ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್
ಚಾಂದ್ಪ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿರುವುದನ್ನು ಉತ್ತರ ಪ್ರದೇಶ ಪೊಲೀಸರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಧೃಡಪಡಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಅವರು ತಯಾರಿರಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.
ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್

ಹಥ್ರಾಸ್‌ ಪ್ರಕರಣದ ಹಿನ್ನೆಲೆಯಲ್ಲಿ ಜಾತಿಯಾಧಾರಿತ ಕಲಹ ಸೃಷ್ಟಿಸಿ ಯೋಗಿ ಸರ್ಕಾರಕ್ಕೆ ಕಳಂಕ ತರಲು ಅಂತರಾಷ್ಟ್ರೀಯ ಸಂಚು ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಇದೇ ʼಸಂಚಿನ ಆರೋಪದಲ್ಲಿʼ ಅಪರಿಚಿತ ವ್ಯಕ್ತಿಗಳ ಮೇಲೆ ದೇಶದ್ರೋಹ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್
ಯೋಗಿ ಆದಿತ್ಯನಾಥ್ ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳಬಲ್ಲರೆ?

ವೆಬ್‌ಸೈಟ್‌ ಒಂದರಲ್ಲಿ ಪ್ರತಿಭಟನೆಗಳನ್ನು ಹೇಗೆ ನಡೆಸಬೇಕು ಹಾಗೂ ಪೊಲೀಸರಿಂದ ಹೇಗೆ ತಪ್ಪಿಸಬೇಕು ಎಂಬ ಮಾಹಿತಿ ಹೊಂದಿರುವ justiceforhathrasvictim.carrd.co ಎಂಬ ವೆಬ್‌ಸೈಟ್‌ ಈ ಪಿತೂರಿಗೆ ಸಂಬಂಧಿಸಿರುವುದು ಎಂದು ಪೊಲೀಸ್ ಮೂಲಗಳು‌ ತಿಳಿಸಿವೆ. ಪ್ರಸ್ತುತ ಈ ವೆಬ್‌ಸೈಟನ್ನು ತೆಗೆದುಹಾಕಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸರು ಲಾಠೀ ಚಾರ್ಜ್‌ ನಡೆಸುವಾಗ ಹಾಗೂ ಆಶ್ರು ವಾಯು ಸಿಡಿಸುವಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದೆಂಬ ಪಟ್ಟಿಯನ್ನೂ ಈ ವೆಬ್‌ಸೈಟಿನಲ್ಲಿ ನೀಡಲಾಗಿತ್ತು. ಬಹುತೇಕ ಬರಹಗಳು ಅಮೇರಿಕಾದಲ್ಲಿ ನಡೆದ ʼBlack Lives Mattersʼ ಪ್ರತಿಭಟನಾಕಾರರು ಬಳಸಿದವು ಎಂದು ಅವರು ಹೇಳಿದ್ದಾರೆ.

ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್
ಯೋಗಿ ಆದಿತ್ಯನಾಥ್ ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳಬಲ್ಲರೆ?

ಚಾಂದ್ಪ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿರುವುದನ್ನು ಉತ್ತರ ಪ್ರದೇಶ ಪೊಲೀಸರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಧೃಡಪಡಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಅವರು ತಯಾರಿರಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಐಪಿಎಸ್‌ ಸೆಕ್ಷನ್‌ 109, 120 ಬಿ ( ಕ್ರಿಮಿನಲ್‌ ಪಿತೂರಿ), 124 ಎ (ದೇಶದ್ರೋಹ), 153 ಎ (ಧರ್ಮ, ಜನಾಂಗ, ಭಾಷೆ, ಹುಟ್ಟಿದ ಸ್ಥಳ, ವಾಸಸ್ಥಳ ಅಡಿಯಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ಧ್ವೇಷ ಹರಡುವುದು) ಹಾಗೂ ಅದರ ನಾಲ್ಕು ಉಪವಿಭಾಗಗಳು, 153 ಬಿ (ರಾ಼ಷ್ಟ್ರೀಯ ಏಕತೆಗೆ, ಭದ್ರತೆಗೆ ಪೂರ್ವಗ್ರಹ ಪೀಡಿತ ಪ್ರಚೋದನೆ) 420 (ವಂಚನೆ) ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು - UP ಪೊಲೀಸ್
ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

ಅಲ್ಲದೆ ಸುಳ್ಳು ಸಾಕ್ಷ್ಯ ಸೃಷ್ಟಿ, ಫೋರ್ಜರಿ, ಮಾನಹಾನಿ ಮಾಡುವ ಉದ್ದೇಶದಿಂದ ಫೋರ್ಜರಿ, ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com