ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು

ನ್ಯಾಯಾಲಯದಲ್ಲಿ ʼತಾನೇನು ತಪ್ಪು ಮಾಡಿಲ್ಲ. ತನ್ನ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಕಲಿಸಲಾಗಿದೆʼ ಎಂದು ರಿಯಾ ಹೇಳಿದ್ದರು.
ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು

ಸುಶಾಂತ್‌ ಸಿಂಗ್‌ ರಾಜಪೂತ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಚರ್ಚೆಯಲ್ಲಿದ್ದ ಡ್ರಗ್ಸ್‌ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಜಾಮೀನು ನೀಡಿದೆ. ಸುಶಾಂತ್‌ ಅವರಿಗೆ ರಿಯಾ ಡ್ರಗ್ಸ್‌ ತಂದುಕೊಡುತ್ತಿದ್ದರು ಮತ್ತು ಡ್ರಗ್ ಜಾಲದಲ್ಲಿದ್ದ ಪ್ರಮುಖ ವ್ಯಕ್ತಿ ಇವರು ಎಂದು ಮಾದಕ ವಸ್ತು ನಿಯಂತ್ರಣ ಸಂಸ್ಥೆ (Narcotics Control Bureau) ಆರೋಪಿಸಿತ್ತು.

ಸೆಪ್ಟೆಂಬರ್‌ 8ರಂದು ರಿಯಾ ಅವರನ್ನು ಬಂಧಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅವರು ಸೆರೆವಾಸದಲ್ಲಿದ್ದರು. ಇವರೊಂದಿಗೆ ಜಾಮೀನು ಅರ್ಜಿ ಸಲ್ಲಿಸಿದ್ದ ಅಬ್ದುಲ್‌ ಪರಿಹಾರ್‌ ಮತ್ತು ರಿಯಾ ತಮ್ಮ ಶೋವಿಕ್‌ ಚಕ್ರವರ್ತಿ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನ್ಯಾಯಾಲಯದಲ್ಲಿ ವಾದ ಮಾಡಿದ NCB ಪರ ವಕೀಲರು, ತಾವು ಡ್ರಗ್ಸ್‌ ಜಾಲದಲ್ಲಿ ಸಕ್ರಿಯರಾಗಿ ಇರುವುದಾಗಿ ರಿಯಾ ಒಪ್ಪಿಕೊಂಡಿದ್ದರು. ಈಗ ತಮ್ಮ ಏಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ʼತಾನೇನು ತಪ್ಪು ಮಾಡಿಲ್ಲ. ತನ್ನ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಕಲಿಸಲಾಗಿದೆʼ ಎಂದು ರಿಯಾ ಹೇಳಿದ್ದರು.

ಈ ವಿಚಾರವಾಗಿ ಈಗಾಗಲೇ ಹಲವು ಪ್ರಮುಖ ನಟಿಯರನ್ನು ವಿಚಾರಣೆಗೆ ಕರೆದಿದ್ದು, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌ ಹಾಗೂ ಶ್ರದ್ದಾ ಕಪೂರ್‌ ಅವರು ಕೂಡಾ ವಿಚಾರಣೆ ಎದುರಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com