ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ

ಘಟನೆ ವರದಿಯಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ, ಯುವತಿಯ ಕತ್ತು ಮತ್ತು ಬೆನ್ನು ಮೂಳೆಯನ್ನು ಮುರಿಯಲಾಗಿದೆ ಎಂಬ ಸುಳ್ಳು ಸಂದೇಶಗಳು ಹರಿದಾಡಲು ಆರಂಭಿಸಿದವು
ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದ ಅಮಾನವೀಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದಲ್ಲೆಡೆ ಸಂಚಲನ ಹಬ್ಬಿಸುತ್ತಿರುವ ನಡುವೆಯೇ, ಮತ್ತೋರ್ವ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ನಡೆದ ಈ ಪೈಶಾಚಿಕ ಕೃತ್ಯ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗೆಳೆತನ ಬೆಳೆಸಿಕೊಳ್ಳುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಯುವತಿಯನ್ನು ಕರೆದೊಯ್ದ ಆರೋಪಿಗಳಾದ ಶಾಹಿದ್‌ ಮತ್ತು ಸಾಹಿಲ್‌, ಅಲ್ಲಿ ಅಮಾನುಷವಾಗಿ ಅತ್ಯಾಚಾರ ನಡೆಸಿ, ಅವಳು ಅಸ್ವಸ್ಥಳಾದಾಗ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಯುವತಿಯ ಆರೋಗ್ಯ ತೀವ್ರವಾಗಿ ಹದೆಗೆಡುತ್ತಿದ್ದಂತೆಯೇ ಯುವತಿಯನ್ನು ಮನೆಗೆ ಕಳುಹಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಘಟನೆ ವರದಿಯಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ, ಯುವತಿಯ ಕತ್ತು ಮತ್ತು ಬೆನ್ನು ಮೂಳೆಯನ್ನು ಮುರಿಯಲಾಗಿದೆ ಎಂಬ ಸಂದೇಶಗಳು ಹರಿದಾಡಲು ಆರಂಭಿಸಿದವು. ಆದರೆ, ಈ ವಿಚಾರವನ್ನು ಅಲ್ಲಗೆಳೆದಿರುವ ಪೊಲೀಸರು, ಪೋಸ್ಟ್‌ಮಾರ್ಟಮ್‌ ಪ್ರಕ್ರಿಯೆಯಲ್ಲಿ ಇದು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ
2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಪ್ರಕಾರ 2019ರಲ್ಲಿ ಉತ್ತರಪ್ರದೇಶದಲ್ಲಿ 59,853 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಪೋಕ್ಸೊ ಪ್ರಕರಣಗಳಲ್ಲಿಯೂ ಉತ್ತರ ಪ್ರದೇಶವೇ (7,444) ದೇಶದಲ್ಲಿ ಮುಂದಿದೆ. ಅದರಲ್ಲೂ 2019ರಲ್ಲಿ ಉನ್ನಾವೋ ಒಂದರಲ್ಲೇ 86 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ.

ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ಇನ್ನು ಕೇವಲ ಕಳೆದ ಎರಡು ತಿಂಗಳಲ್ಲಿಯೇ ಉತ್ತರ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಅಲ್ಲಿನ ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಟೊಳ್ಳಾಗಿದೆ ಎಂಬುದನ್ನು ತೋರಿಸುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com