ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ರಂಗಕ್ಕಿಳಿದ ಬಿಹಾರದ ಮಾಜಿ ಡಿಜಿಪಿ ʼರಾಬಿನ್ ಹುಡ್ʼ ಅಲ್ಲ
ಪಾಂಡೆ ಅವರ ನಿವೃತ್ತಿಯ ದಿನ ಎಲ್ಲಾ ಸಮವಸ್ತ್ರಗಳನ್ನು ಸರಿಯಾಗಿ ಪ್ಯಾಕ್ ಮಾಡಿಲ್ಲದಿರಬಹುದು ಆದರೆ ಅವರ 'ನಿವೃತ್ತಿಯ' ದಿನದಂದು ಕೂಡಲೇ ಅವರು ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಯಿತು
ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ರಂಗಕ್ಕಿಳಿದ ಬಿಹಾರದ ಮಾಜಿ ಡಿಜಿಪಿ ʼರಾಬಿನ್ ಹುಡ್ʼ ಅಲ್ಲ

ಕರ್ತವ್ಯದಲ್ಲಿರುವ ಅನೇಕ ಅಧಿಕಾರಿಗಳು ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯ ರಂಗ ಸೇರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಅನೇಕರು ರಾಜಕೀಯದಲ್ಲೇ ಉನ್ನತ ಸ್ಥಾನಕ್ಕೂ ಏರಿದ್ದಾರೆ. ಆದರೆ ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲ. ಇತ್ತೀಚೆಗೆ ಸಿಂಗಂ ಎಂದೇ ಖ್ಯಾತರಾದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೂ ರಾಜಕೀಯ ರಂಗಕ್ಕಿಳಿದು ಬಿಜೆಪಿ ಸೇರಿದ್ದಾರೆ. ತಮಿಳುನಾಡಿನಲ್ಲಿ ಈ ಮೂಲಕ ಬಿಜೆಪಿಗೆ ನೆಲೆ ಒದಗಿಸುವ ಕಾರ್ಯ ತಂತ್ರ ಬಿಜೆಪಿಯದ್ದಾಗಿದೆ. ಮೊನ್ನೆಯಷ್ಟೆ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಯು ಪಕ್ಷ ಸೇರಿಕೊಂಡಿದ್ದಾರೆ. ಆದರೆ 1987 ರ ಬ್ಯಾಚಿನ ಐಪಿಎಸ್ ಅಧಿಕಾರಿ ಗುಪ್ತೇಶ್ವರ ಪಾಂಡೆ ಅವರಂತೆಯೇ ರಾಜಕೀಯ ಸೇರಲು ಯಾರೂ ʼತಮ್ಮ ಕಚೇರಿಯನ್ನು ಬಳಸಿಕೊಂಡಿಲ್ಲ’.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಸೆಪ್ಟೆಂಬರ್ 22 ರಂದು ಪಾಂಡೆ ಸ್ವಯಂಪ್ರೇರಿತ ನಿವೃತ್ತಿ ಅಥವಾ ವಿಆರ್ಎಸ್ ಗೆ ಅರ್ಜಿ ಸಲ್ಲಿಸಿದರು ಮತ್ತು ಅದೇ ಸಂಜೆ ಕೆಲವೇ ಗಂಟೆಗಳಲ್ಲಿ ಬಿಹಾರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಿಂದ ಮುಕ್ತರಾದರು - ಮುಂದಿನ ವರ್ಷದ ಫೆಬ್ರವರಿಯಲ್ಲಿ ಅವರು ನಿವೃತ್ತಿಯಾಗುವವರಿದ್ದರು. ಸೆಪ್ಟೆಂಬರ್ 27 ರ ಭಾನುವಾರ, ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರವನ್ನು ಆಳುತ್ತಿರುವ ಸರ್ಕಾರದ ಮುಖ್ಯಸ್ಥರಾಗಿರುವ ಜನತಾದಳ (ಯುನೈಟೆಡ್) ಗೆ ಸೇರ್ಪಡೆಗೊಂಡಿರುವುದಾಗಿ ಅವರು ಘೋಷಿಸಿದರು. 59 ವರ್ಷದ ಅಧಿಕಾರಿ ಅವರು ಈ ಮೊದಲು ಚುನಾವಣಾ ರಾಜಕೀಯಕ್ಕೆ ಸೇರುವ ಯೋಜನೆ ಇಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ವಿರುದ್ಧ ಪಾಟ್ನಾ ಪೊಲೀಸ್ ಠಾಣೆಯಲ್ಲಿ ವಿವಾದಾತ್ಮಕ ಎಫ್ಐಆರ್ ದಾಖಲಿಸಿದ ಸುದ್ದಿ ಹೊರಬಂದಾಗ ಇವರ ಹತ್ತಿರದವರಿಗೆ ಮನವರಿಕೆ ಆಯಿತು. ಮುಂಬೈನಲ್ಲಿ ತನ್ನ ಗೆಳೆಯ ಮತ್ತು ಬಿಹಾರ ಮೂಲದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸಂಬಂಧ ದಾಖಲಿಸಿದ ಈ ಪ್ರಕರಣ ರಾಜಕೀಯ ಪ್ರೇರಿತವಾಗಿತ್ತು ಎಂಬ ಅಂಶ. ಸುಶಾಂತ್ ಸಿಂಗ್ ರಜಪೂತ್ (ಎಸ್ಎಸ್ ಆರ್ ) ಅವರ ಸಾವನ್ನು ಮಹಾರಾಷ್ಟ್ರದ ಪೋಲೀಸರ ಬಳಿಯಿಂದ ತೆಗೆದುಕೊಂಡು ಸಿಬಿಐಗೆ ನೀಡಲು ಬಿಹಾರದಲ್ಲಿ ದಾಖಲಿಸಲಾದ ಈ ಎಫ್ಐಆರ್ ಆಧಾರವಾಯಿತು.

ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ರಂಗಕ್ಕಿಳಿದ ಬಿಹಾರದ ಮಾಜಿ ಡಿಜಿಪಿ ʼರಾಬಿನ್ ಹುಡ್ʼ ಅಲ್ಲ
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಪಾಂಡೆ ಅವರ ನಿವೃತ್ತಿಯ ದಿನ ಎಲ್ಲಾ ಸಮವಸ್ತ್ರಗಳನ್ನು ಸರಿಯಾಗಿ ಪ್ಯಾಕ್ ಮಾಡಿಲ್ಲದಿರಬಹುದು ಆದರೆ ಅವರ 'ನಿವೃತ್ತಿಯ' ದಿನದಂದು ಕೂಡಲೇ ಅವರು ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಯಿತು. ಅದು ಎಸ್ಎಸ್ಆರ್ ಸಾವಿನ ವಿವಾದವನ್ನು ಹೇಗೆ ರಾಜಕೀಕರಣಗೊಳಿಸಬಹುದು ಎಂಬ ಅಂಶ ಇರಲಿಲ್ಲ ಏಕೆಂದರೆ ಅದಕ್ಕೆ ಅವರು ಸಹ ಅಪಾರ ಕೊಡುಗೆ ನೀಡಿದ್ದಾರೆ. ವೀಡಿಯೋ ಹಾಡಿನ ಶೀರ್ಷಿಕೆ ಬಿಹಾರ್ ಕೆ ರಾಬಿನ್ ಹುಡ್ ಎಂದಾಗಿದ್ದು, ಹಾಡಿನ ವೇಗವು ದ್ವಿತೀಯಾರ್ಧದಲ್ಲಿ ನಿಧಾನ ಮತ್ತು ದುಃಖಕ್ಕೆ ತಿರುಗುತ್ತದೆ, ಏಕೆಂದರೆ ಬಿಹಾರದ ಸೂಪರ್ಸ್ಟಾರ್ ಅಗಿರುವ ಎಸ್ಎಸ್ಆರ್ ಅವರನ್ನು ಹೇಗೆ ಹತ್ಯೆ ಮಾಡಲಾಯಿತು ಮತ್ತು ಡಿಜಿಪಿ ಪಾಂಡೆ ಅವರ ಹೋರಾಟವು ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಹೇಗೆ ಕಾರಣವಾಯಿತು ಎಂಬುದನ್ನು ನೆನಪಿಸುತ್ತದೆ.

