ಜನರಿಗೆ ಲಸಿಕೆ ವಿತರಿಸಲು ಕೇಂದ್ರದ ಬಳಿ ದುಡ್ಡಿದೆಯೇ? ಲಸಿಕೆ ತಯಾರಿಕಾ ಸಂಸ್ಥೆಯ CEO ಪ್ರಶ್ನೆ

ರಾಜ್ಯಗಳ ಪಾಲಿನ ಜಿಎಸ್‌ಟಿ ದುಡ್ಡನ್ನೇ ನೀಡಲು ಸಾಧ್ಯವಾಗದೆ ನರೇಂದ್ರ ಮೋದಿ ಸರ್ಕಾರ ಕೈಚೆಲ್ಲಿದೆ. ಇಂತಹ ಹೊತ್ತಲ್ಲಿ ಕೇಂದ್ರದ ಬಳಿ ಕರೋನಾ ಲಸಿಕೆ ವಿತರಿಸಲು ಅಗತ್ಯ ಬೇಕಾದ ಮೊತ್ತ ಇರಲಿದೆಯೇ ಎಂಬುವುದನ್ನು ಕೇಂದ್ರವೇ ತಿಳಿಸಬೇಕು.
ಜನರಿಗೆ ಲಸಿಕೆ ವಿತರಿಸಲು ಕೇಂದ್ರದ ಬಳಿ ದುಡ್ಡಿದೆಯೇ? ಲಸಿಕೆ ತಯಾರಿಕಾ ಸಂಸ್ಥೆಯ CEO ಪ್ರಶ್ನೆ

ಕರೊನಾ ಲಸಿಕೆ ಮುಂದಿನ ವರ್ಷದಲ್ಲೇನಾದರೂ ಸಿದ್ಧಗೊಂಡರೆ, ಅದು ಪ್ರತಿಯೊಬ್ಬರಿಗೂ ತಲುಪಿಸಲು ಕೇಂದ್ರದ ಬಳಿ 80 ಸಾವಿರ ಕೋಟಿ ರೂಪಾಯಿಗಳು ಸಿದ್ಧವಿದೆಯೇ ಎಂದು ಸೆರಮ್​ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಅದಾರ್​ ಪೂನವಾಲಾ ಪ್ರಶ್ನೆ ಮಾಡಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಭಾವ್ಯ ಕರೋನಾವೈರಸ್ ಲಸಿಕೆಯನ್ನು ಎಸ್​ಐಐ ದೊಡ್ಡ ಮಟ್ಟದಲ್ಲಿ ಉತ್ಪಾದಿಸುತ್ತಿದೆ. ಈ ಸಂದರ್ಭದಲ್ಲಿ ಅವರು ಇಂಥಹದ್ದೊಂದು ಪ್ರಶ್ನೆಯನ್ನು ಕೇಂದ್ರ ಸರ್ಕಾರದ ಎದುರಿಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂದಿನ ಒಂದು ವರ್ಷದಲ್ಲಿ ಭಾರತ ಸರ್ಕಾರದ ಬಳಿ 80,000 ಕೋಟಿ ಲಭ್ಯವಿರಲಿದೆಯೇ? ಏಕೆಂದರೆಚಭಾರತದಲ್ಲಿ ಎಲ್ಲರಿಗೂ ಲಸಿಕೆ ಖರೀದಿಸಲು ಮತ್ತು ವಿತರಿಸಲು ಆರೋಗ್ಯ ಸಚಿವಾಲಯಕ್ಕೆ ಈ ಮೊತ್ತದ ಅಗತ್ಯವಿದೆ. ನಾವು ನಿಭಾಯಿಸಬೇಕಾದ ಮುಂದಿನ ಸವಾಲು ಇದು ಎಂದು ಅದಾರ್‌ ಟ್ವೀಟ್‌ ಮಾಡಿದ್ದಾರೆ.

ಎಸ್‌ಐಐ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳನ್ನು ತಯಾರಿಸುವ ಕಂಪನಿಯಾಗಿದೆ. ಒಂದು ವೇಳೆ ಲಸಿಕೆ ಸಿದ್ಧಗೊಂಡದ್ದೇ ಆದರೆ, ಆರೋಗ್ಯ ಸಚಿವಾಲಯವು ಲಸಿಕೆಯನ್ನು ಖರೀದಿಸಿ ಭಾರತದಲ್ಲಿ ವಿತರಿಸಬೇಕಾಗುತ್ತದೆ. ಲಸಿಕೆ ಪ್ರತಿಯೊಬ್ಬರನ್ನೂ ತಲುಪಬೇಕೆಂದರೆ ಕನಿಷ್ಠ 80 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅದಾರ್‌ ಅಭಿಪ್ರಾಯ​.

“ನಾನು ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೇನೆಂದರೆ, ಭಾರತ ಮತ್ತು ವಿದೇಶಗಳಲ್ಲಿನ ಲಸಿಕೆ ತಯಾರಕರು ನಮ್ಮ ದೇಶದ ಅಗತ್ಯತೆ, ಸಂಗ್ರಹಣೆ ಮತ್ತು ವಿತರಣೆಯ ದೃಷ್ಟಿಯಿಂದ ಪೂರೈಸಲು ಯೋಜನೆ ರೂಪಿಸಬೇಕಿದೆ” ಎಂದು ಪೂನವಾಲಾ ಹೇಳಿದ್ದಾರೆ.

ರಾಜ್ಯಗಳ ಪಾಲಿನ ಜಿಎಸ್‌ಟಿ ದುಡ್ಡನ್ನೇ ನೀಡಲು ಸಾಧ್ಯವಾಗದೆ ನರೇಂದ್ರ ಮೋದಿ ಸರ್ಕಾರ ಕೈಚೆಲ್ಲಿದೆ. ಇಂತಹ ಹೊತ್ತಲ್ಲಿ ಕೇಂದ್ರದ ಬಳಿ ಕರೋನಾ ಲಸಿಕೆ ವಿತರಿಸಲು ಅಗತ್ಯ ಬೇಕಾದ ಮೊತ್ತ ಇರಲಿದೆಯೇ ಎಂಬುವುದನ್ನು ಕೇಂದ್ರವೇ ತಿಳಿಸಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com