ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು

ಹಥ್ರಾಸ್‌ ಘಟನೆಯ ಬಳಿಕ ನಗರದಲ್ಲಿ ಸೆಕ್ಷನ್‌ 144 ಹೇರಿದ್ದ ಸರ್ಕಾರ, ಐದು ಜನರಿಗಿಂತ ಹೆಚ್ಚಿನ ಜನ ಸೇರುವುದನ್ನು ನಿಷೇಧಿಸಿತ್ತು.
ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು

ಹಥ್ರಾಸ್‌ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಝಾದ್‌ ರಾವಣ ಹಾಗೂ ಅವರ 400 ಕ್ಕೂ ಹೆಚ್ಚು ಸಂಗಡಿಗರ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವಾಗ ಚಂದ್ರಶೇಖರ್‌ ಆಝಾದ್‌ ಮತ್ತು ಇತರ 400 ಮಂದಿ ದೊಡ್ಡ ಗುಂಪು ಸೇರುವ ಮೂಲಕ ಸೆಕ್ಷನ್‌ 144 ಅನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸರು ಸೆಕ್ಷನ್ 323, 504, 332, 353, 427, 188 ಮತ್ತು ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 1932 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದೈನಿಕ್‌ ಭಾಸ್ಕರ್‌ ವರದಿ ಮಾಡಿದೆ.

ಹಥ್ರಾಸ್‌ ಘಟನೆಯ ಬಳಿಕ ನಗರದಲ್ಲಿ ಸೆಕ್ಷನ್‌ 144 ಹೇರಿದ್ದ ಸರ್ಕಾರ, ಐದು ಜನರಿಗಿಂತ ಹೆಚ್ಚಿನ ಜನ ಸೇರುವುದನ್ನು ನಿಷೇಧಿಸಿತ್ತು.

ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
ಹಾಥ್ರಾಸ್ ಹೇಯ ಘಟನೆ ಮತ್ತು ʼಉತ್ತರಪ್ರದೇಶʼ ಎಂಬ ಭವಿಷ್ಯದ ಭಾರತದ ಮಾದರಿ!

ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್‌ ಆಝಾದ್‌ರನ್ನು ಪೊಲೀಸರು ಹತ್ರಾಸ್‌ಗೆ ಹೋಗದಂತೆ ಆರಂಭದಲ್ಲಿ ತಡೆದರು. ಆದಾಗ್ಯೂ, ನಂತರ ಚಂದ್ರಶೇಖರ್ ಆಜಾದ್ ಅವರನ್ನು ಕುಟುಂಬವನ್ನು ಭೇಟಿ ಮಾಡಲು ಅನುಮತಿಸಲಾಯಿತು.

ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
ಮೇಲ್ಜಾತಿಯವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಹುಡುಗಿ ಮೃತ್ಯು

ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಆಝಾದ್‌, ಸಂತ್ರಸ್ತೆಯ ಕುಟುಂಬಕ್ಕೆ ಮೇಲ್ಜಾತಿಯ ಸಂಘಟನೆ, ನಾಯಕರು ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿ ವೈ + ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸೆಪ್ಟಂಬರ್‌ 14 ರಂದು ಮೇಲ್ಜಾತಿ ವರ್ಗದವರಿಂದ ಭೀಕರ ಅತ್ಯಾಚಾರಕ್ಕೆ ಹಾಗೂ ಮಾರಣಾಂತಿಕ ದಾಳಿಗೆ ಒಳಗಾಗಿದ್ದ 19 ವರ್ಷದ ದಲಿತ ಯುವತಿ ಕಳೆದ ವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.

ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ಈ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿತ್ತು. ಸಂತ್ರಸ್ತೆಯ ಮೃತದೇಹವನ್ನು ರಾತ್ರೋರಾತ್ರಿ ಪೆಟ್ರೋಲ್‌ ಸುರಿದು ಸುಟ್ಟು ಪೊಲೀಸರು ಅಂತ್ಯಸಂಸ್ಕಾರ ನಡೆಸಿರುವುದು ಪ್ರಕರಣದ ಕುರಿತಂತೆ ಸಾಕಷ್ಟು ಅನುಮಾನ ಮೂಡಿಸಿತ್ತು. ಅಲ್ಲದೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗದಂತೆ ತಡೆದ ಕ್ರಮವೂ ಈ ಅನುಮಾನಗಳಿಗೆ ಪುಷ್ಟಿ ನೀಡಿತ್ತು.

ಹಥ್ರಾಸ್‌: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ

ಅಲ್ಲದೆ ಆರೋಪಿಗಳ ಪರ ಬಹಿರಂಗವಾಗಿ ಮೇಲ್ಜಾತಿ ಸಂಘಟನೆಗಳು, ನಾಯಕರು ಬೆಂಬಲ ಸೂಚಿಸಿದ್ದರು, ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆಯನ್ನೂ ಸಹ ಹಾಕಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com