಹುಡ್ ನಂತೆ ಚಿತ್ರಿಸಲಾಗಿದ್ದು ಬಡವರಿಗೆ ಸಹಾಯ ಮಾಡುವ ...
ಚುನಾವಣೆಗೆ ನಿಲ್ಲುವ ಬಿಹಾರ ಮಾಜಿ ಡಿಜಿಪಿಯ ಕನಸು ಭಗ್ನ

ನಿವೃತ್ತಿಗೆ ಕೆಲವೇ ತಿಂಗಳು ಇರುವಂತೆ ಭಾರೀ ಮಹತ್ವಾಕಾಂಕ್ಷೆಯಿಂದ ಸ್ವಯಂ ವಿಆರ್‌ಎಸ್ ಪಡೆದು ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದ ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರ ಕನಸಿಗೆ ಸದ್ಯಕ್ಕೆ ಹಿನ್ನಡೆ ಆಗಿದೆ.

ನಿವೃತ್ತಿಗೂ ಮೊದಲು ವೀಡಿಯೊವೊಂದನ್ನು ಬಿಡುಗಡೆ ಮಾಡಿಸಿದ್ದ ಪಾಂಡೆ ಅವರು ಸಾಮಾಜಿಕ ತಾಣಗಳಲ್ಲೆಲ್ಲ ಇದು ವೈರಲ್ ಅಗುವಂತೆ ನೋಡಿಕೊಂಡಿದ್ದರು. ಈ ವೀಡಿಯೋ ಕ್ಲಿಪ್ ನಲ್ಲಿ ಪಾಂಡೆ ಅವರು ರಾಬಿನ್ ಹುಡ್ ನಂತೆ ಚಿತ್ರಿಸಲಾಗಿದ್ದು ಬಡವರಿಗೆ ಸಹಾಯ ಮಾಡುವ ವ್ಯಕ್ತಿಯನ್ನಾಗಿ ತೋರಿಸಲಾಗಿತ್ತು. ಈ ವೀಡಿಯೋದಲ್ಲಿ ಪಾಂಡೆ ಎಂಟ್ರಿ ಕೊಡವಾಗ ಚಿತ್ರ ನಟರ ಪ್ರವೇಶದಂತೆ ಹಿನ್ನೆಲೆಯಲ್ಲಿ ಹೊಗೆ ಭಾರೀ ಸ್ಪೋಟದ ಸದ್ದನ್ನೂ ಸಂಯೋಜಿಸಲಾಗಿದ್ದು ಇವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆಯುವುದೂ ನಿರೀಕ್ಷಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ತಿಂಗಳು ಜೆಡಿಯುಗೆ ಸೇರ್ಪಡೆಯಾದ ಪಾಂಡೆ, ತಮ್ಮ ಸ್ವಂತ ಊರಾದ ಬಕ್ಸಾರ್‌ನಿಂದ ಸ್ಪರ್ಧಿಸಲು ಎದುರು ನೋಡುತ್ತಿದ್ದರು, ಆದರೆ ಮಿತ್ರ ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ಒಪ್ಪಂದದ ಭಾಗವಾಗಿ ಬಕ್ಸಾರ್ ಕ್ಷೇತ್ರವು ಬಿಜೆಪಿ ತೆಕ್ಕೆಗೆ ಹೋಗಿದೆ. ಆದರೆ ಬಿಜೆಪಿಯಿಂದಲೂ ಟೆಕೆಟ್ ಪಡೆಯಲು ಪಾಂಡೆ ಯತ್ನಿಸಿದರಾದರೂ ಆದು ಕೈಗೂಡುವಂತೆ ಕಾಣುತ್ತಿಲ್ಲ.

ಹಾಗಾಗಿ ಸದ್ಯಕ್ಕೆ ಇವರ ರಾಜಕೀಯದ ಕನಸು ಹಿನ್ನಡೆ ಆಗಿದೆ. ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಬಿಜೆಪಿ ನಾಯಕತ್ವವು ಬಕ್ಸಾರ್ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಪಕ್ಷದ ವಕ್ತಾರ ಮತ್ತು ಮಾಜಿ ಶಾಸಕ ರಾಜೀವ್ ರಂಜನ್ ತಿಳಿಸಿದರು. ಮಂಗಳವಾರ ರಾತ್ರಿ ಬಿಜೆಪಿ 27 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು ಆದರೆ ಬಕ್ಸಾರ್ ಜಿಲ್ಲೆಯ ಎರಡು ಸ್ಥಾನಗಳಾದ ಬಕ್ಸಾರ್ ಮತ್ತು ಬ್ರಹ್ಮಪುರ ಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದಾಗ್ಯೂ, ಇದು ಪಾಂಡೆಗೆ ಬಕ್ಸಾರ್ ಪಕ್ಕದ ಪರ್ಯಾಯ ಕ್ಷೇತ್ರ ಆಗಬಹುದಿದ್ದ ಶಾಹಪುರ ಸ್ಥಾನಕ್ಕೆ ಅಭ್ಯರ್ಥಿಯನ್ನು ಹೆಸರಿಸಿದೆ.

