ಸೂರ್ಯ ನಟನೆಯ ಚಿತ್ರದ ಹಾಡಿನ ವಿರುದ್ಧ ದೂರು ಸ್ವೀಕರಿಸಲು ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ
ರಾಷ್ಟ್ರೀಯ

ಸೂರ್ಯ ನಟನೆಯ ಚಿತ್ರದ ಹಾಡಿನ ವಿರುದ್ಧ ದೂರು ಸ್ವೀಕರಿಸಲು ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ

ಹಾಡಿನಲ್ಲಿ, "ಕೆಳಜಾತಿಯವರ ದೇಹ ಏನು ಚರಂಡಿಯೇ ಅಥವಾ ಮೇಲ್ಜಾತಿಯವರಿಗೆ ದೊಡ್ಡ ಕೊಂಬು ಇದೆಯೇ?" ಎಂಬ ಸಾಲುಗಳು ಜಾತಿ ವೈಷಮ್ಯ ಸೃಷ್ಟಿಸುತ್ತದೆ ಎಂದು ದೂರು ದಾಖಲಿಸಲಾಗಿತ್ತು.

ಪ್ರತಿಧ್ವನಿ ವರದಿ

ಅಕ್ಟೋಬರ್‌ 30 ರಂದು ಬಿಡುಗಡೆಯಾಗಲಿರುವ ಮಾಜಿ ವಾಯುಸೇನೆ ಅಧಿಕಾರಿ, ಕನ್ನಡಿಗ ಜಿ ಆರ್‌ ಗೋಪಿನಾಥ್‌ ರ ಸುತ್ತ ಹೆಣೆದಿರುವ ಸೂರ್ಯರ ಹೊಸ ಸಿನೆಮಾ ಸೂರರೈ ಪೋಟ್ರು (Soorarai Pottru) ಸಿನೆಮಾದ ಹಾಡೊಂದರ ವಿರುದ್ಧ ದೂರು ದಾಖಲಿಸುವಂತೆ ಮದ್ರಾಸ್‌ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸೂರ್ಯ ಅಭಿನಯದ ' ಸೂರರೈ ಪೋಟ್ರು ' ಚಿತ್ರದಲ್ಲಿ ಕಾಣಿಸಿಕೊಂಡಿರುವ 'ಮಣ್ಣುರುಂಡ ಮೇಲ ಮನುಸ ಪಾಯ ಆಟ್ಟಂ ಪಾರು' ನೊಂದಿಗೆ ಪ್ರಾರಂಭವಾಗುವ ಹಾಡಿನಲ್ಲಿ, "ಕೆಳಜಾತಿಯವರ ದೇಹ ಏನು ಚರಂಡಿಯೇ ಅಥವಾ ಮೇಲ್ಜಾತಿಯವರಿಗೆ ದೊಡ್ಡ ಕೊಂಬು ಇದೆಯೇ?" ಎಂಬ ಸಾಲುಗಳು ಜಾತಿ ವೈಷಮ್ಯ ಸೃಷ್ಟಿಸಬಹುದೆಂಬ ಕಾರಣಕ್ಕೆ 2022 ರವರೆಗೆ ಚಿತ್ರವನ್ನು ನಿಷೇಧಿಸುವಂತೆ ಕೋರಿ ಧರ್ಮಪುರಿಯ ಕಾರ್ತಿಕ್ ಎಂಬಾತ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.

ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾರ್ತಿಕ್ ಚೆನ್ನೈ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಧೀಶ ಇಲಾಂತಿರಾಯನ್ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಾಗ, ಅರ್ಜಿದಾರರ ದೂರು ಪೊಲೀಸ್ ಅಧೀಕ್ಷಕರಿಗೆ ತಲುಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಅನುಸರಿಸಿ ನ್ಯಾಯಾಧೀಶರು ಮತ್ತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿದರು ಮತ್ತು ದೂರನ್ನು ಕಾನೂನಿನ ಪ್ರಕಾರ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ಸದ್ಯ NEET ಪರೀಕ್ಷೆಗಳ ವಿರುದ್ಧ ಸೂರ್ಯ ಎತ್ತಿರುವ ದನಿಗಾಗಿ ಅವರ ವಿರುದ್ಧ ಹಗೆ ಸಾಧಿಸಲಾಗುತ್ತಿದೆ ಎಂದು ಅವರ ಅಭಿಮಾನಿಗಳು, ಬಹುತೇಕ ತಮಿಳುನಾಡಿನ ಜನರು ಭಾವಿಸಿದ್ದಾರೆ. ಕಳೆದ ವಾರ ನೀಟ್‌ ಪರೀಕ್ಷೆ ವಿರುದ್ಧ ಮಾತನಾಡಿದ್ದ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ಸಿಜೆಐಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಆರು ತಿಂಗಳ ಹಿಂದೆ ರಿಲೀಸ್‌ ಆಗಿರುವ ಹಾಡಿಗೆ ಈಗ ಪ್ರಕರಣ ದಾಖಲಿಸಲು ಆದೇಶ ಹೊರಡಿಸಿರುವುದು ಧ್ವೇಷ ಸಾಧನೆ ಎಂಬಂತೆ ವಿಮರ್ಷಿಸಲಾಗುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com