ಬಿಹಾರ: ಚುನಾವಣಾಧಿಕಾರಿಯಾಗಿ ತೃತೀಯಲಿಂಗಿ ಮಹಿಳೆ ನೇಮಕ

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುವ ಪ್ರಥಮ ತೃತೀಯ ಲಿಂಗಿ ಮಹಿಳೆ ಎಂಬ ಹೆಗ್ಗಳಿಕೆಗೂ ಮೋನಿಕಾ ದಾಸ್‌ ಭಾಜನರಾಗಿದ್ದಾರೆ.
ಬಿಹಾರ: ಚುನಾವಣಾಧಿಕಾರಿಯಾಗಿ ತೃತೀಯಲಿಂಗಿ ಮಹಿಳೆ ನೇಮಕ

ಅಕ್ಟೋಬರ್‌ 28 ರಂದು ಬಿಹಾರದಲ್ಲಿ ಆರಂಭಗೊಳ್ಳಲಿರುವ ವಿಧಾನಸಭಾ ಚುನಾವಣೆಗೆ ಚುನಾವಣಾಧಿಕಾರಿಯನ್ನಾಗಿ ತೃತೀಯಲಿಂಗಿ ಮಹಿಳೆಯನ್ನು ಚುನಾವಣಾಧಿಕಾರಿಯನ್ನಾಗಿ ಚುನಾವಣಾ ಆಯೋಗ ನೇಮಿಸಿದೆ.

32 ವರ್ಷದ ಮೋನಿಕಾ ದಾಸ್ ಚುನಾವಣಾಧಿಕಾರಿಯಾಗಿ ನೇಮಕಗೊಂಡ ಮೊದಲ ತೃತೀಯಲಿಂಗಿ ಮಹಿಳೆಯಾಗಿದ್ದಾರೆ. ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಮೋನಿಕಾ ದಾಸ್‌, 2015ರಿಂದ ರಾಷ್ಟ್ರೀಕೃತ ಬ್ಯಾಂಕ್‌ ಉದ್ಯೋಗಿ ಕೂಡಾ ಆಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುವ ಪ್ರಥಮ ತೃತೀಯ ಲಿಂಗಿ ಮಹಿಳೆ ಎಂಬ ಹೆಗ್ಗಳಿಕೆಗೂ ಮೋನಿಕಾ ದಾಸ್‌ ಭಾಜನರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರೊಂದಿಗೆ, ಚುನಾವಣೆಗೆ ಲಿಂಗ ಪರಿವರ್ತಿತ ವ್ಯಕ್ತಿಯನ್ನು ಪ್ರಧಾನ ಅಧಿಕಾರಿಯಾಗಿ ನೇಮಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನೂ ಬಿಹಾರ ಪಡೆದುಕೊಂಡಿದೆ.

ಈ ಹಿಂದೆ, 2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃತೀಯ ಲಿಂಗಿ ಮಹಿಳೆ ರಿಯಾ ಸರ್ಕಾರ್‌ರನ್ನು ಮತಗಟ್ಟೆಯ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಬಿಹಾರದಲ್ಲಿ, ಮತದಾರರ ಪಟ್ಟಿಯ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸುಮಾರು 2,344 ತೃತೀಯ ಲಿಂಗಿಗಳು ಅರ್ಹರಾಗಿದ್ದಾರೆ.

ಬಿಹಾರದಲ್ಲಿ ಚುನಾವಣಾಧಿಕಾರಿಯಾಗಿ ತೃತೀಯಲಿಂಗಿ ಮಹಿಳೆಯೊಬ್ಬರು ನೇಮಕಗೊಂಡಿರುವುದನ್ನು ತೃತೀಯಲಿಂಗಿಗಳ ರಾಷ್ಟ್ರೀಯ ಮಂಡಳಿಯ ಸದಸ್ಯೆ ರೇಷ್ಮಾ ಪ್ರಸಾದ್‌ ಸಂತಸದಿಂದ ಸ್ವಾಗತಿಸಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಹೆಮ್ಮೆ ತರುವ ವಿಚಾರ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಿಹಾರದಲ್ಲಿ ಸರಿಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಲಿಂಗ ಪರಿವರ್ತಿತ ಸಮುದಾಯದಲ್ಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com