2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB
ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ 554 ಪ್ರಕರಣಗಳೊಂದಿಗೆ ರಾಜಸ್ಥಾನ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ 537 ಮತ್ತು ಮಧ್ಯಪ್ರದೇಶದದಲ್ಲಿ 510 ಪ್ರಕರಣಗಳಲ್ಲಿ ದಾಖಲಾಗಿವೆ
2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಟಿಸಿದ ವರದಿಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಮೇಲೆ ನಡೆದಿರುವ ಅಪರಾಧಗಳ ಪ್ರಮಾಣವು 2018 ಕ್ಕೆ ಹೋಲಿಸಿದರೆ 2019 ರಲ್ಲಿ ಕ್ರಮವಾಗಿ 7% ಮತ್ತು 26% ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಶವನ್ನು ಹೊರಗೆಡವಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪರಿಶಿಷ್ಟ ಜಾತಿಯವರ ವಿರುದ್ಧ ಅಪರಾಧ ಎಸಗಿದ್ದಕ್ಕಾಗಿ ಒಟ್ಟು 45,935 ಪ್ರಕರಣಗಳು ದಾಖಲಾಗಿದ್ದು, 2018 ಕ್ಕೆ ಹೋಲಿಸಿದರೆ 7.3% ಹೆಚ್ಚಳವಾಗಿದೆ, 2018ರಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧ ನಡೆದ ಅಪರಾಧಗಳ 42,793 ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಉತ್ತರ ಪ್ರದೇಶ ಒಂದರಲ್ಲೇ 11,829 ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ ಎಸ್‌ಸಿಗಳ ವಿರುದ್ಧ ಅತಿ ಹೆಚ್ಚು ಅಪರಾಧಗಳು ದಾಖಲಾದ ರಾಜ್ಯವೆಂಬ ಕುಖ್ಯಾತಿಗೆ ಒಳಗಾಗಿದೆ. ನಂತರದ ಸ್ಥಾನವನ್ನು ರಾಜಸ್ಥಾನ ಹಾಗೂ ಬಿಹಾರ ಕ್ರಮವಾಗಿ ಪಡೆದುಕೊಂಡಿದೆ. ರಾಜಸ್ಥಾನದಲ್ಲಿ 6,794 ಮತ್ತು ಬಿಹಾರದಲ್ಲಿ 6,544 ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB
ಆದಿವಾಸಿ ಬುಡಕಟ್ಟು ಸಮುದಾಯಗಳ ಹಕ್ಕು, ಅಧಿಕಾರ, ಅಭಿವೃದ್ಧಿಯ ಒಳನೋಟ

ಅತ್ಯಾಚಾರ ಪ್ರಕರಣಗಳು

ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ 554 ಪ್ರಕರಣಗಳೊಂದಿಗೆ ರಾಜಸ್ಥಾನ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ 537 ಮತ್ತು ಮಧ್ಯಪ್ರದೇಶದದಲ್ಲಿ 510 ಪ್ರಕರಣಗಳಲ್ಲಿ ದಾಖಲಾಗಿವೆ.

2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB
ಪರಿಶಿಷ್ಟ ಪಗಂಡದವರ ಜೀವಿತಾವಧಿ ಕುಸಿಯುತ್ತಿದೆ

ಪರಿಶಿಷ್ಟ ಪಂಗಡಗಳ ವಿರುದ್ಧ ಅಪರಾಧ ಎಸಗಿದ್ದಕ್ಕಾಗಿ 2019ರಲ್ಲಿ ಒಟ್ಟು 8,257 ಪ್ರಕರಣಗಳು ದಾಖಲಾಗಿದ್ದು, 2018 ಕ್ಕೆ ಹೋಲಿಸಿದರೆ 26.5% ಹೆಚ್ಚಳವಾಗಿದೆ, 2018 ರಲ್ಲಿ 6,528 ಪ್ರಕರಣಗಳು ದಾಖಲಾಗಿತ್ತು. ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧ ಅಪರಾಧ ಎಸಗಿದ್ದಕ್ಕಾಗಿ 1,922 ಪ್ರಕರಣಗಳು ದಾಖಲಾಗಿದ್ದು (ಇದು ಅತಿ ಹೆಚ್ಚು), ರಾಜಸ್ಥಾನದಲ್ಲಿ 1,797 ಪ್ರಕರಣಗಳು ಮತ್ತು ಒಡಿಶಾದಲ್ಲಿ-576 ಪ್ರಕರಣಗಳು ದಾಖಲಾಗಿವೆ.

ಮಧ್ಯಪ್ರದೇಶದಲ್ಲಿ 358 (ಅತಿ ಹೆಚ್ಚು) ಬುಡಕಟ್ಟು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಛತ್ತೀಸ್‌ಗಢದಲ್ಲಿ 180 ಮತ್ತು ಮಹಾರಾಷ್ಟ್ರದಲ್ಲಿ 114 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

2019 ರಲ್ಲಿ ದಾಖಲಾದ 51,56,172 ಪ್ರಕರಣಗಳಲ್ಲಿ32,25,701 ಪ್ರಕರಣಗಳು ಭಾರತೀಯ ದಂಡ ಸಂಹಿತೆ(IPC) ಯಡಿಯಲ್ಲಿ ಮತ್ತು 19,30,471 ಪ್ರಕರಣಗಳು ವಿಶೇಷ ಮತ್ತು ಸ್ಥಳೀಯ ಕಾನೂನುಗಳ(SLL) ಅಡಿಯಲ್ಲಿ ದಾಖಲಾಗಿದೆ. ಇದು 2018 ರ ಪ್ರಕರಣಗಳಿಗೆ ಹೋಲಿಸಿದರೆ 1.6% ಹೆಚ್ಚಳವನ್ನು ತೋರಿಸಿದೆ. 2018ರಲ್ಲಿ ಒಟ್ಟು 50,74,635 ಪ್ರಕರಣಗಳು ದಾಖಲಾಗಿದ್ದವು.

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ 2018 ರಲ್ಲಿ 3,78,236 ಪ್ರಕರಣಗಳು ದಾಖಲಾಗಿತ್ತು, ಇದು 7.3% ರಷ್ಟು ಹೆಚ್ಚಳವಾಗಿದ್ದು 2019 ರಲ್ಲಿ ಒಟ್ಟು 4,05,861 ಪ್ರಕರಣಗಳು ದಾಖಲಾಗಿದೆ ಎಂದು ವರದಿ ತಿಳಿಸುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com