ಈ ಕುರಿತು ಮಾತನಾಡಿದ ಮಾಜಿ ಡಿಜಿಪಿ ಅವರು ಈ ಬೆಳವಣಿಗೆಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು. ನಾನು ಪಕ್ಷದ ಕರೆಗಾಗಿ ಕಾಯುತ್ತಿದ್ದೇನೆ ಎಂದು ಪಾಂಡೆ ಬುಧವಾರ ಬೆಳಿಗ್ಗೆ ಹೇಳಿದರು. ಪ್ರಾಸಂಗಿಕವಾಗಿ, ಕಳೆದ ವಾರ ಮಹಾ ಘಟಬಂಧನ ದಿಂದ ಹೊರಬಂದ ಬಾಲಿವುಡ್ ಡಿಸೈನರ್ ಮುಖೇಶ್ ಸಾಹ್ನಿ ಅವರ ಪಕ್ಷವಾದ ವಿಕಶೀಲ್ ಇನ್ಸಾನ್ ಪಕ್ಷಕ್ಕೆ (ವಿಐಪಿ) ಬಿಜೆಪಿ ಬ್ರಹ್ಮಪುರ ಕ್ಷೇತ್ರವನ್ನು ಬಿಟ್ಟು ಕೊಡುವ ಸಾದ್ಯತೆ ಇರುವುದರಿಂದ ಇದಕ್ಕೆ ಇನ್ನೂ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ ಎನ್ನಲಾಗಿದೆ.

ಮಾಜಿ ಡಿಜಿಪಿ ಪಾಂಡೆ ಅವರಿಗೆ ರಾಷ್ಟ್ರ ಮಟ್ಟದ ಪ್ರಚಾರ ನೀಡಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಿಂದಾಗಿ ಪಾಂಡೆ ಅವರಿಗೆ ಬಕ್ಸರ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲು ಹಿಂಜರಿಯುತ್ತಿರುವುದು ನಿಜಕ್ಕೂ ವಿಪರ್ಯಾಸ. ನಟನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಅವರ ತಂದೆ ಪಾಟ್ನಾದಲ್ಲಿ ಎಫ್ಐಆರ್ ದಾಖಲಿಸಿದ ನಂತರ ಪಾಂಡೆ ಬಿಹಾರ ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಚುನಾವಣೆಗೆ ನಿಲ್ಲುವ ಬಿಹಾರ ಮಾಜಿ ಡಿಜಿಪಿಯ ಕನಸು ಭಗ್ನ
ಬಿಹಾರ: ಚುನಾವಣಾಧಿಕಾರಿಯಾಗಿ ತೃತೀಯಲಿಂಗಿ ಮಹಿಳೆ ನೇಮಕ

ಆದರೆ ಸುಶಾಂತ್ ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂಬ ಏಮ್ಸ್ ಫೋರೆನ್ಸಿಕ್ ವರದಿಯು ಹೊರ ಬಿದ್ದ ನಂತರ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಈ ವಿವಾದದ ಉತ್ತುಂಗದಲ್ಲಿದ್ದಾಗ ಪಾಂಡೆ ವಿವಾದಾತ್ಮಕವಾಗಿ ರಿಯಾ ಚಕ್ರವರ್ತಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಶ್ನಿಸಲು ಸ್ಥಾನಮಾನ ಇಲ್ಲ ಎಂದು ಹೇಳಿದ್ದರು, ಆದರೆ ನಂತರ ತಮ್ಮ ಹೇಳಿಕೆಯಿಂದ ಹಿಂದೆ ಸರಿದರು.

1987 ರ ಬ್ಯಾಚ್ನ ಈ ಐಪಿಎಸ್ ಅಧಿಕಾರಿ ಮುಂಬೈ ಪೊಲೀಸರು ಬಿಹಾರ ಪೋಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೂಡ ಆರೋಪಿಸಿದ್ದರು, ಪಾಂಡೆ ಅವರ ಸ್ಪರ್ದೆಗೆ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ತಿರುಗಿ ಬಿದ್ದಿದೆ. ಪಾಂಡೆ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸದೆ ಅವರ ವಿರುದ್ದ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಎನ್ಸಿಪಿ ಮುಖಂಡ ಮತ್ತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಕೂಡ ಪಾಂಡೆ ಪರ ಪ್ರಚಾರ ಮಾಡಿದರೆ ಅಷ್ಟೆ ಎಂದು ಬಿಜೆಪಿಯ ಬಿಹಾರ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಟೀಕೆ ಮಾಡಿದರು.

