ಕರೋನಾ ಬಂದರೆ ಮಮತಾರನ್ನು ತಬ್ಬಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ನಾಯಕನಿಗೆ ಕೋವಿಡ್ ಪಾಸಿಟಿವ್

ಒಂದು ವೇಳೆ ತನಗೆ ಕರೋನಾ ಪಾಸಿಟಿವ್‌ ಬಂದರೆ ತಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ. ಆ ಮೂಲಕ ಅವರಿಗೂ ಕೂಡಾ ಕೋವಿಡ್‌ ಹರಡುತ್ತೇನೆ ಎಂದು ಅನುಪಮ್‌ ಹಝ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕರೋನಾ ಬಂದರೆ ಮಮತಾರನ್ನು ತಬ್ಬಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ನಾಯಕನಿಗೆ ಕೋವಿಡ್ ಪಾಸಿಟಿವ್

ಒಂದೊಮ್ಮೆ ನನಗೆ ಕರೋನಾ ಪಾಸಿಟಿವ್‌ ಬಂದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆಂದಿದ್ದ ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್‌ ಹಝ್ರಾ ಅವರಿಗೆ ಕರೋನಾ ಸೋಂಕು ಬಂದಿರುವುದು ಧೃಡಪಟ್ಟಿದೆ.

ತನಗೆ ಕರೋನಾ ಬಂದಿರುವುದನ್ನು ಸ್ವತಃ ಹಝ್ರಾ ಅವರೇ ತನ್ನ ಅಧಿಕೃತ ಫೇಸ್‌ಬುಕ್‌ ಖಾತೆ ಮೂಲಕ ಧೃಡಪಡಿಸಿದ್ದಾರೆ. ಹಝ್ರಾ ಅವರನ್ನು ಚಿಕಿತ್ಸೆಗಾಗಿ ಕಲ್ಕತ್ತಾದ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅನುಪಮ್‌ ಹಝ್ರಾರಿಗೆ ಸಣ್ಣ ಮಟ್ಟಿಗಿನ ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕರೋನಾ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ವರದಿ ಅವರಿಗೆ ಕರೋನಾ ಇರುವುದು ಧೃಡಪಡಿಸಿದೆ ಎಂದು ಆರೋಗ್ಯಾಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ಅನುಪಮ್‌ ಹಝ್ರಾ, ಒಂದು ವೇಳೆ ತನಗೆ ಕರೋನಾ ಪಾಸಿಟಿವ್‌ ಬಂದರೆ ತಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ. ಆ ಮೂಲಕ ಅವರಿಗೂ ಕೂಡಾ ಕೋವಿಡ್‌ ಹರಡುತ್ತೇನೆ ಎಂದಿದ್ದರು. ಈ ಹೇಳಿಕೆಯ ಬೆನ್ನಲ್ಲಿ ಅವರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು.

ಟಿಎಂಸಿಯಿಂದ ಸಂಸದರಾಗಿದ್ದ ಅನುಪಮ್‌ ಹಝ್ರಾ ಕಳೆದ ವರ್ಷ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಇದುವರೆಗೆ 2.6 ಲಕ್ಷಕ್ಕೂ ಅಧಿಕ ಕರೋನಾ ಪ್ರಕರಣ ಪತ್ತೆಯಾಗಿದ್ದು, 5000 ಕ್ಕೂ ಹೆಚ್ಚು ಮಂದಿ ಕರೋನಾದಿಂದಾಗಿ ಮೃತಪಟ್ಟಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com