ಮುಂಬೈ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಯಾಚಿಸಲಿ- ಶಿವಸೇನೆ

ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಆ ʼಮಹಾನಟಿʼ ಹಥ್ರಾಸ್ ಸಂತ್ರಸ್ತೆಯ ಬಗ್ಗೆ ಗ್ಲಿಸರಿನ್‌ ಹಾಕಿಯಾದರೂ ಎರಡು ತೊಟ್ಟು ಕಣ್ಣೀರು ಹಾಕಿಲ್ಲವಲ್ಲ- ಸಾಮ್ನಾ
ಮುಂಬೈ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಯಾಚಿಸಲಿ- ಶಿವಸೇನೆ

ಸುಶಾಂತ್‌ ಸಿಂಗ್‌ ಮರಣ ಆತ್ಮಹತ್ಯೆಯೆಂದು ಏಮ್ಸ್‌ ವೈದ್ಯರು ಧೃಡಪಡಿಸಿದ ಬೆನ್ನಿಗೆ, ಶಿವಸೇನೆ ಮುಖವಾಣಿ ಸಾಮ್ನಾ, ಮುಂಬೈ ಪೊಲೀಸರ ಮಾನಹಾನಿ ಮಾಡಿದ ಚಾನೆಲ್‌ಗಳು ರಾಜಕಾರಣಿಗಳು ಕ್ಷಮೆ ಕೇಳಲಿ ಎಂದು ಆಗ್ರಹಿಸಿದೆ.

ನಟನ ಸಾವಿನ ಕುರಿತ ಸತ್ಯ ಅಂತಿಮವಾಗಿ ಹೊರಬಿದ್ದಿದೆ. ನಟನ ಸಾವಿನ ಕುರಿತಂತೆ ವದಂತಿಗಳನ್ನು ಹಬ್ಬಿ ಆ ಮೂಲಕ ಮಹಾರಾಷ್ಟ್ರದ ಚಿತ್ರಣಗಳನ್ನು ಕೆಟ್ಟದಾಗಿ ಬಿಂಬಿಸಿದ ಸುದ್ದಿ ವಾಹಿನಿಗಳು, ರಾಜಕಾರಣಿಗಳು ಕ್ಷಮೆ ಕೇಳಬೇಕು ಎಂದು ಶಿವಸೇನೆ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಲ್ಲದೆ, ಮಹಾರಾಷ್ಟ್ರ ಸರ್ಕಾರ ವದಂತಿಗಳನ್ನು ಹಬ್ಬಿಸಿ ಮಹಾರಾಷ್ಟ್ರದ ಘನತೆಗೆ ಧಕ್ಕೆ ತಂದವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಬೇಕೆಂದು ಕೇಳಿದೆ.

ಸುಶಾಂತ್‌ ಸಿಂಗ್‌ ರಜಪೂತ್‌ರ ಮರಣೋತ್ತರ ವರದಿಯನ್ನು ಮರು ಮೌಲ್ಯಮಾಪನಗೊಳಿಸಿದ ಏಮ್ಸ್‌ ವೈದ್ಯರ ತಂಡ ನಟನದ್ದು ಆತ್ಮಹತ್ಯೆ, ಕೊಲೆಯಲ್ಲ ಎಂದು ಕಳೆದ ವಾರ ಹೇಳಿತ್ತು.

ಮುಂಬೈ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಯಾಚಿಸಲಿ- ಶಿವಸೇನೆ
ʻಮಹಾʼ ಹೈಡ್ರಾಮಕ್ಕೆ ನಟಿ ಕಂಗನಾ ರಣಾವತ್‌ ಕಂಗಾಲು..!

ಈ ವರದಿಯನ್ನು ಉಲ್ಲೇಖಿಸಿದ ಸಾಮ್ನಾ, ಸುಶಾಂತ್‌ ಸಾವಿನ ಕುರಿತಂತೆ ಏಮ್ಸ್‌ ನೀಡಿರುವ ವರದಿಯನ್ನು ಅಂಧ ಭಕ್ತರು ತಿರಸ್ಕರಿಸುತ್ತಾರೆಯೇ ಎಂದು ಪ್ರಶ್ನಿಸಿದೆ.