ಚುನಾವಣೆಗೆ ನಿಲ್ಲುವ ಬಿಹಾರ ಮಾಜಿ ಡಿಜಿಪಿಯ ಕನಸು ಭಗ್ನ
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಬಿಹಾರ ಚುನಾವಣೆಯ ನಂತರ ಮಹಾರಾಷ್ಟ್ರದ ಮಾಜಿ ಮಾಜಿ ಮುಖ್ಯ ಮಂತ್ರಿಗಳು ಪರಿಸ್ಥಿತಿಯನ್ನು ಎದುರಿಸುವುದು ಕಷ್ಟ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದರು. 2009 ರಲ್ಲಿ ಪಾಂಡೆ ತಮ್ಮ ಪಕ್ಷಕ್ಕೆ ಹತ್ತಿರವಾಗಿದ್ದಾಗ, ನಂತರ ಅವರು ಜೆಡಿಯು ಕಡೆಗೆ ವಾಲುತ್ತಿದ್ದರು ಎಂದು ಬಿಜೆಪಿ ನಾಯಕರು ಹೇಳಿದರು. ಒಂದು ಕ್ಷೇತ್ರಕ್ಕೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಜಿಲ್ಲಾ ಘಟಕದಿಂದ ರವಾನಿಸಲಾಗುತ್ತದೆ" ಎಂದು ಬಿಜೆಪಿಯ ಮತ್ತೊಬ್ಬ ಹಿರಿಯ ಮುಖಂಡರು ಪ್ರಕಾರ ನಾವು ಅವರಿಗೆ (ಪಾಂಡೆ) ಟಿಕೆಟ್ ನೀಡಿದರೆ, ಪಕ್ಷದ ಸ್ಥಳೀಯ ಘಟಕದಲ್ಲಿ ಭಿನ್ನಮತ ಉಂಟಾಗಲಿದೆ.

ಬಕ್ಸಾರ್ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆಯಾಗಿದ್ದು, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಅತ್ಯಂತ ಸ್ಪಷ್ಟವಾದ ನಾಯಕ ಸುಖ್ದಾ ಪಾಂಡೆ ಅವರು ಮೂರು ಬಾರಿ ಪ್ರತಿನಿಧಿಸಿದ್ದಾರೆ. ಆದಾಗ್ಯೂ, ಅವರು ಸಕ್ರಿಯ ರಾಜಕೀಯವನ್ನು ತೊರೆದಿದ್ದಾರೆ. ಬಿಜೆಪಿ ಈಗ ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಹಂಬಲದಲ್ಲಿದೆ. 2015 ರ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಆಪ್ತರಾಗಿರುವ ಉದಯೋನ್ಮುಖ ಬಿಜೆಪಿ ಮುಖಂಡ ಪ್ರದೀಪ್ ದುಬೆ ಅವರನ್ನು ಕಣಕ್ಕಿಳಿಸಲು ರಾಜ್ಯ ನಾಯಕತ್ವ ಬಯಸಿದೆ.

ಬಕ್ಸಾರ್ ಸಂಸದ ಮತ್ತು ಕೇಂದ್ರ ಸಚಿವ ಅಶ್ವನಿ ಚೌಬೆ ಅವರು ತಮ್ಮ ಪಕ್ಷವು ರಜಪೂತರನ್ನು ಕಣಕ್ಕಿಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎನ್ನಲಾಗಿದೆ. 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಪಾಂಡೆ ವಿಫಲ ಪ್ರಯತ್ನ ಮಾಡಿದ್ದರು, ಮತ್ತು ಸೇವೆಯಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಸಹ ಬಯಸಿದ್ದರು. ಆದರೆ ಅದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಿರಸ್ಕರಿಸಿದರು.

ಚುನಾವಣೆಗೆ ನಿಲ್ಲುವ ಬಿಹಾರ ಮಾಜಿ ಡಿಜಿಪಿಯ ಕನಸು ಭಗ್ನ
ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?

ಈ ಬಾರಿ ಅವರು ನಿತೀಶ್ ಅವರ ಜೆಡಿಯು (ಯು) ಯನ್ನು ಸೇರಿಕೊಂಡರು ಮತ್ತು ಕಳೆದ ತಿಂಗಳು ವಿಆರ್ಎಸ್ ತೆಗೆದುಕೊಂಡರು, ಅವರು ಫೆಬ್ರವರಿ 2021 ರಲ್ಲಿ ನಿವೃತ್ತರಾಗಬೇಕಿತ್ತು. ಅವರು ಮುಖ್ಯಮಂತ್ರಿಯ ಸಮ್ಮುಖದಲ್ಲಿ ಜೆಡಿಯುಗೆ ಸೇರಿಕೊಂಡು ಮತ್ತು ತಮ್ಮನ್ನು ದಕ್ಷ ಅಧಿಕಾರಿಯಂತೆ ಚಿತ್ರಿಸುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ತಮ್ಮ ವೈಯಕ್ತಿಕ ಗೆಲುವು ಎಂದು ಹೇಳಿಕೊಳ್ಳುವ ಈ ವೀಡಿಯೋ ವೈರಲ್ ಆಗಿತ್ತು. ಅದರೂ ಕೂಡ ಪಾಟ್ನಾದಲ್ಲಿ ದಾಖಲಾದ ಎಫ್ಐಆರ್ ಗೆ ಅವರ ರಾಜಕೀಯ ಆಕಾಂಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com