ವೀಡಿಯೊವು ಪಾಂಡೆ ಮತ್ತು ಅವರ ಶೌರ್ಯತನದ ಕ್ಲೋಸ್-ಅಪ್ ಫ್ರೇಮ್ಗಳನ್ನು ಸಹ ಹೊಂದಿದೆ, ಈ ವಿಡಿಯೋ ನಟ ಅಜಯ್ ದೇವ್ಗನ್ ಚಲನ ಚಿತ್ರದಲ್ಲಿ ಸಿಂಗಮ್ ಆಗಿ ನಟಿಸಿರುವ ನಟನೆಗೆ ಹೆಚ್ಚು ಹೋಲುತ್ತದೆ. ಈ ರಾಬಿನ್ ಹುಡ್ ವೀಡಿಯೋಗಳು ವಾಟ್ಸ್ ಅಪ್ ನಲ್ಲಿ ಸಹಸ್ರಾರು ಬಾರಿ ಫಾರ್ವರ್ಡ್ ಆಗಿವೆ. ಅದರೆ ಸಾಹಿತ್ಯವು ಸಂಪೂರ್ಣವಾಗಿ ಅಸಂಬದ್ಧವಾದ ನಿರೂಪಣೆಯನ್ನು ಹೊಂದಿದೆ. ಇತರ ಪೋಲೀಸರಂತೆ ಅಪರಾಧಿಗಳಲ್ಲಿ ಭಯವನ್ನು ಉಂಟುಮಾಡುವ ಪೊಲೀಸ್ ಅಧಿಕಾರಿಯಾಗಿ ಈ ಹಾಡು ಜನರನ್ನು ಸೆಳೆಯುತ್ತದೆ. ವೀಡಿಯೋದಲ್ಲಿ ಅಪರಾಧಿಗಳನ್ನು ಸ್ಥಳದಲ್ಲೇ ಶೂಟ್ ಮಾಡುವ ಚಲನ ಚಿತ್ರದ ಹೀರೋಗಳಂತೆ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಆಗಮಿಸುವ ಪಾಂಡೆಯ ಹಿನ್ನೆಲೆಯಲ್ಲಿ ಸ್ಪೋಟ ಮತ್ತು ಹೊಗೆ ಆವರಿಸಿಕೊಂಡಿರುತ್ತದೆ.

ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ರಂಗಕ್ಕಿಳಿದ ಬಿಹಾರದ ಮಾಜಿ ಡಿಜಿಪಿ ʼರಾಬಿನ್ ಹುಡ್ʼ ಅಲ್ಲ
ಬಿಹಾರ ಚುನಾವಣೆ: ತಂತ್ರ-ಪ್ರತಿತಂತ್ರದ ರಾಜಕೀಯದಾಟ ಆರಂಭ

ಆದರೆ ಪಾಂಡೆ ಅವರು ತಮ್ಮ ಯೌವನದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಚತ್ರ, ಜೆಹಾನಾಬಾದ್, ರಂಗಾಬಾದ್ ಮತ್ತು ರಾಂಚಿ (ಈಗ ಜಾರ್ಖಂಡ್ನಲ್ಲಿದೆ) ಸೇರಿದಂತೆ ಯಾವುದೇ ಜಿಲ್ಲೆಗಳು ಇವರ ರಾಬಿನ್ ಹುಡ್ ಚಮತ್ಕಾರಕ್ಕೆ ಸಾಕ್ಷಿಯಾಗಿಲ್ಲ. ಬೆಗುಸರೈನ ಎಸ್ಪಿ ಆಗಿ, ಅವರು ಕುಖ್ಯಾತ ಅಶೋಕ್ ಸಾಮ್ರಾಟ್ ಎಂಬ ಭೂಗತ ದೊರೆಯನ್ನು ಬಂಧಿಸಿದರು ಮತ್ತು ಸಾಮ್ರಾಟ್ ಬಳಿಯಿಂದ ವಶಪಡಿಸಿಕೊಂಡ ಎಕೆ-47 ಅವರ ಫೋಟೋವನ್ನು ಮಾಧ್ಯಮಗಳಿಗೆ ಪ್ರಮುಖ ಸುದ್ದಿ ಆಗಿತ್ತು. ನಂತರದ ವರ್ಷಗಳಲ್ಲಿ, ಅಪರಾಧ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪಾಂಡೆ ಅವರ ಹೆಸರು ಎಲ್ಲೂ ಕಾಣಿಸಲಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಪ್ರಕಾರ ಬಿಹಾರದಲ್ಲಿನ ಅಪರಾಧದ ಅಂಕಿ ಅಂಶ ಅವರನ್ನು ಹೊಗಳುವ ಚಿತ್ರವನ್ನು ಚಿತ್ರಿಸಲಿಲ್ಲ. ಆದರೆ ಪಾಂಡೆ ಈ ಬಗ್ಗೆ ತಮ್ಮದೆ ಆದ ಸಮರ್ಥನೆಯನ್ನೂ ಹೊಂದಿದ್ದರೆ. “ಅಪರಾಧ ಎಲ್ಲಿ ನಿಲ್ಲುತ್ತದೆ? ಎಲ್ಲಿಯೂ ಅಪರಾಧವನ್ನು ತಡೆಯಲು