ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ನಿರ್ಭಯಾ, ಪ್ರಿಯಾಂಕ ರೆಡ್ಡಿ ಪ್ರಕರಣದಂತೆ ಹತ್ರಾಸ್ ಪ್ರಕರಣವು ಆಕ್ರೋಶ ಅಥವಾ ಪ್ರಸಾರವನ್ನು ಗಳಿಸದಿರಲು ಆರೋಪಿಗಳ ʼಮೇಲ್ಜಾತಿಯ ಹಿನ್ನೆಲೆʼ ಕೂಡಾ ಒಂದು ಕಾರಣ
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

ಉತ್ತರಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನಡೆದ ದಲಿತ ಹೆಣ್ಣುಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ʼರಾಮರಾಜ್ಯʼ ವೆಂದು ಬಿಜೆಪಿ ಐಟಿಸೆಲ್‌ನಿಂದ ಬಿಂಬಿಸಿಕೊಳ್ಳುತ್ತಿರುವ ಯೋಗಿ ಆಡಳಿತದ ಉತ್ತರ ಪ್ರದೇಶದ ವಾಸ್ತವತೆ ಮತ್ತೊಮ್ಮೆ ಅನಾವರಣಗೊಂಡಿದೆ.

ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಉತ್ತರ ಪ್ರದೇಶ ವಿಭಜನೆಯಿಂದ ಕಾನೂನು ಸುವ್ಯವಸ್ಥೆ ಉತ್ತಮಗೊಳ್ಳಲಿದೆಯೇ?

ಅತ್ಯಾಚಾರದ ಹಾಗೂ ಬಲಾತ್ಕಾರದ ಭೀಕರತೆಗೆ ಬೆನ್ನುಹುರಿ, ತೊಡೆ ಮೂಳೆ ಹಾಗೂ ನಾಲಿಗೆ ತುಂಡರಿಸಲ್ಪಟ್ಟು ಅಪ್ರಜ್ಞಾವಸ್ಥೆಯಲ್ಲಿ ಸುದೀರ್ಘ ಜೀವನ್ಮರಣದ ಹೋರಾಟ ನಡೆಸಿದ 19 ರ ಹುಡುಗಿ, ದುರದೃಷ್ಟವಶಾತ್‌ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಥ್ರಸ್ ಘಟನೆ ಖಂಡಿಸಿ ಸಾಮಾಜಿಕ ಹೋರಾಟಗಾರರು, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಹಾಥ್ರಸ್ ಅತ್ಯಾಚಾರ‌ ಪ್ರಕರಣಕ್ಕೆ ಜಾತಿ ಬಣ್ಣ ಬಲಿಯಲಾಗುತ್ತದೆಯೆಂಬುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚಾವಸ್ತುವಾಗಿದೆ. ಆದರೆ ಹಾಥ್ರಸ್‌ ಪ್ರಕರಣದಲ್ಲಿ ಜಾತಿ ಎಷ್ಟು ಪ್ರಮುಖವಾಗಿದೆಯೆಂದು ಪ್ರಕರಣವನ್ನು ಬಿಡಿಬಿಡಿಯಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗಬಲ್ಲದು.

ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಉನ್ನಾವೊ ಅತ್ಯಾಚಾರ: ತಪ್ಪತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಧಾವಂತ ತೋರದ ಯೋಗಿ ಸರ್ಕಾರ

