ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!

ಹೆಚ್ಚಿನ ಹಿಂಸಾಚಾರವನ್ನು ತಪ್ಪಿಸಲು ಕುಟುಂಬ ಸದಸ್ಯರು ಮಧ್ಯರಾತ್ರಿ ಅಂತ್ಯಕ್ರಿಯೆಗೆ ಒಪ್ಪಿಕೊಂಡರು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಇದನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!

ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಅಫಿಡವಿಟ್ ಸಲ್ಲಿಸಿದ್ದು, ಸಿಬಿಐ ತನಿಖೆಯನ್ನು ಎಸ್‌ಸಿ ಮೇಲ್ವಿಚಾರಣೆ ಮಾಡಬೇಕೆಂದು ಅವರು ಬಯಸಿದ್ದಾರೆ. ಹೆಚ್ಚಿನ ಹಿಂಸಾಚಾರವನ್ನು ತಪ್ಪಿಸಲು ಕುಟುಂಬ ಸದಸ್ಯರು ಮಧ್ಯರಾತ್ರಿ ಅಂತ್ಯಕ್ರಿಯೆಗೆ ಒಪ್ಪಿಕೊಂಡರು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಇದನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಆದಿತ್ಯನಾಥ್ ಸರ್ಕಾರ ಬಯಸಿದೆ. ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಉತ್ತರ ಪ್ರದೇಶ ಸರ್ಕಾರವು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಹತ್ರಾಸ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಬಯಸಿದೆ ಎಂದು ಹೇಳಿದೆ. ಹತ್ರಾಸ್ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್ಐಟಿ ತನಿಖೆ ಕೋರಿ ಯೋಗಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ತನ್ನ ಅಫಿಡವಿಟ್ ಸಲ್ಲಿಸಿದೆ.

ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!
ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶ ಪೊಲೀಸರು ಸಾಧಿಸಹೊರಟಿರುವುದೇನು ?

ಘಟನೆಯ ಸತ್ಯವನ್ನು ಹೊರತರುವ ನ್ಯಾಯಯುತ ತನಿಖೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಹಿಂಸಾಚಾರವನ್ನು ತಪ್ಪಿಸಲು, ಸಂತ್ರಸ್ತೆಯ ಮೃತ ದೇಹವನ್ನು ಮಧ್ಯರಾತ್ರಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಯುಪಿ ಸರ್ಕಾರದ ಈ ಅಫಿಡವಿಟ್‌ನಲ್ಲಿ ರಾಜಕೀಯ ಪಕ್ಷಗಳು ಮತ್ತು ಸಮಾಜ ಘಾತುಕ ಸಂಘಟನೆಗಳು ಜಾತಿ ವಿಭಜನೆಗೆ ಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ.

ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!
ಉತ್ತರ ಪ್ರದೇಶ ವಿಭಜನೆಯಿಂದ ಕಾನೂನು ಸುವ್ಯವಸ್ಥೆ ಉತ್ತಮಗೊಳ್ಳಲಿದೆಯೇ?

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹಿನ್ನಲೆಯಲ್ಲಿ ಹೆಚ್ಚಿನ ಜಾಗರೂಕತೆಯಿಂದ ಇರುವುದಕ್ಕಾಗಿ ಹಾಗೂ ಕರೋನಾ ವೈರಸ್‌ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಒಟ್ಟುಗೂಡಲು ಅವಕಾಶಕೊಡದಿರಲು ರಾತ್ರಿ 2.30 ಕ್ಕೆ ಸಂತ್ರಸ್ತೆಯ ಶವವನ್ನು ಅಂತ್ಯಸಂಸ್ಕಾರಗೊಳಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com