SPB ಕುರಿತು ವಿವಾದಿತ ಪೋಸ್ಟ್: ನಿವೃತ್ತ ನ್ಯಾಯಾಧೀಶರನ್ನು ತರಾಟೆಗೆ ತೆಗೆದ ನೆಟ್ಟಿಗರು

ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇ ಕಟ್ಜು ವಿವಾದಗಳಲ್ಲಿ ಸಿಲುಕುವುದು ಇದು ಹೊಸದೇನಲ್ಲ. ಮುಖ್ಯವಾಗಿ ಮಹಿಳೆಯರ ವಿರುದ್ಧ ʼಸೆಕ್ಸಿಸ್ಟ್‌ʼ ಕಮೆಂಟ್‌ ಹಾಕುತ್ತಾರೆ ಎಂಬ ಆರೋಪಗಳೂ ಇವರ ಮೇಲೀದೆ.
SPB ಕುರಿತು ವಿವಾದಿತ ಪೋಸ್ಟ್: ನಿವೃತ್ತ ನ್ಯಾಯಾಧೀಶರನ್ನು ತರಾಟೆಗೆ ತೆಗೆದ ನೆಟ್ಟಿಗರು

ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕುರಿತಾಗಿ ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಅವರು ಜೀವಂತವಾಗಿದ್ದಾಗಲೇ ಮರಣಹೊಂದಿದ್ದಾರೆಂಬ ತಪ್ಪು ಮಾಹಿತಿಯನ್ನು ಕೆಲವರು ಹರಡಲಾರಂಭಿಸಿದ್ದರು. ಅಂತಹವರ ಸಾಲಿನಲ್ಲಿ ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಮಾರ್ಕಂಡೇ ಕಟ್ಜು ಕೂಡಾ ಸೇರಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಸ್‌ಪಿಬಿ ಮರಣದ ಕುರಿತು ಅಧಿಕೃತ ಹೇಳಿಕೆ ಹೊರಬರುವ ಮೊದಲೇ ಕಟ್ಜು ಅವರು ಎಸ್‌ಪಿಬಿ ಅವರ ಮರಣದ ಕುರಿತಾಗಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದರು. ಇದು ಎಸ್‌ಪಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಕಮೆಂಟ್‌ ಬಾಕ್ಸಿನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು ಸುಳ್ಳು ಮಾಹಿತಿ ಹರಡಬೇಡಿ ಎಂದು ಸೂಚಿಸಿದ್ದರು.

SPB ಕುರಿತು ವಿವಾದಿತ ಪೋಸ್ಟ್: ನಿವೃತ್ತ ನ್ಯಾಯಾಧೀಶರನ್ನು ತರಾಟೆಗೆ ತೆಗೆದ ನೆಟ್ಟಿಗರು
ಖ್ಯಾತ ಗಾಯಕ SP ಬಾಲಸುಬ್ರಮಣಿಯಮ್ ವಿಧಿವಶ

ತದನಂತರ ತನ್ನ ತಪ್ಪನ್ನು ತಿದ್ದಿಕೊಂಡ ಕಟ್ಜು, ದಕ್ಷಿಣ ಭಾರತದ ಶ್ರೇಷ್ಠ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೇಳಿ ನನಗೆ ವಿಷಾದವಾಗಿದೆ ಎಂದು ಮತ್ತೆ ಪೋಸ್ಟ್‌ ಹಾಕಿದ್ದರು. ಅಸಲಿ ವಿವಾದ ಶುರುವಾದದ್ದು ಈ ಪೋಸ್ಟ್‌ ಬಳಿಕ..!

