ವಿಶ್ವಸಂಸ್ಥೆಯ ಆಯೋಗ ಸದಸ್ಯ ಸ್ಥಾನಕ್ಕೆ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾದ ಭಾರತ

ಭಾರತದ ಅವಧಿಯು ಮುಂದಿನ ನಾಲ್ಕು ವರ್ಷಗಳವರೆಗೆ ಅಂದರೆ 2021ರಿಂದ 2025ರವರೆಗೆ ಇರಲಿದೆ.
ವಿಶ್ವಸಂಸ್ಥೆಯ ಆಯೋಗ ಸದಸ್ಯ ಸ್ಥಾನಕ್ಕೆ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾದ ಭಾರತ

ಮಹತ್ತರವಾದ ಬೆಳವಣಿಗೆಯಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ʼಮಹಿಳಾ ಸ್ಥಿತಿಗತಿ ಆಯೋಗʼದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ. ಜಾಗತಿಕವಾಗಿ ಮಹಿಳಾ ಸಮಾನತೆ ಮತ್ತು ಸಬಲೀಕರಣದ ಕುರಿತು ಕಾಳಜಿ ವಹಿಸುವ ಆಯೋಗ ಇದಾಗಿದೆ.

54 ಸದಸ್ಯ ರಾಷ್ಟ್ರಗಳು ಇರುವಂತಹ ಈ ಆಯೋಗದ 2021ನೇ ಅಧಿವೇಶನದ ಮೊದಲ ಸಭೆ ಸೋಮವಾರ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಏಷಿಯಾ-ಪೆಸಿಫಿಕ್‌ ರಾಷ್ಟ್ರಗಳಿಗೆ ಮೀಸಲಾಗಿದ್ದ ಎರಡು ಸ್ಥಾನಗಳಿಗೆ ಭಾರತ, ಚೀನಾ ಮತ್ತು ಅಫ್ಘಾನಿಸ್ತಾನದ ನಡುವೆ ಸ್ಪರ್ಧೆ ನಡೆದಿತ್ತು. ಅಫ್ಘಾನಿಸ್ತಾನಕ್ಕೆ 39 ಮತಗಳು, ಭಾರತಕ್ಕೆ 38 ಮತಗಳು ಲಭಿಸಿದರೆ, ಚೀನಾಗೆ ಕೇವಲ 27 ಮತಗಳು ಲಭಿಸಿದ್ದವು. ಬಹುಮತವನ್ನು ಗಳಿಸಲು ಕೂಡಾ ಚೀನಾ ವಿಫಲವಾಗಿತ್ತು.

ಈ ವಿಚಾರವನನು ಸ್ಪಷ್ಟ ಪಡಿಸಿರುವ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್‌ ತಿರುಮೂರ್ತಿ ಅವರು, ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯರಾಗಿ ಭಾರತ ಆಯ್ಕೆಯಾಗಿದೆ. ಭಾರತವನ್ನು ಬೆಂಬಲಿಸಿದ ಎಲ್ಲಾ ರಾಷ್ಟ್ರಗಳಿಗೂ ಧನ್ಯವಾದ, ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಅವಧಿಯು ಮುಂದಿನ ನಾಲ್ಕು ವರ್ಷಗಳವರೆಗೆ ಅಂದರೆ 2021ರಿಂದ 2025ರವರೆಗೆ ಇರಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com