ವಾರಂಟ್‌ ಇಲ್ಲದೆ ಯಾರನ್ನೂ ಬಂಧಿಸಬಹುದು: ಹೊಸ ಭದ್ರತಾ ಪಡೆ ರಚಿಸಿದ ಯೋಗಿ ಸರ್ಕಾರ
ರಾಷ್ಟ್ರೀಯ

ವಾರಂಟ್‌ ಇಲ್ಲದೆ ಯಾರನ್ನೂ ಬಂಧಿಸಬಹುದು: ಹೊಸ ಭದ್ರತಾ ಪಡೆ ರಚಿಸಿದ ಯೋಗಿ ಸರ್ಕಾರ

UPSSF ಪಡೆಗೆ ಯಾವುದೇ ಮ್ಯಾಜಿಸ್ಟ್ರೇಟ್‌ನ ಪೂರ್ವಾನುಮತಿ ಇಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು ಹಾಗೂ ಈ ವಿಭಾಗಕ್ಕೆ ಪ್ರತ್ಯೇಕ ಕಾನೂನುಗಳನ್ನು ರೂಪಿಸಲಾಗುವುದು

ಪ್ರತಿಧ್ವನಿ ವರದಿ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯಂತೆಯೇ ಅಧಿಕಾರ ಹೊಂದಿರುವ ವಿಶೇಷ ಪಡೆಯೊಂದನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗುವುದು, ಅದು ವಾರಂಟ್ ಇಲ್ಲದೆ ಯಾರನ್ನೂ ಶೋಧಿಸಬಹುದು ಮತ್ತು ಬಂಧಿಸಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಭಾನುವಾರ ತಿಳಿಸಿದೆ. ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡಗಳು, ಮೆಟ್ರೊಗಳು, ಬ್ಯಾಂಕುಗಳು ಮತ್ತು ಇತರ ಸರ್ಕಾರಿ ಕಚೇರಿಗಳನ್ನು ರಕ್ಷಿಸಲು ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ(UPSSF) ಅನ್ನು ನಿಯೋಜಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಂತೆ ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಅವಸ್ಥಿ "UPSSFನ ಎಂಟು ಬೆಟಾಲಿಯನ್ಗಳನ್ನು ಆರಂಭದಲ್ಲಿ ₹ 1,747.06 ಕೋಟಿ ವೆಚ್ಚದಲ್ಲಿ ರಚಿಸಲಾಗುವುದು" ಎಂದು ಹೇಳಿದ್ದಾರೆ. ಉದ್ದೇಶಿತ ಪಡೆಗೆ ಆರಂಭಿಕ ಮೂಲಸೌಕರ್ಯವನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಘಟಕವಾದ ಪಿಎಸಿ (Provincial Armed Constabulary) ಯಿಂದ ಪಡೆದುಕೊಳ್ಳಲಾಗುತ್ತದೆ. UPSSF ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ "ಕನಸಿನ ಯೋಜನೆಯಾಗಿದೆ" ಎಂದು ಹೇಳಿದ್ದಾರೆ.

" UPSSF ಪಡೆಗೆ ಯಾವುದೇ ಮ್ಯಾಜಿಸ್ಟ್ರೇಟ್‌ನ ಪೂರ್ವಾನುಮತಿ ಇಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು ಹಾಗೂ ಈ ವಿಭಾಗಕ್ಕೆ ಪ್ರತ್ಯೇಕ ಕಾನೂನುಗಳನ್ನು ರೂಪಿಸಲಾಗುವುದು" ಎಂದು ತಿಳಿಸಿದ್ದಾರೆ.

ವಾರಂಟ್‌ ಇಲ್ಲದೆ ಶೋಧ ಮತ್ತು ಬಂಧನ ಮಾಡುವ ಅಧಿಕಾರ ದುರುಪಯೋಗಗೊಳ್ಳಬಹುದು ಎಂದು ರಾಜಕೀಯ ಮತ್ತು ಕಾನೂನು ವಿಮರ್ಶಕರು ಸರ್ಕಾರದ ಇತ್ತೀಚಿನ ಕ್ರಮವನ್ನುಟೀಕಿಸಿದ್ದಾರೆ. ಟೀಕೆಗೆ ಸರ್ಕಾರದ ಕಡೆಯಿಂದ ಯಾವುದೇ ಪಚಾರಿಕ ಪ್ರತಿಕ್ರಿಯೆ ಬಂದಿಲ್ಲ, ಆದಾಗ್ಯೂ, UPSSF ಗೆ ನೀಡಲಾಗುವ ಅಧಿಕಾರಗಳು CISF ಹೋಲುತ್ತವೆ ಎಂದು ಮೂಲಗಳು ಒತ್ತಿಹೇಳುತ್ತವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com