ಮೊದಲನೆಯದಾಗಿ, ಸಂತ್ರಸ್ತೆಯ ಸಹೋದರ ನೀಡಿರುವ ಹೇಳಿಕೆಯಲ್ಲಿ ಈ ಅಂಶ ಸ್ಪಷ್ಟವಾಗುತ್ತದೆ. ʼಅವರ (ಆರೋಪಿಗಳ) ಕುಟುಂಬ ನಮ್ಮ ಕುಟುಂಬದೊಂದಿಗೆ ಹಗೆತನ ಸಾಧಿಸುತ್ತಿದೆ. ಎರಡು ದಶಕಗಳ ಹಿಂದೆ, ಆರೋಪಿಗಳಲ್ಲಿ ಓರ್ವನಾದ ಸಂದೀಪ್‌ ಅಜ್ಜ ನಮ್ಮ ಅಜ್ಜನ ಮೇಲೆ ಹಲ್ಲೆ ನಡೆಸಿ ದಲಿತ ದೌರ್ಜನ್ಯ ಪ್ರಕರಣದಡಿಯಲ್ಲಿ ಮೂರು ತಿಂಗಳು ಜೈಲುವಾಸವನ್ನೂಅನುಭವಿಸಿದ್ರು. ಅದಾದ ಬಳಿಕ ಅವರು ಜಾತಿನಿಂದನೆ ಮಾಡುತ್ತಲೇ ಬಂದಿದ್ದಾರೆ. ನಾವು ನಿರ್ಲಕ್ಷಿಸುತ್ತಿದ್ದೆವುʼ ಅಂದಿದ್ದಾರೆ. ಇದರಿಂದ ಆರೋಪಿಗಳ ಕುಟುಂಬಕ್ಕಿದ್ದ ಜಾತಿ ಮೇಲರಿಮೆ ಹಾಗೂ ಸಂತ್ರಸ್ತೆಯ ಕುಟುಂಬದ ಮೇಲೆ ನಡೆಸುತ್ತಿದ್ದ ಜಾತಿ ನಿಂದೆಯ ಇತಿಹಾಸ ತೆರೆದುಕೊಳ್ಳುತ್ತದೆ.

ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಮೇಲ್ಜಾತಿಯವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಹುಡುಗಿ ಮೃತ್ಯು

ಆಘಾತಕಾರಿ ಅಂಶವೇನೆಂದರೆ, ಅತ್ಯಾಚಾರ ಹಾಗೂ ಕೊಲೆಯತ್ನ ನಡೆದು ಹತ್ತು ದಿನಗಳು ಕಳೆದರೂ ಅತ್ಯಾಚಾರ ನಡೆದಿಲ್ಲವೆಂದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿತ್ತು. ಬಳಿಕ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿರುವ ಕಾರಣಕ್ಕೆ ಕೊನೆಗೂ ಎಫ್‌ ಐ ಆರ್‌ ದಾಖಲಿಸಲಾಯಿತು ಎಂದು arre.co.in ವರದಿ ಮಾಡಿದೆ. ಪ್ರಬಲ ಜಾತಿಗಳು ರಾಜಕಾರಣದ ಮೂಲಕ ಅಧಿಕಾರದಲ್ಲಿ ತಮ್ಮ ಪ್ರಭಾವ ಬೀರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗುತ್ತದೆ.

ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಉತ್ತರ ಪ್ರದೇಶದಲ್ಲಿ ಗ್ಯಾಂಗ್‌  ರೇಪ್‌ ಪ್ರಕರಣಗಳು ದೇಶದಲ್ಲೇ ಅತ್ಯಧಿಕ

ಈ ನಡುವೆ ಮೃತ ಬಾಲಕಿಯ ಅಂತಿಮ ಸಂಸ್ಕಾರ ನಡೆಸಲು ಪೊಲೀಸರು ತರಾತುರಿ ನಡೆಸಿದ್ದಾರೆ ಎಂದು ಬಾಲಕಿಯ ಸಹೋದರ ಆರೋಪಿಸಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕುಟುಂಬಸ್ಥರ ಆರೋಪ ಹಾಗೂ ಮೇಲೆ ಉಲ್ಲೇಖಿಸಿದ ವರದಿಯನ್ನು ಸಮೀಕರಿಸುವುದಾದರೆ ಸ್ಥಳೀಯ ಪೊಲೀಸರಿಗೆ ಪ್ರಕರಣವನ್ನು ಮುಚ್ಚಿಹಾಕುವ ಅಥವಾ ಅದರ ಗಂಭೀರತೆಯನ್ನು ತಳ್ಳಿ ಹಾಕುವ ಒತ್ತಡವಿದೆ. ಹಾಗೂ ನಿರ್ಭಯಾ, ಹೈದರಾಬಾದ್‌ ಅತ್ಯಾಚಾರದಂತೆ ಟಿವಿ ಮಾಧ್ಯಮಗಳಲ್ಲಿ ಹಾಥ್ರಸ್‌ ಪ್ರಕರಣ ಮುಖ್ಯ ವಿಷಯವಾಗದಿರುವುದೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ನಡುವೆ ʼʼರಾಷ್ಟ್ರೀಯ ಸವರ್ಣ ಪರಿಷದ್‌ʼʼ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟವರು ʼಅಮಾಯಕರುʼ ಎನ್ನುವ ಮೂಲಕ ರಂಗಕ್ಕಿಳಿದಿದೆ. ಪೊಲೀಸರು ತಪ್ಪಾಗಿ ಅಮಾಯಕರನ್ನು ಬಂಧಿಸಿದೆ ಎಂದಿರುವ ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತಿದೆ. ಹಾಗೂ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಪರಿಷತ್‌ ದೊಡ್ಡ ಮಟ್ಟದ ಆಂದೋಲನ ನಡೆಸುವುದಾಗಿ ಎಸ್‌ಪಿ ಗೆ ಕೊಟ್ಟ ಮನವಿಯಲ್ಲಿ ಎಚ್ಚರಿಸಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ, ಆರೋಪಿಗಳನ್ನು ಬಂಧಿಸಿರುವುದು ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ. ಅಂದರೆ ಅಪ್ರಜ್ಞಾವಸ್ತೆಯಲ್ಲಿದ್ದ ಸಂತ್ರಸ್ತೆ ಪ್ರಜ್ಞೆ ಪಡೆದ ಬಳಿಕ ನೀಡಿದ ಹೇಳಿಕೆಯ ಆಧಾರದಲ್ಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸುತ್ತದೆ. ಆದರೆ, “ಸವರ್ಣ ಪರಿಷದ್‌”, ಆರೋಪಿಗಳನ್ನು ಅಮಾಯಕರು ಎಂದು ರಕ್ಷಿಸಲು ಹೊರಟಿದೆ.

