ಹಾಥ್ರಾಸ್‌: ಅತ್ಯಾಚಾರವೇ ನಡೆದಿಲ್ಲ ಎಂದ ಪೊಲೀಸರು

ಜಾತಿ ವೈಷಮ್ಯ ಹುಟ್ಟು ಹಾಕುವ ಷಡ್ಯಂತ್ರವನ್ನು ರಚಿಸಲಾಗಿತ್ತು. ಈ ಷಡ್ಯಂತ್ರದ ಹಿಂದಿರುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿ ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ.
ಹಾಥ್ರಾಸ್‌: ಅತ್ಯಾಚಾರವೇ ನಡೆದಿಲ್ಲ ಎಂದ ಪೊಲೀಸರು

ಹಾಥ್ರಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಉತ್ತರ ಪ್ರದೇಶದ ಉಪ ಪೊಲೀಸ್‌ ನಿರ್ದೇಶಕರಾದ ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ. ಪೋಸ್ಟ್‌ಮಾರ್ಟಮ್‌ ವರದಿಯ ಪ್ರಕಾರ ಅತ್ಯಾಚಾರವಾಗಿರುವುದಕ್ಕೆ ಯಾವುದೇ ಕುರುಹುಗಳಿಲ್ಲ ಎಂದು ಅವರು ಹೇಳಿದ್ದಾರೆ.

“ಪೋಸ್ಟ್‌ ಮಾರ್ಟಮ್‌ ವರದಿಯ ಪ್ರಕಾರ ಮೃತ ಯುವತಿಯ ದೇಹದಲ್ಲಿ ವೀರ್ಯ ಕಂಡು ಬಂದಿಲ್ಲ. ಆ ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ. ಮೃತ ಯುವತಿಯ ನಾಲಗೆಯನ್ನು ಕೂಡಾ ಕತ್ತರಿಸಲಾಗಿರಲಿಲ್ಲ,” ಎಂದು ಎಡಿಜಿ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜಾತಿ ವೈಷಮ್ಯವನ್ನು ಹುಟ್ಟುಹಾಕಲು ಮಾಡಿದಂತಹ ಷಡ್ಯಂತ್ರವಿದು. ಸುಳ್ಳು ಮಾಹಿತಿಯನ್ನು ಹುಟ್ಟು ಹಾಕಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ.

ಪೊಲೀಸರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮೃತ ಯುವತಿಯ ತಾಯಿ ಹೇಳಿದಂತೆ, ಅವಳ ಬಾಯಿಯಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು ಮತ್ತು ಅವಳ ಗುಪ್ತಾಂಗದಿಂದಲೂ ರಕ್ತಸ್ರಾವವಾಗುತ್ತಿತ್ತು. ಆದರೆ, ಪೊಲೀಸರ ಈ ಹೇಳಿಕೆ ಅದಕ್ಕೆ ತದ್ವಿರುದ್ದವಾಗಿದೆ.

ಈಗ ಯುವತಿಯ ಮೃತ ದೇಹವನ್ನು ಪೊಲೀಸರು ಆತುರದಲ್ಲಿ ಸುಟ್ಟಿರುವುದರಿಂದ, ಮೃತ ದೇಹದ ಮರು ಪರಿಶೀಲನೆಗೂ ಅವಕಾಶವಿಲ್ಲದಂತಾಗಿದೆ. ಸಂಪೂರ್ಣ ಪ್ರಭುತ್ವವೇ ಆರೋಪಿಗಳ ರಕ್ಷಣೆಗೆ ನಿಂತಿರುವುದು ಸ್ಪಷ್ಟವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com