ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ

ಆರೋಪಿಗಳ ಪರ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ, ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 10,000ಕ್ಕೂ ಹೆಚ್ಚು ನಾಗರಿಕರು ಸಹಿ ಸಂಗ್ರಹಿಸಿದ್ದಾರೆ.
ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ

ಹಾಥ್ರಾಸ್‌ನಲ್ಲಿ ನಡೆದ ಪೈಶಾಚಿಕ ಘಟನೆ ದೇಶವನ್ನೇ ನಲುಗಿಸಿದ್ದರೆ, ಆರೋಪಿಗಳನ್ನು ಬೆಂಬಲಿಸಲು ಬಿಜೆಪಿ ನಾಯಕರೊಬ್ಬರು ಮೇಲ್ವರ್ಗದ ಜಾತಿಯ ಮುಖಂಡರ ಸಭೆಯನ್ನು ಕರೆದಿದ್ದಾರೆ. ಸಂತ್ರಸ್ಥೆಯ ಕುಟುಂಬಸ್ಥರ ವಿರುದ್ದವೇ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂತ್ರೆಸ್ಥೆಯ ಮನೆಯಿಂದ ಕೇವಲ 9 ಕಿಲೋಮೀಟರ್‌ ದೂರದಲ್ಲಿರುವ ಬಿಜೆಪಿಯ ಮಾಜಿ ಶಾಸಕ ರಾಜ್ವೀರ್‌ಸಿಂಗ್‌ ಪಹಲ್ವಾನ್‌ ಅವರ ಮನೆಯಲ್ಲಿ ಈ ಸಭೆ ನಡೆದಿದೆ. ಸಭೆಯ ನಂತರ ಮಾತನಾಡಿರುವ ರಾಜ್ವೀರ್‌ ಅವರ ಮಗ ಮನ್ವೀರ್‌ ಸಿಂಗ್‌, ಈ ಪ್ರಕರಣದ ಕುರಿತಾಗಿ ಮೊದಲ ಪೊಲೀಸರಿಗೆ ದೂರು ನೀಡಿದವರ ವಿರುದ್ದ ಎಫ್‌ಐಆರ್‌ ದಾಖಲಿಸಬೇಕು, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಸಂತ್ರೆಸ್ಥೆಯ ಕುಟುಂಬಸ್ಥರು ಸಿಬಿಐ ತನಿಖೆಯನ್ನು ಬೇಡವೆನ್ನುತ್ತಿದ್ದಾರೆ. ಪದೇ ಪದೇ ತಮ್ಮ ಬೇಡಿಕೆಯನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ದವೇ ಪ್ರಕರಣ ದಾಖಲಿಸಬೇಕು,” ಎಂದು ಮನ್ವೀರ್‌ ಹೇಳಿದ್ದಾರೆ.

ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ
ಯೋಗಿ ಆದಿತ್ಯನಾಥ್ ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳಬಲ್ಲರೆ?

ಈ ಸಭೆಯಲ್ಲಿ, ಅತ್ಯಾಚಾರ ಮತ್ತು ಕೊಲೆಯನ್ನು ಮಾಡಿರುವ ಆರೋಪಿಗಳನ್ನು ಕಾನೂನಿನ ಕಪಿಮುಷ್ಟಿಯಿಂದ ಯಾವ ರೀತಿ ತಪ್ಪಿಸಬಹುದು ಎಂಬುದರ ಕುರಿತಾಗಿಯೂ ಸಮಾಲೋಚನೆ ನಡೆಸಲಾಗಿದೆ. ಮುಂದಿನ ಕಾನೂನು ಸಮರದಲ್ಲಿ ಆರೋಪಿಗಳ ಪರವಾಗಿ ಯಾವ ರೀತಿ ವಾದ ಮಾಡಬೇಕು ಅದಕ್ಕೆ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ.

ಆರೋಪಿಗಳ ವಿರೋಧ ಸಹಿ ಸಂಗ್ರಹ:

ಸುಮಾರು 10,000ಕ್ಕೂ ಹೆಚ್ಚು ಭಾರತೀಯ ನಾಗರಿಕರು ಹಾಗೂ ಮಹಿಳಾ ಪರ ಸಂಘಟನೆಗಳು ಸೇರಿ ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಹಿ ಸಂಗ್ರಹಿಸಿದ್ದಾರೆ. ಆರೋಪಿಗಳ ಪರ ನಿಂತಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ
ಭಾರತದ ʼಸರ್ವಾಧಿಕಾರಿʼ ಆಡಳಿತದ ವಿರುದ್ದ ಬಹಿರಂಗ ಪತ್ರ ಬರೆದ 200 ಅಂತರಾಷ್ಟ್ರೀಯ ಗಣ್ಯರು

“ಉತ್ತರ ಪ್ರದೇಶದಲ್ಲಿ ನಡೆಯುವ ಅಪರಾಧಗಳಿಗೆ ಒಂದು ಚರಿತ್ರೆಯೇ ಇದೆ. ಆದರೆ, ಯೋಗಿ ಆದಿತ್ಯನಾಥ್‌ ಅವರ ಆಡಳಿತದಲ್ಲಿ ಅದು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಇಳಿದಿದೆ. ಮಹಿಳೆಯರ ಹಾಗೂ ದಲಿತರ ವಿರುದ್ದ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಯಾವುದೇ ಜವಾಬ್ದಾರಿಯಿಲ್ಲದ ಉತ್ತರ ಪ್ರದೇಶದ ಪೊಲೀಸರಿಗೆ ಬೇಕಾಬಿಟ್ಟಿಯಾಗಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ,” ಎಂಬ ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಇಂತಹ ಘೋರ ಘಟನೆ ನಡೆದರೂ, ಸರ್ಕಾರದ ಪರವಾಗಿ ಸಂತ್ರಸ್ಥೆಯ ಕುಟುಂಬವನ್ನು ʼಸಂತೈಸಲುʼ ಒಬ್ಬನೇ ಒಬ್ಬ ಸರ್ಕಾರಿ ಅಧಿಕಾರಿ ಅವರ ಮನೆಗೆ ಭೇಟಿ ನೀಡಲಿಲ್ಲ. ಠಾಕುರ್‌ ಕುಟುಂಬಕ್ಕೆ ಸೇರಿದ ಆರೋಪಿಗಳು ಮೇಲ್ಜಾತಿಯವರು ಎಂಬ ಕಾರಣಕ್ಕೆ ಆವರನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ, ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ
ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶ ಪೊಲೀಸರು ಸಾಧಿಸಹೊರಟಿರುವುದೇನು ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com