ಚೀನಾ ಪರ ಗೂಢಾಚಾರ ಆರೋಪ: ಪತ್ರಕರ್ತ ಸೇರಿ ಮೂವರ ಬಂಧನ

ಚೀನಾ- ಭಾರತ ಗಡಿ ಸಂಘರ್ಷದ ನಡುವೆ ದೆಹಲಿ ಮೂಲದ ಪತ್ರಕರ್ತ ರಾಜೀವ್‌ ಶರ್ಮಾ ಎಂಬ ಪತ್ರಕರ್ತ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಚೀನಾ ಬೇಹುಗಾರಿಕೆಗೆ ನೀಡಿದ್ದಾರೆಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಚೀನಾ ಪರ ಗೂಢಾಚಾರ ಆರೋಪ: ಪತ್ರಕರ್ತ ಸೇರಿ ಮೂವರ ಬಂಧನ
ಚಿತ್ರಕೃಪೆ: ANI

ಭಾರತದ ಗಡಿ ಕಾರ್ಯತಂತ್ರ ಮತ್ತು ಚೀನಾದ ಗುಪ್ತಚರ ದಳಕ್ಕೆ ಸೇನೆಯ ನಿಯೋಜನೆ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ ದೆಹಲಿ ಮೂಲದ ಸ್ವತಂತ್ರ ಪತ್ರಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪ್ರಮುಖ ಬೇಹುಗಾರಿಕೆ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿಕೊಂಡಿದೆ.

ಅಲ್ಲದೆ, ರಾಜೀವ್‌ರಿಂದ ಮಾಹಿತಿ ಪಡೆಯುತ್ತಿದ್ದ ಓರ್ವ ಚೀನಾದ ಮಹಿಳೆ ಮತ್ತು ಆಕೆಯ ನೇಪಾಳ ಮೂಲದ ಸಹಚರನನ್ನು ಸಹ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೇಶಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ನೀಡಿರುವ ಕಾರಣಕ್ಕೆ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರಿಗೆ ಅಪಾರ ಪ್ರಮಾಣದ ಹಣವನ್ನು ಇವರು ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಂಧಿತ ಚೀನಾ ಮಹಿಳೆ ಹಾಗೂ ಆಕೆಯ ಸಹಚರರ ಮೂಲಕ ಚೀನಾ ಗುಪ್ತಚರಕ್ಕೆ ಶರ್ಮಾ ಮಾಹಿತಿ ರವಾನಿಸುತ್ತಿದ್ದಾರೆ. ಮಾಹಿತಿಗೆ ಬದಲಾಗಿ ಚೀನಾ ಗುಪ್ತಚರದಳವು ಅಪಾರ ಮೊತ್ತದ ಹಣವನ್ನು ಪತ್ರಕರ್ತರಿಗೆ ನೀಡುತ್ತಿತ್ತು. ಪೊಲೀಸ್‌ ವಿಶೇಷ ದಳ ಈ ಮೂವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

"ಬಂಧಿತರಿಂದ ಅಪಾರ ಸಂಖ್ಯೆಯ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್‌ಗಳು ಮತ್ತು ಹಲವು ಸೂಕ್ಷ್ಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಪಿತಾಂಪುರದಲ್ಲಿ ವಾಸವಾಗಿದ್ದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಯಿಂದ ಮಾನ್ಯತೆ ಪಡೆದಿರುವ ಪತ್ರಕರ್ತ ಶರ್ಮಾ ಅವರನ್ನು ದೆಹಲಿ ಪೊಲೀಸ್‌ ವಿಶೇಷ ದಳ ಸೋಮವಾರ ಬಂಧಿಸಿದೆ.

ಅವರು ಕೆಲವು ವರ್ಗೀಕೃತ ರಕ್ಷಣಾ-ಸಂಬಂಧಿತ ದಾಖಲೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. ತನಿಖೆ ಪ್ರಗತಿಯಲ್ಲಿದೆ ಮತ್ತು ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಾಗುವುದು "ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಶುಕ್ರವಾರ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಶ್ರೀ ಶರ್ಮಾ ಅವರು ಪ್ರತಿ ಮಾಹಿತಿಗೆ 1,000 ಡಾಲರ್‌ಗಳನ್ನು ಪಡೆಯುತ್ತಿದ್ದರು ಮತ್ತು ಒಂದೂವರೆ ವರ್ಷಗಳಲ್ಲಿ ಶರ್ಮಾರಿಗೆ 30 ಲಕ್ಷ ನೀಡಲಾಗಿದೆ. ಅವರು ಚೀನಾದ ಗ್ಲೋಬಲ್ ಟೈಮ್ಸ್‌ಗಾಗಿ ಭಾರತದ ರಕ್ಷಣಾ ಸಂಬಂಧಿತ ವಿಷಯಗಳ ಬಗ್ಗೆ ಬರೆದಿದ್ದಾರೆ ಮತ್ತು 2016 ರಲ್ಲಿ ಚೀನಾದ ಏಜೆಂಟರನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com