ಈ ಪ್ರಕರಣವನ್ನು ಹಿಡಿದುಕೊಂಡು ಮಹಾರಾಷ್ಟ್ರ ಪೊಲೀಸರ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ, ಪೊಲೀಸರ ಮೇಲೆ ಕಳಂಕ ತಂದ ರಾಜಕಾರಣಿಗಳು, ನಾಯಿಗಳಂತೆ ಅರಚಾಡಿದ ಸುದ್ದಿ ವಾಹಿನಿಗಳು ಮಹಾರಾಷ್ಟ್ರದ ಕ್ಷಮೆಯನ್ನು ಕೂಡಲೇ ಕೇಳಬೇಕು ಎಂದು ಸಾಮ್ನಾ ಸಂಪಾದಕೀಯ ಒತ್ತಾಯಿಸಿದೆ.

ಮುಂಬೈ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಯಾಚಿಸಲಿ- ಶಿವಸೇನೆ
ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ

ಹಥ್ರಾಸ್‌ ಸಾಮೂಹಿಕ ಅತ್ಯಾಚಾರದ ಕುರಿತು ತುಟಿ ಪಿಟಿಕ್ಕೆನ್ನದ ಮಂದಿ ಮಹಾರಾಷ್ಟ್ರವನ್ನು ಕೆಣಕಲು ಬರಬಾರದು ಎಂದೂ ಅದು ಎಚ್ಚರಿಸಿದೆ.

ಸುಶಾಂತ್‌ ಪ್ರಕರಣದಲ್ಲಿ ಆತನ ಗೌರವಕ್ಕೆ ಧಕ್ಕೆ ತರಬಾರದೆಂದು ಆತ ಡ್ರಗ್‌ ದಾಸ್ಯಕ್ಕೆ ಬಲಿಯಾದ ಕುರಿತು ಬಹಿರಂಗಪಡಿಸಿರಲಿಲ್ಲ. ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬೆನ್ನಿಗೆ ಅದು ಆ ವಿಚಾರ ಕುರಿತು ಅಗೆದು ಹಾಕಿದೆ ಎಂದು ಸಾಮ್ನಾ ಹೇಳಿದೆ.

ಮುಂಬೈ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಯಾಚಿಸಲಿ- ಶಿವಸೇನೆ
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಬಿಹಾರ ಚುನಾವಣೆ ಎದುರಿಸಲು ಯಾವುದೇ ವಿಷಯಗಳು ಇಲ್ಲದ್ದರಿಂದ ಸುಶಾಂತ್‌ ಪ್ರಕರಣವನ್ನು ಬಳಸಲಾಗಿದೆ ಎಂದು ನಿತೀಶ್‌ ಕುಮಾರ್‌ ವಿರುದ್ಧ ಟೀಕೆ ಮಾಡಿದ ಸಾಮ್ನಾ, ಸುಶಾಂತ್‌ ಸಾವಿನ ಕುರಿತ ರಹಸ್ಯ ಬಹಿರಂಗಗೊಳ್ಳಬೇಕೆಂದು ಕೇಳಿದ, ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಆ ʼಮಹಾನಟಿʼ ಹಥ್ರಾಸ್ ಸಂತ್ರಸ್ತೆಯ ಬಗ್ಗೆ ಗ್ಲಿಸರಿನ್‌ ಹಾಕಿಯಾದರೂ ಎರಡು ತೊಟ್ಟು ಕಣ್ಣೀರು ಹಾಕಿಲ್ಲವಲ್ಲ. ಅವರು ಈಗ ಎಲ್ಲಿ ಅಡಗಿ ಕೂತಿದ್ದಾರೆಂದು ಕಂಗನಾರ ಹೆಸರು ಉಲ್ಲೇಖಿಸದೆಯೇ ಕಂಗಾನರನ್ನು ಟೀಕಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com