ಹಾಥ್ರಸ್‌ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರ ʼಮೇಲ್ಜಾತಿಯ ಹಿನ್ನೆಲೆʼ ಅಂಶವು ಈ ಚರ್ಚೆಯಲ್ಲಿ ಸಂಪೂರ್ಣ ಅನಗತ್ಯ ಎಂದು ವಾದಿಸುತ್ತಿದ್ದಾರೆ. ಅದೇ ವೇಳೆ, 2012 ರಲ್ಲಿ ನಡೆದ ದೆಹಲಿ ನಿರ್ಭಯಾ ಪ್ರಕರಣದಂತೆ ಈ ಪ್ರಕರಣವು ಆಕ್ರೋಶ ಅಥವಾ ಪ್ರಸಾರವನ್ನು ಗಳಿಸದಿರಲು ಆರೋಪಿಗಳ ʼಮೇಲ್ಜಾತಿಯ ಹಿನ್ನೆಲೆʼ ಕೂಡಾ ಒಂದು ಕಾರಣ ಎಂದು ಸಾಮಾಜಿಕ ಜಾಲತಾಣದ ಹಲವರು ಗಮನಸೆಳೆದಿದ್ದಾರೆ.

ಮುಖ್ಯವಾಗಿ, ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಘೋಖಲೆ “ಈ ಅಪರಾಧವು ಜಾತಿ ಆಧಾರಿತವಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಈ ಸಂಗತಿಯನ್ನು ನಿರಾಕರಿಸುವವರು ಫ್ಯಾಸಿಸಂ ಅನ್ನು ಶಕ್ತಗೊಳಿಸುತ್ತಿದ್ದಾರೆ” ಎಂದು ವಾದಿಸಿದ್ದಾರೆ.

ಅಲ್ಲದೆ, ಹಾಥ್ರಸ್‌ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗಿಂತ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರಜಪೂತ ಸಮುದಾಯದವನ ಸಾವಿನ ಸುದ್ದಿಯನ್ನೇ ಮಾಧ್ಯಮಗಳು ಹೆಚ್ಚು ಬಿತ್ತರಿಸುತ್ತಿವೆ. ಈಗಲೂ ಈ ಪ್ರಕರಣದಲ್ಲಿ ಜಾತಿಗೆ ಸಂಬಂಧವಿಲ್ಲವೆಂದು ನೀವು ನಟಿಸುತ್ತಿದ್ದರೆ ನೀವು ನಿಮ್ಮನ್ನು ಹಾಗೂ ಇತರರನ್ನು ಮೂರ್ಖರನ್ನಾಗಿಸುತ್ತಿದ್ದೀರಿ ಎಂದು ಸಾಕೇತ್‌ ಗೋಖಲೆ ಪ್ರತಿಕ್ರಿಯಿಸಿದ್ದಾರೆ.

