FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ

ವೈರಲ್‌ಗೊಂಡ ಚಿತ್ರದಲ್ಲಿರುವ ಹುಡುಗಿ ಯಾರೆಂಬುದು ಪತ್ತೆಯಾಗದಿದ್ದರೂ, ಆಕೆ ಹಾಥ್ರಸ್ ಅತ್ಯಾಚಾರದ ಬಲಿಪಶುವಲ್ಲ ಎಂಬುದು ಸಾಬೀತಾಗಿದೆ.
FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ

ದೇಶಾದ್ಯಂತ ವ್ಯಾಪಕ ಖಂಢನೆಗೆ ಒಳಗಾದ ಹಾಥ್ರಸ್ ಅತ್ಯಾಚಾರದ ಸಂತ್ರಸ್ತೆಯೆಂದು ವೈರಲ್‌ ಆದ ಚಿತ್ರ ಆಕೆಯದಲ್ಲ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ವೈರಲ್‌ಗೊಂಡ ಚಿತ್ರದಲ್ಲಿರುವ ಹುಡುಗಿ ಯಾರೆಂಬುದು ಪತ್ತೆಯಾಗದಿದ್ದರೂ, ಆಕೆ ಹಾಥ್ರಸ್ ಅತ್ಯಾಚಾರದ ಬಲಿಪಶುವಲ್ಲ ಎಂಬುದು ಸಾಬೀತಾಗಿದೆ.

FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ಹಾಥ್ರಸ್ ಅತ್ಯಾಚಾರ, ಕೊಲೆ ಪ್ರಕರಣದ ಕುರಿತಂತೆ ಆಕ್ರೋಶಗೊಂಡಿರುವ ಹಲವಾರು ಸಾಮಾಜಿಕ ಜಾಲತಾಣಿಗರು ʼಗದ್ದೆಯ ಎದುರು ಗುಲಾಬಿ ಬಣ್ಣದ ಚೂಡಿದಾರ ಧರಿಸಿ ನಿಂತಿರುವʼ ಹುಡುಗಿಯ ಭಾವಚಿತ್ರವೊಂದನ್ನು ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮನಿಷಾ ಎಂದು ಹಂಚಿ, ನ್ಯಾಯ ಕೇಳುತ್ತಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್‌(ICSSR )ನ ಪ್ರಾಧ್ಯಾಪಕಿ ಹಾಗೂ ಮಾನವ ಮತ್ತು ಮಹಿಳಾ ಹಕ್ಕುಗಳ ಸಂಘಟನೆಯ ಸಂಸ್ಥಾಪಕ ಮನುಶಿ ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇವರು ಮಾತ್ರವಲ್ಲದೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ಪ್ರಕರಣಕ್ಕೆ ಸಂಬಂಧವೇ ಪಡದಂತಹ ಈ ಅಪರಿಚಿತ ಹುಡುಗಿಯ ಚಿತ್ರವನ್ನು ಬಳಸಿಕೊಂಡಿದ್ದಾರೆ.

ಅಪರಿಚಿತ ಹುಡುಗಿ ಮತ್ತು ಬಲಿಪಶುವಿನ ಗುರುತನ್ನು ರಕ್ಷಿಸಲು ಸ್ಕ್ರೀನ್‌ಶಾಟ್‌ಗಳಲ್ಲಿ ಮುಖವನ್ನು ಮಸುಕಾಗಿಸಲಾಗಿದೆ.
ಅಪರಿಚಿತ ಹುಡುಗಿ ಮತ್ತು ಬಲಿಪಶುವಿನ ಗುರುತನ್ನು ರಕ್ಷಿಸಲು ಸ್ಕ್ರೀನ್‌ಶಾಟ್‌ಗಳಲ್ಲಿ ಮುಖವನ್ನು ಮಸುಕಾಗಿಸಲಾಗಿದೆ.

ವ್ಯಾಪಕವಾಗಿ ಹಂಚಿಕೆಯಾಗಿರುವ ಹುಡುಗಿ ತನ್ನ ಸಹೋದರಿಯಲ್ಲ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾಗಿ ಕ್ವಿಂಟ್‌ ವರದಿ ಮಾಡಿದೆ.

ವೈರಲ್‌ ಆಗಿರುವ ಚಿತ್ರದಲ್ಲಿರುವ ಹುಡುಗಿಯನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ. ಆದರೆಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಚಿತ್ರದಲ್ಲಿರುವುದು ತನ್ನ ಸಹೋದರಿಯಲ್ಲ ಮತ್ತು ಅವರಿಗೆ ಈ ಹುಡುಗಿ ಗೊತ್ತಿಲ್ಲ ಎಂದು ಸಂತ್ರಸ್ತೆಯ ಸಹೋದರ ದಿ ಕ್ವಿಂಟ್‌ಗೆ ತಿಳಿಸಿದ್ದಾರೆ.

ಆ ಮೂಲಕ ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೋರಿ ವೈರಲ್‌ ಆಗುತ್ತಿರುವ ಚಿತ್ರದಲ್ಲಿರುವುದು ಎಂಬುವುದು ಸ್ಪಷ್ಟವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com