ಶೀವಸೇನೆಯಿಂದ ಥಳಿತಕ್ಕೊಳಗಾದ ಮಾಜಿ ನೌಕಾಧಿಕಾರಿ ಬಿಜೆಪಿಗೆ ಸೇರ್ಪಡೆ

ತನ್ನ ಹೌಸಿಂಗ್‌ ಬೋರ್ಡ್‌ ವಾಟ್ಸಾಪ್‌ ಗ್ರೂಪ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಸಂಬಂಧಿಸಿದ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡದ್ದಕ್ಕಾಗಿ ಅಮಾನವೀಯ ದಾಳಿಗೆ ಒಳಗಾದ ಮಾಜಿ ನೌಕಾ ಪಡೆಯ ಅಧಿಕಾರಿ ಮದನ್‌ ಶರ್ಮ ಬಿಜೆಪಿಗೆ ಸೇರಿಕೊಂಡಿದ್ದಾರೆ.

"ಇಂದಿನಿಂದ, ನಾನು ಬಿಜೆಪಿ-ಆರ್‌ಎಸ್ಎಸ್ ಜೊತೆ ಇದ್ದೇನೆ. ನನ್ನನ್ನು ಥಳಿಸಿದಾಗ, ನಾನು ಬಿಜೆಪಿ-ಆರ್‌ಎಸ್‌ಎಸ್ ಜೊತೆಗಿದ್ದೇನೆ ಎಂಬ ಆರೋಪವನ್ನು ಅವರು ಹೊರಿಸಿದ್ದರು. ಹಾಗಾಗಿ ಈಗ ನಾನು ಬಿಜೆಪಿ-ಆರ್‌ಎಸ್‌ಎಸ್ ಜೊತೆಗಿದ್ದೇನೆ ಎಂದು ಘೋಷಿಸುತ್ತೇನೆ" ಎಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮದನ್ ಶರ್ಮಾ ಹೇಳಿಕೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂಬೈನಲ್ಲಿ ಶಿವಸೇನೆ ಕಾರ್ಯಕರ್ತರಿಂದ ಥಳಿಸಲ್ಪಟ್ಟಿದ್ದ ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಅವರು ಮಂಗಳವಾರದಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರನ್ನು ರಾಜ್ ಭವನದಲ್ಲಿ ಭೇಟಿಯಾಗಿದ್ದಾರೆ.

ಶೀವಸೇನೆಯಿಂದ ಥಳಿತಕ್ಕೊಳಗಾದ ಮಾಜಿ ನೌಕಾಧಿಕಾರಿ ಬಿಜೆಪಿಗೆ ಸೇರ್ಪಡೆ
ಉದ್ಧವ್‌ ಠಾಕ್ರೆಯ ವ್ಯಂಗ್ಯ ಚಿತ್ರ ಹಂಚಿದ ಆರೋಪ: ನಿವೃತ್ತ ನೌಕಾಪಡೆ ಅಧಿಕಾರಿ ಮೇಲೆ ಹಲ್ಲೆ

"ನಾನು ಅವರಿಗೆ ಘಟನೆಯ ಬಗ್ಗೆ ವಿವರಿಸಿದೆ. ಆರೋಪಿಗಳ ವಿರುದ್ಧ ದಾಖಲಿಸಲಾದ ಪ್ರಕರಣಗಳು ದುರ್ಬಲವಾಗಿದೆ. ನನ್ನ ಮನವಿ ಪತ್ರದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು, ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ನಾನು ಒತ್ತಾಯಿಸಿದ್ದೇನೆ. ಅವರು ಕೇಂದ್ರದೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಶರ್ಮ ಹೇಳಿದ್ದಾರೆ.

ಕಳೆದ ಶುಕ್ರವಾರ, ಉದ್ಧವ್‌ ಠಾಕ್ರೆಯ ವಿರುದ್ಧದ ವ್ಯಂಗ್ಯ ಚಿತ್ರವೊಂದನ್ನು ಹಂಚಿಕೊಂಡದ್ದಕ್ಕಾಗಿ ಮದನ್‌ ಶರ್ಮ ಅವರ ಮೇಲೆ ಶಿವಸೇನೆ ಗೂಂಡಾಗಳು ದಾಳಿ ಮಾಡಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com