ಭಾರತದ ಪುರುಷ ಪ್ರಧಾನ ಮನಸ್ಥಿತಿ ಹಾಗೂ ಜಾತಿ ಪದ್ಧತಿ ಅಂತರ್ಗತವಾಗಿದ್ದು ಹಾಗೂ ಇವೆರಡರ ಪರಿಣಾಮವಾಗಿಯೇ ಗಣನೀಯ ಪ್ರಮಾಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತವೆ ಎಂಬ ಅಂಶಕ್ಕೆ ಪೂರಕವಾಗಿ ಪ್ರೊಫೆಸರ್‌ ಅಶೋಕ್‌ ಸ್ವೈನ್‌ ಅಂಕಿ ಅಂಶವನ್ನು ಹಂಚಿಕೊಂಡಿದ್ದಾರೆ.

ಮೇಲ್ಜಾತಿ ಪುರುಷರು ದಬ್ಬಾಳಿಕೆಯ ಅಸ್ತ್ರವಾಗಿ ಅತ್ಯಾಚಾರವನ್ನು ಬಳಸುತ್ತಾರೆ ಎಂದ ಅಶೋಕ್‌ ಸ್ವೈನ್‌ ಭಾರತದಲ್ಲಿ ಪ್ರತಿದಿನ ಕನಿಷ್ಟ ನಾಲ್ಕು ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶದ ಮೇಲೆ ಗಮನ ಸೆಳೆದಿದ್ದಾರೆ.

ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರು ಮತ್ತು ದಲಿತ ಕಾರ್ಯಕರ್ತರು "ಸವರ್ಣ ಪರಿಷದ್" ಅತ್ಯಾಚಾರಿಗಳಿಗೆ ಬೆಂಬಲವಾಗಿ ಹೊರಬರುತ್ತಿರುವುದನ್ನು ಉಲ್ಲೇಖಿಸಿ, ಈ ಪ್ರಕರಣದಲ್ಲಿ ಜಾತಿ ಏಕೆ ಮುಖ್ಯವಾಗಿದೆ ಎಂಬ ಅಂಶದ ಮೇಲೆ ಗಮನಸೆಳೆದಿದ್ದಾರೆ.

ಸವರ್ಣ ಪರಿಷದ್‌ ಅತ್ಯಾಚಾರಿ ಆರೋಪಿಗಳ ಪರ ವಕಾಲತ್ತು ವಹಿಸಿದನ್ನ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ದಲಿತ್‌ ವಾಯ್ಸ್‌ ಎಂಬ ಖಾತೆಯು, ಮೇಲ್ಜಾತಿ ಗುಂಪುಗಳು ಬಂಧನಕ್ಕೊಳಗಾಗದ ʼಠಾಕೂರ್‌ʼ ಆರೋಪಿಗಳ ಪರವಾಗಿ ತಿರಂಗಾ ಯಾತ್ರೆ ಅಥವಾ ಮೆರವಣಿಗೆ ನಡೆಸಿದರೂ ಆಶ್ಚರ್ಯವೇನಿಲ್ಲ ಎಂದು ಬರೆದುಕೊಂಡಿದೆ.

ಅಡ್ವಕೇಟ್‌ ಕರುಣಾ ನುಂಡಿ ʼಹತ್ರಾಸ್‌ ಪ್ರಕರಣದಲ್ಲಿ ಜಾತಿಯೊಂದಿಗೆ ಸಂಬಂದವಿಲ್ಲವೆಂದು ನಿರಾಕರಿಸುವುದು ದೌರ್ಜನ್ಯವನ್ನು ಮತ್ತಷ್ಟು ಶಕ್ತಗೊಳಿಸುತ್ತದೆ ಎಂದಿದ್ದಾರೆ.

ಒಟ್ಟಾರೆ, ಹಾಥ್ರಸ್‌ ಅತ್ಯಾಚಾರ ಸಂತ್ರಸ್ತೆ ದಲಿತೆ, ಆರೋಪಿಗಳು ನಾಲ್ವರು ಮೇಲ್ಜಾತಿಗೆ ಸೇರಿದವರು ಎನ್ನುವುದು ಸತ್ಯ ಹಾಗೂ ಈ ಅಂಶವನ್ನು ಮರೆತು ಬಿಡುವುದು ಅಪರಾಧ. ಯಾಕೆಂದರೆ ಸಂಪೂರ್ಣ ಪ್ರಕರಣವೂ ಜಾತಿ ಹಿನ್ನಲೆಯಿಂದಲೇ ನಡೆದಿರುವುದು.!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com