I was sorry to hear that S.P. Balasubrahmanyam, a great South Indian singer, is critically ill

Posted by Markandey Katju on Thursday, September 24, 2020

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ʼದಕ್ಷಿಣ ಭಾರತʼಕ್ಕೆ ಸೀಮಿತಗೊಳಿಸಿದಕ್ಕಾಗಿ ನೆಟ್ಟಿಗರು ಕಟ್ಜು ಅವರನ್ನು ಮತ್ತೆ ತರಾಟಗೆ ತೆಗೆದುಕೊಂಡರು. ʼಕಾಶ್ಮೀರಿ ಪಂಡಿತ ನಿವೃತ್ತ ನ್ಯಾಯಾಧೀಶ ಭಾರತೀಯ ಆಗುವುದಾದರೆ ಭಾರತದಲ್ಲೇ ಇರುವ ಆಂಧ್ರದ ವ್ಯಕ್ತಿ ಹೇಗೆ ʼದಕ್ಷಿಣʼ ಭಾರತೀನಾಗುತ್ತಾನೆ? ಇದು ತಾರತಮ್ಯ.. ಎಂದು ಮೋಹನ್‌ ಕುಮಾರ್‌ ಜಿ ಎಂಬವರು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಹಲವಾರು ಹಿಂದಿ ಹಾಡುಗಳನ್ನು ಕೂಡಾ ಹಾಡಿದ್ದಾರೆ, ಈಗಲಾದರೂ ಅವರನ್ನು ಭಾರತೀಯ ಎಂದು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದ್ದಾರೆ.

ಅರುಣ್‌ ಕುಮಾರ್‌ ಪಿಲ್ಲೈ ಎಂಬವರು ಪ್ರತಿಕ್ರಿಯಿಸಿ, ದಕ್ಷಿಣ ಭಾರತೀಯ ಗಾಯಕ ಎನ್ನದೆ, ಕೇವಲ ಭಾರತೀಯ ಗಾಯಕ ಎಂದು ಏಕೆ ಕರೆಯಲಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅವರು ದಕ್ಷಿಣ ಭಾರತದ ಗಾಯಕ ಮಾತ್ರವಲ್ಲ, ಭಾರತೀಯ ಗಾಯಕ. ಸರ್ ಅವರ ಗಾಯನವನ್ನು ಪ್ರಾಂತ್ಯಗಳಲ್ಲಿ ನಿರ್ಬಂಧಿಸಲು ಪ್ರಯತ್ನಿಸಬೇಡಿ. ಅವರು ವಿವಿಧ ಭಾಷೆಗಳನ್ನು ಹಾಡಿದ ದಂತಕಥೆ ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

ವಿವಾದಗಳ ಸರಮಾಲೆಯ ಮಾರ್ಕಂಡೇ ಕಟ್ಜು

ಮಾರ್ಕಂಡೇ ಕಟ್ಜು ವಿವಾದದ ಕೇಂದ್ರ ಬಿಂದುವಾಗುವುದು ಇದೇ ಮೊದಲಲ್ಲ. ಈ ಹಿಂದೆ ಕಿರಣ್‌ ಬೇಡಿಯ ಬದಲು ಶಾಜಿಯಾ ಇಲ್ಮಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕಿತ್ತು. ಯಾಕೆಂದರೆ ಕಿರಣ್‌ ಗಿಂತಲೂ ಶಾಜಿಯಾ ಇಲ್ಮಿ ನೋಡಲು ಸುಂದರವಾಗಿದ್ದಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಬಳಿಕ ಗಾಂಧಿ ಬ್ರಿಟೀಷರ ಏಜೆಂಟ್‌, ಸುಭಾಶ್‌ ಚಂದ್ರ ಬೋಸ್‌ ಜಪಾನ್‌ ಏಜೆಂಟ್‌ ಎಂದು ಹೇಳಿಕೆ ನೀಡಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರು.

Keep away from women Just consider : 1. If Kaikeyi had not been over ambitious to get her own son Bharat declared as the...

Posted by Markandey Katju on Monday, June 13, 2016

ಸಾಮಾಜಿಕ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ದುರ್ಬಳಕೆಯ ಆರೋಪಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕಂಡೆ ಕಟ್ಜು ಅವರ ಹೆಸರು ಕೇಳಿ ಬರುವುದು ಹೊಸದೇನಲ್ಲ. ಹಲವಾರು ವಿಷಯಗಳ ಬಗ್ಗೆ ಅವರ ಅಸಂಬದ್ಧ ಕಾಮೆಂಟ್ಗಳು ಹೆಸರುವಾಸಿಯಾಗಿದೆ, ವಿಶೇಷವಾಗಿ ಮಹಿಳೆಯರ ವಿಷಯಕ್ಕೆ ಬಂದಾಗ.