ಪ್ರಯತ್ನಿಸುವುದು ಪೊಲೀಸರ ಕೆಲಸ; ಅದು ಸಂಭವಿಸಿದ ನಂತರ, ಅಪರಾಧಿಗಳನ್ನು ಬಂಧಿಸಿ ನ್ಯಾಯಕ್ಕೆ ತರುವುದು ಪೊಲೀಸರ ಕೆಲಸ ”ಎಂದು ಅವರು ರಾಜ್ಯದ ಡಿಜಿಪಿ ಆದ ಕೆಲವೇ ದಿನಗಳಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಪಾಂಡೆ ಅವರ 34 ವರ್ಷಗಳ ಅವಧಿಯಲ್ಲಿ ಅವರು ಎಂದಿಗೂ ಕೆಳ ವರ್ಗದವರ, ಬಡವರ ಶೋಷಿತರಿಗೆ ಸಹಾಯವನ್ನೇನೂ ಮಾಡಿರಲಿಲ್ಲ. ಈ ರೀತಿಯ ಯಾವುದೇ ಘಟನೆಗಳೂ ಇಲ್ಲ. ಆದರೆ ಪಾಂಡೆ ಬಿಹಾರದ ಅಧಿಕಾರಶಾಹಿಯ ವ್ಯವಸ್ಥೆಯಲ್ಲಿ ಇತರರಿಗಿಂತ ಹೆಚ್ಚು ಮಾಧ್ಯಮ ಸ್ನೇಹಿಯಾಗಿದ್ದಾರೆ. ಪಾಂಡೆಯ ಬಹುತೇಕ ಎಲ್ಲ ಸ್ನೇಹಿತರು ಮತ್ತು ಪರಿಚಯಸ್ಥರು ಅವರು ಸ್ನೇಹಪರ ವ್ಯಕ್ತಿ ಎಂದು ಒಪ್ಪುತ್ತಾರೆ. ಆದರೆ ಪಾಂಡೆಯವರ ಸಾಮರ್ಥ್ಯವು ಹೆಚ್ಚಾಗಿ ಕೃತಕವಾಗಿತ್ತು. ಪಾಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಕೊಯಿಲ್ವಾರ್ನಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ವರದಿ ಮಾಡಲು ರಾತ್ರಿಯಲ್ಲಿ ಉತ್ಸಾಹದಿಂದ ಹೋದ ಪತ್ರಕರ್ತರೊಬ್ಬರು ಪಾಂಡೆ ಅವರು ತಮಗೆ ದೂರವಾಣಿ ಕರೆ ಮಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಈ ಧ್ವನಿ ಸಂಭಾಷಣೆ ಮಾರನೇ ದಿನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪತ್ರಕರ್ತರು ತಮ್ಮ ಕರೆಯನ್ನು ರೆಕಾರ್ಡ್ ಮಾಡುತಿದ್ದಾರೆ ಎಂದು ಪಾಂಡೆಗೆ ಗೊತ್ತಿದ್ದಿದ್ದರೆ ಮಾತನಾಡುವಾಗ ಇನ್ನಷ್ಟು ಜಾಗೃತರಾಗಿರುತಿದ್ದರು. ಅದರೆ ಪಾಂಡೆ ಅವರ ಆಡಿಯೋ ರೆಕಾರ್ಡಿಂಗ್ ವೈರಲ್ ಆಗಿದ್ದು ಆ ಮೂಲಕ ಪ್ರಚಾರವನ್ನು ದೂರದವರೆಗೆ ಸೆಳೆಯಿತು, ಆದರೆ ಅಕ್ರಮ ಮರಳು ವ್ಯಾಪಾರದ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತಿಸಲೇ ಇಲ್ಲ. ತಿಂಗಳುಗಳ ನಂತರ, ಭೋಜ್ಪುರ್ ಎಸ್ಪಿ ಹರ್ ಕಿಶೋರ್ ರಾಯ್, ಸ್ವತಃ ಫೀಲ್ಡಿಗಿಳಿದು ಅಕ್ರಮ ಮರಳು ಸಾಗಾಟಗಾರರನ್ನು ಮಟ್ಟ ಹಾಕಿದರು. ಪಾಂಡೆ ಅಧಿಕಾರಸ್ಥರಿಗೆ ಹತ್ತಿರವೇ ಆದರು. ಅಲ್ಲದೆ, ಅವರು ಕೆಲಸ ಮಾಡಿದ್ದ ಆರು ಮುಖ್ಯಮಂತ್ರಿಗಳಲ್ಲಿ ಯಾರೂ ಕೂಡ ಪಾಂಡೆ ಅವರನ್ನು ಅವರಿಗೆ ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆ ಮಾಡಲಿಲ್ಲ.

ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ರಂಗಕ್ಕಿಳಿದ ಬಿಹಾರದ ಮಾಜಿ ಡಿಜಿಪಿ ʼರಾಬಿನ್ ಹುಡ್ʼ ಅಲ್ಲ
ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಬಿಹಾರ ಚುನಾವಣಾ ದಾಳ?

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪಾಂಡೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ, ಆದರೆ ಅವರ ಐಪಿಎಸ್ ಹಿರಿಯ ಡಿ.ಎನ್. ಗೌತಮ್ ಅವರಂತೆ ಅವರು ಎಂದಿಗೂ ನೆಲದ ಜನರ ದೃಷ್ಟಿಯಲ್ಲಿ ಪ್ರಕಾಶಮಾನವಾಗಿ ಬೆಳಗಲಿಲ್ಲ. ಎಸ್ಪಿ ಗೌತಮ್ ಅವರ ವರ್ಗಾವಣೆಯನ್ನು ವಿರೋಧಿಸಿ ರೋಹ್ತಾಸ್ ಜಿಲ್ಲೆಯ ನಿವಾಸಿಗಳು ಬೀದಿಗಿಳಿದು ಪ್ರತಿಭಟಿಸಿದ್ದರು. 2008 ರಲ್ಲಿ, ಪರೇಶ್ ಸಕ್ಸೇನಾ ಅವರನ್ನು ಜಿಲ್ಲಾ ಎಸ್ಪಿ ಆಗಿ ನೇಮಕ ಮಾಡಿದ ಆರು ತಿಂಗಳ ನಂತರ ಗಯಾ ಜಿಲ್ಲೆಯಿಂದ ವರ್ಗಾವಣೆ ಮಾಡಲಾಯಿತು. ಏಕೆಂದರೆ ಅವರು ರಾಜ್ಯ ವಿಧಾನಸಭಾ ಸ್ಪೀಕರ್ ಉದಯ್ ನಾರಾಯಣ್ ಚೌಧರಿ ಅವರನ್ನು ಒಳಗೊಂಡ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಲು ಆದೇಶಿಸಿದ್ದರು. ಕೆಲವು ವರ್ಷಗಳ ಹಿಂದೆ, 2015 ರಲ್ಲಿ ಕೈಮೂರ್ ಬೆಟ್ಟಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಮಾಫಿಯಾ ವಿರುದ್ದ ಕ್ರಮ ಕೈಗೊಂಡಿದ್ದಕ್ಕಾಗಿ ರೋಹ್ತಾಸ್ ಎಸ್ಪಿ ಶಿವದೀಪ್ ಲ್ಯಾಂಡೆ ಅವರರನ್ನು ಆರು ತಿಂಗಳಿಗೇ ವರ್ಗಾವಣೆ ಮಾಡಲಾಯಿತು. ಮಾಧ್ಯಮ ಸ್ನೇಹಿಯಾಗಿರುವುದರ ಜೊತೆಗೆ, ಪಾಂಡೆ ಅವರು ಎಸ್ಪಿ ಯಾಗಿ ಕೆಲಸ ಮಾಡಿದ ಕೆಲವು ಜಿಲ್ಲೆಗಳನ್ನು ಪೋಲಿಸ್ ಸ್ನೇಹಿಯಾಗಿ ಮಾಡುವಲ್ಲಿ ಸಮುದಾಯದ ಸಹಯೋಗಗವನ್ನು ಬಳಸಿಕೊಂಡು ಜನರಿಗೆ ಪರಿಚಿತರಾದರು -ಎಂದು ಅವರ ಬೆಂಬಲಿಗರು ಅವರ ಜನಪ್ರಿಯತೆಗೆ ಕಾರಣವೆಂದು ವಿವರಿಸುತ್ತಾರೆ. ಆದಾಗ್ಯೂ, ಅವರು ಎಂದಿಗೂ ಲ್ಯಾಂಡೆ ಅಥವಾ ದಿವಂಗತ ಶ್ರೀವಾಸ್ತವ ಅವರಂತೆ ಜನಪ್ರಿಯರಾಗಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಪಾಂಡೆ ಗೆಲ್ಲಬಹುದು ಅಥವಾ ಗೆಲ್ಲದಿರಬಹುದು. ಮುಂದಿನ ವರ್ಷಗಳಲ್ಲಿ ಅವನು ಬಡವರ ಪರವೂ ಆಗಿರಬಹುದು ಆದರೆ ಅವರು ಖಾಕಿ ಧರಿಸಿದಾಗ ಅವರು ಎಂದಿಗೂ ರಾಬಿನ್ ಹುಡ್ ಆಗಿರಲಿಲ್ಲ ಎಂಬುದು ಕಟು ಸತ್ಯ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com