ಎನ್ಐಎಯಿಂದ  ಇಬ್ಬರು ಶಂಕಿತ ಉಗ್ರರ ಬಂಧನ
ರಾಷ್ಟ್ರೀಯ

ಎನ್ಐಎಯಿಂದ ಇಬ್ಬರು ಶಂಕಿತ ಉಗ್ರರ ಬಂಧನ

ಬೆಂಗಳೂರಿನಲ್ಲಿ ಎನ್ಐಎಯಿಂದ ಬಂಧಿತನಾಗಿದ್ದ ವೈದ್ಯ ಅಬ್ದುರ್ ರೆಹಮಾನ್ ನೀಡಿದ ಮಾಹಿತಿ ಮೇರೆಗೆ ಇವರಿಬ್ಬರನ್ನು ಬಂಧಿಸಲಾಗಿದೆ

ಪ್ರತಿಧ್ವನಿ ವರದಿ

ಭಯೋತ್ಪಾದಕ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಇರ್ಫಾನ್ ನಾಸೀರ್ ಹಾಗೂ ತಮಿಳುನಾಡಿನ ಅಬ್ದುಲ್ ಅಹಮದ್ ಎಂದು ಗುರುತಿಸಲಾಗಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಎನ್ಐಎಯಿಂದ ಬಂಧಿತನಾಗಿದ್ದ ವೈದ್ಯ ಅಬ್ದುರ್ ರೆಹಮಾನ್ ನೀಡಿದ ಮಾಹಿತಿ ಮೇರೆಗೆ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಫ್ರೆಜರ್ ಟೌನ್ ನಲ್ಲಿ ಅಕ್ಕಿ ವ್ಯಾಪಾರಿಯಾಗಿರುವ ಇರ್ಫಾನ್ ನಾಸೀರ್ ಹಾಗೂ ತಮಿಳುನಾಡಿನಲ್ಲಿ ಟಿಕ್ಕಿಯಾಗಿರುವ ಅಬ್ದುಲ್ ಅಹಮ್ಮದ್ ಇಬ್ಬರು ಸೇರಿ ʼಖುರಾನ್ ಸರ್ಕಲ್ʼ ಎಂದು ಮಾಡಿಕೊಂಡು ಭಯೋತ್ಪಾದಕ ಸಂಘಟನೆಗೆ ಬೆಂಗಳೂರಿನಲ್ಲಿ ಯುವಕರನ್ನ ಸಂಘಟಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳಿಗೆ ಸಿರಿಯಾದ ಹಿಜ್ವ್ ಉತ್ ತೆಹ್ರಿರ್ ಎಂಬ ಉಗ್ರ ಸಂಘಟನೆಯೊಂದಿಗೆ ನಂಟಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com