ಫೇಸ್‌ಬುಕ್‌ನಲ್ಲಿ ಕಮೆಂಟಿಗಾಗಿ ನ್ಯಾಯಾಧೀಶರು ಮತ್ತೊಮ್ಮೆ ಮುಖ್ಯಾಂಶಗಳನ್ನು ಹೊಡೆದಿದ್ದಾರೆ. ಆಗಾಗ್ಗೆ ಲೈಂಗಿಕ ಹೇಳಿಕೆಗಳಿಗೆ ಗುರಿಯಾಗುತ್ತಿರುವ ಕಟ್ಜು, ತನ್ನ ಒಂದು ಪೋಸ್ಟ್‌ಗೆ ಕಾಮೆಂಟ್ ಮಾಡಿದ ಮಹಿಳೆಯೊಂದಿಗೆ ಬಹಿರಂಗವಾಗಿ ಚಾಟ್ ಮಾಡುತ್ತಿರುವುದು ಸಾಕಷ್ಟು ವೈರಲ್‌ ಆಗಿತ್ತು.

ಅದಾದ ಬಳಿಕ, ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದಾಗ ಗಡಿಯಾಚೆಗಿನ ಸಂಘರ್ಷದ ಅಂತ್ಯವಾಗುತ್ತದೆ ಎಂದು ಕಟ್ಜು ಹೇಳಿದ್ದರು. ನಂತರ ಅವರು, "ನಾವು ನಿಮಗೆ ಕಾಶ್ಮೀರವನ್ನು ನೀಡುತ್ತೇವೆ, ಆದರೆ ನೀವು ಬಿಹಾರವನ್ನು ಸಹ ತೆಗೆದುಕೊಳ್ಳಬೇಕು. ಇದು ಪ್ಯಾಕೇಜ್ ವ್ಯವಹಾರವಾಗಿದೆ. ಒಂದೋ ನೀವು ಕಾಶ್ಮೀರ ಮತ್ತು ಬಿಹಾರ ಎರಡನ್ನೂ ತೆಗೆದುಕೊಳ್ಳಬೇಕು, ಅಥವಾ ಏನೂ ಇಲ್ಲ. ನಾವು. ನಿಮಗೆ ಕಾಶ್ಮೀರವನ್ನು ಮಾತ್ರ ನೀಡುವುದಿಲ್ಲ ಎಂದು ಹೇಳಿ ಬಿಹಾರಿಗಳ ಕಣ್ಣು ಕೆಂಪಾಗಿಸಿದ್ದರು.

ಅದು ಮಾತ್ರವಲ್ಲದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಲಿವುಡ್‌ ನಟರಾದ ಸಂಜಯ್‌ ದತ್‌, ಸಲ್ಮಾನ್‌ ಖಾನ್‌, ಸೈಫ್‌ ಅಲಿ ಖಾನ್‌ ಅವರ ಸಮರ್ಥನೆಗೆ ಇಳಿದದ್ದು ಕೂಡಾ ಸಾಕಷ್ಟು ವಿವಾದ ಸೃಷ್ಟಿಸಿತ್ತು.

ತೀರಾ ಇತ್ತೀಚೆಗೆ, ಹಿಂದಿಯೇತರ ರಾಜ್ಯಗಳು ʼಹಿಂದಿ ಹೇರಿಕೆʼಯನ್ನು ವಿರೋಧಿಸುತ್ತಿರುವ ಹೊತ್ತಿನಲ್ಲಿ, ನಿವೃತ್ತ ನ್ಯಾಯಾಧೀಶ ಕಟ್ಜು ಹಿಂದಿ ಹೇರಿಕೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಸಾಕಷ್ಟು ವ್ಯಂಗ್ಯಕ್ಕೆ ಒಳಗಾಗಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com