ಕೇಂದ್ರ ಜಾರಿಗೆ ತಂದಿರುವ ಕೃಷಿ ಸುಗ್ರೀವಾಜ್ಞೆ ರೈತ ವಿರೋಧಿ ಮತ್ತು ಅಸಂವಿಧಾನಿಕ – ಯುವ ಕಾಂಗ್ರೆಸ್‌

ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವಂತಹ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಸುಗ್ರೀವಾಜ್ಞೆಗಳನ್ನು ಕೇಮದ್ರ ಸರ್ಕಾರ ಹೊರಡಿಸುವುದು ಸಂವಿಧಾನ ಬಾಹಿರ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಬಿ ವಿ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಜಾರಿಗೆ ತಂದಿರುವ ಕೃಷಿ ಸುಗ್ರೀವಾಜ್ಞೆ ರೈತ ವಿರೋಧಿ ಮತ್ತು ಅಸಂವಿಧಾನಿಕ – ಯುವ ಕಾಂಗ್ರೆಸ್‌

ಈ ಬಾರಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳು ರೈತ ವಿರೋಧಿಯಾಗಿರುವ ಕಾರಣದಿಂದ ಅವುಗಳನ್ನು ವಾಪಾಸ್ಸು ಪಡೆಯಬೇಕು ಎಂದು ಭಾರತೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಬಿ ವಿ ಹೇಳಿದ್ದಾರೆ. ಈಗಾಗಲೇ ರೈತರು ಮತ್ತು ಕೃಷಿ ಕ್ಷೇತ್ರ ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿದ್ದು, ಈ ಸುಗ್ರಿವಾಜ್ಞೆಗಳು ಗಾಯದ ಮೇಲೆ ಬರೆ ಎಳೆಯುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಸುಗ್ರೀವಾಜ್ಞೆಗಳು ರೈತರ ಉಳಿವಿಗೆ ಅಪಾಯಕಾರಿ, ಏಕೆಂದರೆ ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಸಿಗದಂತೆ ಮಾಡುವುದಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. 'ಈ ಸುಗ್ರೀವಾಜ್ಞೆಗಳು ಅಸಂವಿಧಾನಿಕ. ಕೃಷಿ ಎಂಬುದು ರಾಜ್ಯ ಸರ್ಕಾರಗಳ ವಿಷಯವಾಗಿದೆ, ಆದ್ದರಿಂದ, ರಾಜ್ಯಗಳ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಾಂವಿಧಾನಿಕ ಹಕ್ಕಿಲ್ಲ. ಈ ರೀತಿಯ ಕಾನೂನು ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಬೇಕಾಗಿದೆ, ಆದರೆ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಮತ್ತು ರಾಜ್ಯಗಳ ನ್ಯಾಯವ್ಯಾಪ್ತಿಯಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿದೆ " ಎಂದು ಶ್ರೀನಿವಾಸ್ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಸುಗ್ರೀವಾಜ್ಞೆಗಳ ಉದ್ದೇಶವು ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ವಿದೇಶಿ ಕಂಪನಿಗಳಿಗೆ ಕೃಷಿಯ ಹಕ್ಕನ್ನು ನೀಡುವುದೆ. ಇಡೀ ದೇಶವು ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಮತ್ತು ಸಂಸತ್ತು ಸಹ ಸೀಮಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವಾಗ, ಈ ಸುಗ್ರೀವಾಜ್ಞೆಯನ್ನು ಒಂದು ಸಮಯದಲ್ಲಿ ತರುವುದು ಸರ್ಕಾರದ ಉದ್ದೇಶವನ್ನು ಪ್ರಶ್ನಿಸುತ್ತದೆ" ಎಂದು ಅವರು ಆರೋಪಿಸಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com