ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು

ಇನ್ನೂ ಹಲವು ಬಿಜೆಪಿ ನಾಯಕರು ಎಲ್‌ಜೆಪಿ ಸೇರುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು, ಎಲ್‌ಜೆಪಿ ವಕ್ತಾರ ಅಶ್ರಫ್‌ ಅನ್ಸಾರಿ ಹೇಳಿದ್ದಾರೆ.
ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು

ಬಿಹಾರ ಚುನಾವಣಾ ರಾಜಕೀಯದಲ್ಲಿ ಈಗ ಪಕ್ಷಾಂತರ ಪರ್ವ ಆರಂಭವಾಗಿದೆ. ಈ ಮೊದಲು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದ ಎಲ್‌ಜೆಪಿ ಈಗ ಪಕ್ಷಾಂತರಿಗಳ ಹಾಟ್‌ ಫೇವರಿಟ್‌ ಪಕ್ಷ. ಜೆಡಿಯು ವಿರುದ್ದ ಸಿಡಿದೆದ್ದು ಎನ್‌ಡಿಎ ಇಂದ ಹೊರ ಬಂದಿದ್ದ ಎಲ್‌ಜೆಪಿಗೆ ಈಗಾಗಲೇ ಬಿಜೆಪಿ ಹಾಗೂ ಜೆಡಿಯುನ ಮೂವರು ನಾಯಕರು ಸೇರಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮೊತ್ತ ಮೊದಲು ಬಿಜೆಪಿ ತೊರೆದು ಎಲ್‌ಜೆಪಿ ಸೇರಿದವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ ಸಿಂಗ್‌. ಇವರ ನಂತರ ಜೆಡಿಯು ನಾಯಕ ಹಾಗೂ ಹಿಂದಿನ ಕೇಂದ್ರ ಮಂತ್ರಿ ಭಗವಾನ್‌ ಸಿಂಗ್‌ ಕುಶ್ವಾಹ ಕೂಡಾ ಮಂಗಳವಾರದಂದೇ ಎಲ್‌ಜೆಪಿ ಸೇರಿದ್ದರು. ಈಗ ಮತ್ತೆ ಇಬ್ಬರು ಬಿಜೆಪಿ ನಾಐಕರು ಎಲ್‌ಜೆಪಿ ಸೇರಿದ್ದಾರೆ. ಉಷಾ ವಿದ್ಯಾರ್ಥಿ ಹಾಗೂ ರಾಮೇಶ್ವರ್‌ ಚೌರಾಸಿಯಾ ಕೂಡಾ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಸೇರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇವರಲ್ಲಿ ಉಷಾ ವಿದ್ಯಾರ್ಥಿ, ಪಾಟ್ನಾದ ಪಾಲಿಗಂಜ್‌ ಕ್ಷೇತ್ರದವರಾಗಿದ್ದು, ಸೀಟು ಹಂಚಿಕೆಯಲ್ಲಿ ಈ ಕ್ಷೇತ್ರವು ಜೆಡಿಯು ಪಾಲಾಗಿದೆ. ಹಾಗಾಗಿ ತಮಗೆ ಸೀಟು ಸಿಗುವುದಿಲ್ಲ ಎಂಬುದು ನಿಶ್ಚಿತವಾದ ನಂತರ ಎಲ್‌ಜೆಪಿ ಸೇರಿ ಅಲ್ಲಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

“ಜೆಡಿಯು ವಿರುದ್ದ ಚಿರಾಗ್‌ ಪಾಸ್ವಾನ್‌ ತಾಳಿದ ನಿರ್ಧಾರ ನಿಜಕ್ಕೂ ಮೆಚ್ಚುವಂತದ್ದು. ಇಂದತ ದೃಢ ನಿರ್ಧಾರ ತಾಳಿದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರ ʼಬಿಹಾರ ಮೊದಲು, ಬಿಹಾರಿ ಮೊದಲುʼ ಚಿಂತನೆಯನ್ನು ಸಾಕಾರಗೊಳಿಸಲು ಇದು ಸರಿಯಾದ ಸಂದರ್ಭ,” ಎಂದು ಉಷಾ ಹೇಳಿದ್ದಾರೆ.

ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು
ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯ

ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಿಜೆಗೆ ಬಂದಿದ್ದ ಉಷಾ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಈಗ ಬಿಜೆಪಿ ತೊರೆದು ಎಲ್‌ಜೆಪಿ ಸೇರಿದ್ದಾರೆ.

ಬಿಜೆಪಿಯಿಂದ ಹೆಚ್ಚಿನ ನಾಯಕರು ಎಲ್‌ಜೆಪಿ ಸೇರುತ್ತಿರುವುದರ ಕುರಿತು ಮಾತನಾಡಿರುವ ಎಲ್‌ಜೆಪಿ ನಾಯಕ ಖಾಲಿಕ್‌ ಅಹ್ಮದ್‌, “ಟಿಕೆಟ್‌ ನೀಡುವುದರಲ್ಲಿ ಮೊದಲ ಪ್ರಾಶಸ್ತ್ಯ ಎಲ್‌ಜೆಪಿ ನಾಯಕರಿಗೇ ನೀಡಲಾಗುತ್ತದೆ. ಆದರೆ, ಬೇರೆ ಪಕ್ಷದಿಂದ ಬರುವಂತಹ ಪ್ರಭಾವಿ ನಾಯಕರನ್ನು ಕಡೆಗಣಿಸಲಾಗುವುದಿಲ್ಲ. ಅವರಿಗೆ ಸ್ವಾಗತವಿದೆ. ಯಾರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆಯೋ ಅವರಿಗೆ ಟಿಕೆಟ್‌ ನೀಡಲಾಗುತ್ತದೆ,” ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು
ಬಿಹಾರ ಚುನಾವಣೆ: NDA ಮೈತ್ರಿಕೂಟದಿಂದ ಹೊರನಡೆದ LJP ಏನು ಸಾಧಿಸಬಲ್ಲದು?

ಇನ್ನೂ ಹಲವು ಬಿಜೆಪಿ ನಾಯಕರು ಎಲ್‌ಜೆಪಿ ಸೇರುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು, ಎಲ್‌ಜೆಪಿ ವಕ್ತಾರ ಅಶ್ರಫ್‌ ಅನ್ಸಾರಿ ಹೇಳಿದ್ದಾರೆ. “ಸುಮಾರು 20 ಜನರಿಗೆ ಟಿಕೆಟ್‌ ನೀಡಲಾಗುವುದಿಲ್ಲ ಎಂದು ಹೇಳಿದ್ದೇವೆ. ಇಲ್ಲವಾದಲ್ಲಿ ಹಲವಾರು ಜನರು ಎಲ್‌ಜೆಪಿ ಸೇರಲು ತಯಾರಾಗಿದ್ದರು,” ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು
ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com