ಇನ್ಸ್ಟಗ್ರಾಮ್ ಬಳಕೆದಾರರ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ: ಫೇಸ್‌ಬುಕ್ ವಿರುದ್ಧ ಆರೋಪ

ಇನ್ಸ್ಟಗ್ರಾಮ್‌ ಬಳಕೆದಾರರ ಮೊಬೈಲ್ ಕೆಮರಾ ಬಳಸಿ ಫೇಸ್‌ಬುಕ್‌ ಬಳಕೆದಾರರ ಮೇಲೆ ಗೂಢಚಾರಿಕೆ ನಡೆಸುತ್ತಿದೆ. ಡೇಟಾ ಸಂಗ್ರಹಿಸುತ್ತಿದೆಯೆಂದು ಸ್ಯಾನ್‌ಫ್ರಾನ್ಸಿಸ್ಕೊ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಇನ್ಸ್ಟಗ್ರಾಮ್ ಬಳಕೆದಾರರ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ: ಫೇಸ್‌ಬುಕ್ ವಿರುದ್ಧ ಆರೋಪ

ಫೇಶಿಯಲ್‌ ರೆಕಗ್ನೈಸೇಶನ್(‌ಮುಖ-ಗುರುತಿಸುವಿಕೆ) ತಂತ್ರಜ್ಞಾನ ಬಳಸಿ ಫೇಸ್‌ಬುಕ್‌ ಇನ್ಸ್ಟಗ್ರಾಮ್‌ ಬಳಕೆದಾರರ ಬಯೋಮೆಟ್ರಿಕ್‌ ಡೇಟಾವನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗುತ್ತಿದೆ ಎಂದು ಸ್ಯಾನ್‌ ಫ್ರಾನ್ಸಿಸ್ಕೊ ಫೆಡರಲ್‌ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಬಳಕೆದಾರರ ಮೊಬೈಲ್‌ ಕೆಮರಾ ಮೂಲಕ ಫೇಸ್‌ಬುಕ್‌ ಬಳಕೆದಾರರ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಮುಖ್ಯವಾಗಿ ಐಫೋನ್‌ ಕೆಮರಾ ಸಕ್ರಿಯವಾಗಿ ಬಳಸದಿದ್ದರೂ, ನೋಟಿಫಿಕೇಶನ್‌ ಬರುತ್ತಿದ್ದು ಐಫೋನ್‌ನಲ್ಲಿ ಇನ್ಸ್ಟಾ ಬಳಸುವವರ ಮೇಲೆ ಗೂಢಚರ್ಯೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಫೇಸ್‌ಬುಕ್‌ ಈ ಆರೋಪವನ್ನು ತಳ್ಳಿಹಾಕಿದೆ ಮಾತ್ರವಲ್ಲ ಇದು ತಪ್ಪು ನೋಟಿಫಿಕೇಶನ್‌ ನೀಡುತ್ತಿರುವ ʼಬಗ್‌ʼ (bug) ನಿಂದಾದ ಸಮಸ್ಯೆ ಎಂದು ವಾದ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಿದ ದೂರಿನಲ್ಲಿ, ನ್ಯೂಜೆರ್ಸಿಯ ಇನ್‌ಸ್ಟಾಗ್ರಾಮ್ ಬಳಕೆದಾರ ಬ್ರಿಟಾನಿ ಕಾಂಡಿಟಿ ಅವರು ಕೆಮರಾ ಅಪ್ಲಿಕೇಶನ್‌ನ ಬಳಕೆಯು ಉದ್ದೇಶಪೂರ್ವಕವಾಗಿದೆ ಎಂದು ದೂರಲಾಗಿದೆ.

ದೂರಿನ ಪ್ರಕಾರ "ಅಮೂಲ್ಯವಾದ ಒಳನೋಟಗಳ ಮಾರುಕಟ್ಟೆ ಸಂಶೋಧನೆಗಾಗಿ ಬಳಕೆದಾರರ ಮನೆಯ ಗೌಪ್ಯತೆ ಸೇರಿದಂತೆ ತಮ್ಮ ಬಳಕೆದಾರರ ಅತ್ಯಂತ ಖಾಸಗಿ ವೈಯಕ್ತಿಕ ಡೇಟಾವನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸಂಗ್ರಹಿಸುತ್ತಿದೆ.

ಈ ಆರೋಪಗಳನ್ನೆಲ್ಲಾ ತಳ್ಳಿ ಹಾಕಿರುವ ಫೇಸ್‌ಬುಕ್‌ ಇನ್ಸ್ಟಗ್ರಾಮ್‌ ಹಾಗೂ ಫೇಸ್‌ಬುಕ್‌ ಫೇಶಿಯಲ್‌ ರೆಕಗ್ನೈಸೇಷನ್‌ ತಂತ್ರಜ್ಞಾನವನ್ನು ಬಳಸುವುದಿಲ್ಲ ಎಂದು ಹೇಳಿದೆ.

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ 2012 ರಲ್ಲಿ ಇನ್ಸ್ಟಗ್ರಾಮ್‌ ಅಪ್ಲೀಕೇಶನ್‌ಅನ್ನು ಒಂದು ಬಿಲಿಯನ್‌ ಡಾಲರ್‌ಗೆ ಕೊಂಡುಕೊಂಡಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com