ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲು ಉತ್ತರ ಪ್ರದೇಶದ ಪೊಲೀಸರು ಕೊಟ್ಟಿರುವು ಪಿಳ್ಳೆ ನೆಪವನ್ನು. ಇದಲ್ಲದೆ ಟ್ರಾಫಿಕ್ ಜಾಮ್ ನೆಪ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ.
ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!

ಉತ್ತರ ಪ್ರದೇಶದ ಹಾಥ್ರಸ್ ಎಂಬ ಊರಿನ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಅತ್ಯಾಚಾರ ಮಾಡಿದ ಪಾತಕಿಗಳು ಯುವತಿಯ ನಾಲಗೆಯನ್ನು ಕತ್ತರಿಸಿದ್ದರು. ಮರಣಾಂತಿಕ ಹಲ್ಲೆ ಮಾಡಿದ್ದರು‌. ಘಟನೆ ನಡೆದ ಮೂರು ದಿನಗಳ ಬಳಿಕ ಯುವತಿ ಮೃತಪಟ್ಟಳು. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿ 'ಸಂತ' ಯೋಗಿ ಆದಿತ್ಯನಾಥ್ ಗೆ ಸಂಕಟವಾಗಲಿಲ್ಲ. ಅವರ ಸಂಪುಟ ಸಹೋದ್ಯೋಗಿಗಳ ಮನ ಕರಗಲಿಲ್ಲ. ಸಮಾಜ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದವರಿಗೂ ಕರುಳು ಚುಳ್ ಎನ್ನಲ್ಲಿಲ್ಲ. ಯಾರೊಬ್ಬರಿಗೂ ಕಡೆಯ ಪಕ್ಷ ಯುವತಿಯ ಪೋಷಕರಿಗೆ ಸಾಂತ್ವನ ಹೇಳಬೇಕಿನಿಸಲಿಲ್ಲ. ಕ್ಷಮೆ ಅಲ್ಲದಿದ್ದರೂ ವಿಷಾದ ವ್ಯಕ್ತಪಡಿಸಬೇಕೆನಿಸಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ಟ್ವೀಟ್ ಅನ್ನು ಮಾಡಲಿಲ್ಲ.

ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಾಂತ್ವನ ಹೇಳಲು ಮುಂದಾದರು. ಅದಕ್ಕಾಗಿ ದೆಹಲಿಯಿಂದ ಉತ್ತರ ಪ್ರದೇಶದ ಹಾಥ್ರಸ್ ಕಡೆ ಹೊರಟರು. ಆದರೆ ಉತ್ತರ ಪ್ರದೇಶ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಮಾರ್ಗ ಮಧ್ಯೆಯೇ ತಡೆದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರತಿರೋಧ ತೋರಿದರೂ ಲೆಕ್ಕಿಸದ ಪೊಲೀಸರು ಇಬ್ಬರೂ ನಾಯಕರನ್ನು ದೈಹಿಕವಾಗಿ ತಡೆದು ಉದ್ಧಟತನ‌ ತೋರಿದರು. ಉತ್ತರ ಪ್ರದೇಶ ಪೊಲೀಸರು ಪಾತ್ರಧಾರಿಗಳು ಮಾತ್ರ. ಸೂತ್ರಧಾರಿ ಯೋಗಿ ಆದಿತ್ಯನಾಥ್ ಒಬ್ಬರೇ ಅಲ್ಲ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೇ ಉತ್ತರ ಪ್ರದೇಶದ ಪೊಲೀಸರು ಅಂದು ಮಧ್ಯರಾತ್ರಿ ಯುವತಿಯ ಶವ ಸಂಸ್ಕಾರ ಮಾಡುವಾಗಲು ಇದೇ ರೀತಿ ವರ್ತಿಸಿದ್ದರು. ನಡುರಾತ್ರಿಯಲ್ಲಿ ಕುಟುಂಬದವರನ್ನು ಕತ್ತಲಲ್ಲಿಟ್ಟು ಯುವತಿಯ ಅಂತ್ಯ ಸಂಸ್ಕಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ 'ಇಂಡಿಯಾ ಟುಡೆ' ವರದಿಗಾರ್ತಿ ತನುಶ್ರೀ ದತ್ತಾ (ಅವರೊಬ್ಬರೇ ಈ ಘಟನೆಯನ್ನು ವರದಿ ಮಾಡಿದ್ದು) ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದ ಪೊಲೀಸರು 'ನಮಗೇನು ಗೊತ್ತಿಲ್ಲ, ಜಿಲ್ಲಾಧಿಕಾರಿಗಳನ್ನು ಕೇಳಿ' ಎಂದು ಹೇಳುತ್ತಿದ್ದರು. ಜಿಲ್ಲಾಧಿಕಾರಿಗಳಿಗೆ ಕೇಳಿದ್ದರೆ 'ನಮಗೇನೂ ಗೊತ್ತಿಲ್ಲ, ಸರ್ಕಾರವನ್ನು ಕೇಳಿ' ಎಂದು ಹೇಳುತ್ತಿದ್ದರೇನೋ! ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಡೆದ ಪೊಲೀಸರಿಗೂ ಏನೂ ಗೊತ್ತಿಲ್ಲ. ಅವರು 'ಮೇಲಿನವರ' ಆಜ್ಞೆಯ ಪರಿಪಾಲಕರಷ್ಟೇ.

ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!
ಹಾಥ್ರಸ್‌ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ

ಮೇಲಿನವರಾದ ಮೋದಿ, ಅಮಿತ್ ಶಾ, ಯೋಗಿ ವಗೈರೆ ವಗೈರೆಗಳು ಬಹುಶಃ 'ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ' ಎಂಬ ನಿರ್ಧಾರಕ್ಕೆ ಬಂದಿರಬೇಕು. ಹಿಂದೆ ಬಿಜೆಪಿಯವರು ಗುಜರಾತ್ ಮಾಡೆಲ್ ಎನ್ನುತ್ತಿದ್ದರು. ಈಗ ಅದನ್ನು ಮರೆತಿದ್ದಾರೆ. ಬಿಜೆಪಿ ನಾಯಕರೀಗ ಯೋಗಿ ಮಾಡೆಲ್ ಎಂಬ ಹೊಸ ಮಂತ್ರವನ್ನು ಕಂಡುಕೊಂಡಿದ್ದಾರೆ. ಮೋದಿ 'ತಾನು ತಿನ್ನೊಲ್ಲ, ತಿನ್ನುವವರಿಗೂ ಬಿಡೊಲ್ಲ' ಎಂದು ಹೇಳಿದಂತೆ ಯೋಗಿ 'ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ' ಎಂಬ ಘೋಷವಾಕ್ಯ ಅನುಸರಿಸುತ್ತಿದ್ದಾರೆ. ಇದೇ ಬಿಜೆಪಿ ನಾಯಕರ ಯೋಗಿ ಮಾಡೆಲ್!

ಇಷ್ಟಕ್ಕೂ ರಾಹುಲ್-ಪ್ರಿಯಾಂಕಾ ಅವರನ್ನು ತಡೆದದ್ದೇಕೆ?

ಕಳೆದ ವಾರ ಹಾಥ್ರಸ್ ನಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರವಾಗಿ ಆಕೆ ಸಾವನ್ನಪ್ಪಿದ ಘಟನೆ ಇನ್ನೂ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಇದೇ ಉತ್ತರ ಪ್ರದೇಶದ ಬಲರಾಂಪುರದಲ್ಲಿ ಮತ್ತೊಂದು ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ.‌ ಆದರೂ ಆಳುವ ಸರ್ಕಾರ ನಿರ್ಲಜ್ಜತನದಿಂದ ಮತ್ತು ನಿರ್ಲಕ್ಷ್ಯದಿಂದ ವರ್ತಿಸಿದಾಗ ಸಹಜವಾಗಿಯೇ ಸಾರ್ವಜನಿಕರ ಆಕ್ರೋಶ ದುಪ್ಪಟ್ಟಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಥ್ರಸ್‌ಗೆ ಭೇಟಿಕೊಡಲು ಹೊರಟಿದ್ದಾರೆ. ಅವರು ದಲಿತ ಯುವತಿಯ ಪೋಷಕರಿಗೆ ಸಾಂತ್ವನ ಹೇಳಲೆಂದು ಹೊರಟಿರುವುದಾಗಿ ಬೆಳಿಗ್ಗೆಯಿಂದ ಎಲ್ಲಾ ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ. ಆದರೂ ಅವರನ್ನು ತಡೆಯಲಾಗಿದೆ.

ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲು ಉತ್ತರ ಪ್ರದೇಶದ ಪೊಲೀಸರು ಕೊಟ್ಟಿರುವು ಪಿಳ್ಳೆ ನೆಪವನ್ನು. ಕೋವಿಡ್ ಮಾರ್ಗಸೂಚಿ ಪ್ರಕಾರ ಅವರನ್ನು ಹಾಥ್ರಸ್ ಊರಿಗೆ ಕಳುಹಿಸಲು ಸಾಧ್ಯವಿಲ್ಲವೆಂದು ತಡೆದಿದ್ದಾರೆ. ಆದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬರುತ್ತಿದ್ದಾರೆಂದು ಒಂದೇ ಜಾಗದಲ್ಲಿ ನೂರಾರು ಮಂದಿ ಪೊಲೀಸರನ್ನು ನಿಯೋಜಿಸಿದ್ದು ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆ ಅಲ್ಲವೇ? ಇಷ್ಟಕ್ಕೂ ರಾಹುಲ್ ಗಾಂಧಿ ಅವರು 'ಕಾರ್ಯಕರ್ತರೆಲ್ಲರನ್ನೂ ಬಿಡಬೇಡಿ, ನಮ್ಮಿಬ್ವರಿಗೆ (ಪ್ರಿಯಾಂಕಾ ಗಾಂಧಿ) ಅವಕಾಶ ಕೊಡಿ' ಎಂದು ಕೇಳಿದ್ದಾರೆ. ಆಗಲಾದರೂ ಅವಕಾಶ ಮಾಡಿಕೊಡಬಹುದಿತ್ತಲ್ಲವೇ?

ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!
FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ

‌ಇದಲ್ಲದೆ ಟ್ರಾಫಿಕ್ ಜಾಮ್ ನೆಪ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬರುತ್ತಿದ್ದಾರೆ. ಜೊತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದಾರೆ ಎಂಬುದನ್ನು ಗ್ರಹಿಸಲಾರದಷ್ಟು ಬುದ್ಧಿಹೀನರಾಗಿದ್ದಾರೆಯೇ ಉತ್ತರ ಪ್ರದೇಶದ ಪೊಲೀಸರು? ಇದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತಲ್ಲವೇ? ಇವೆಲ್ಲವೂ ಕಾರಣಗಳು; 'ಅವರು (ಪೊಲೀಸರು ಮಾತ್ರವಲ್ಲ, ಬಿಜೆಪಿ ನಾಯಕರಿಗೆ) 'ತಾವು ಹೋಗಲ್ಲ, ಹೋಗುವವರನ್ನು ಬಿಡೊಲ್ಲ' ಎಂದು ನಿರ್ಧರಿಸಿದ್ದಾರೆ ಅಷ್ಟೇ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com