ಹಿಂದಿ ಭಾರತದ ಏಕೀಕರಣದ ಶಕ್ತಿ- ಅಮಿತ್‌ ಶಾ
ರಾಷ್ಟ್ರೀಯ

ಹಿಂದಿ ಭಾರತದ ಏಕೀಕರಣದ ಶಕ್ತಿ- ಅಮಿತ್‌ ಶಾ

ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯಿಂದ ತುಂಬಿರುವ ಭಾರತದಲ್ಲಿ, ಹಿಂದಿ ಶತಮಾನಗಳಿಂದ ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ, ಎಂದು ಅಮಿತ್‌ ಶಾ ಹೇಳಿದ್ದಾರೆ.

ಪ್ರತಿಧ್ವನಿ ವರದಿ

ಹಿಂದಿ ದಿವಸದ ಹಿನ್ನಲೆಯಲ್ಲಿ ಟ್ವೀಟ್‌ ಮೂಲಕ ಶುಭಾಶಯ ಕೋರಿದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕೇಂದ್ರ ಸರ್ಕಾರ ತರಲು ಹೊರಟಿರುವ ನೂತನ ಶಿಕ್ಷಣ ನೀತಿಯನ್ನು ಸ್ವಾಗತಿಸಿದ್ದಾರೆ. ಈ ನೀತಿಯಿಂದಾಗಿ ಭಾರತದ ಇತರ ಭಾಷೆಯೊಂದಿಗೆ ಹಿಂದಿಯೂ ಬೆಳವಣಿಗೆ ಹೊಂದಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿರುವ ಶಾ, ಇಂದು, ಹಿಂದಿ ದಿನದಂದು, ಅದರ ಸಬಲೀಕರಣಕ್ಕೆ ಸಹಕರಿಸಿದ ಎಲ್ಲ ಗಣ್ಯರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ತಮ್ಮ ಮಾತೃಭಾಷೆಯೊಂದಿಗೆ ಹಿಂದಿಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಹಿಂದಿ ಭಾಷೆಯ ರಕ್ಷಣೆ ಮತ್ತು ಉತ್ತೇಜನಕ್ಕೆ ಹೆಚ್ಚಿನ ಕೊಡುಗೆ ನೀಡುವಂತೆ ದೇಶವಾಸಿಗಳಿಗೆ ಕರೆ ನೀಡುತ್ತೇನೆ. ಪ್ರತಿಜ್ಞೆ ತೆಗೆದುಕೊಳ್ಳಿ ಎಂದು ಹಿಂದಿ ದಿವಸ್‌ ಆಚರಣೆಯ ಶುಭಾಶಯಗಳು ಎಂದಿದ್ದಾರೆ.

ಒಂದು ದೇಶವನ್ನು ಅದರ ಗಡಿ ಮತ್ತು ಭೌಗೋಳಿಕತೆಯಿಂದ ಗುರುತಿಸಲಾಗುತ್ತದೆ, ಆದರೆ ಅದರ ದೊಡ್ಡ ಗುರುತು ಅದರ ಭಾಷೆ. ಭಾರತದ ವಿವಿಧ ಭಾಷೆಗಳು ಮತ್ತು ಉಪಭಾಷೆಗಳು ಅದರ ಶಕ್ತಿ ಮತ್ತು ಅದರ ಏಕತೆಯ ಸಂಕೇತವಾಗಿದೆ. ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯಿಂದ ತುಂಬಿರುವ ಭಾರತದಲ್ಲಿ, ಹಿಂದಿ ಶತಮಾನಗಳಿಂದ ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಿಂದಿ ಭಾರತೀಯ ಸಂಸ್ಕೃತಿಯ ಒಡೆಯಲಾಗದ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದ ನಂತರ ಇದು ರಾಷ್ಟ್ರೀಯ ಏಕತೆ ಮತ್ತು ಗುರುತಿನ ಪರಿಣಾಮಕಾರಿ ಮತ್ತು ಶಕ್ತಿಯುತ ಮಾಧ್ಯಮವಾಗಿದೆ. ಹಿಂದಿಯ ಬಹುದೊಡ್ಡ ಶಕ್ತಿ ಅದರ ವೈಜ್ಞಾನಿಕತೆ, ಸ್ವಂತಿಕೆ ಮತ್ತು ಸರಳತೆ ಎಂದು ಟ್ವೀಟ್‌ ಮಾಡಿದ್ದಾರೆ. ಮೋದಿ ಸರ್ಕಾರದ ಹೊಸ ಶಿಕ್ಷಣ ನೀತಿಯು ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ಸಮಾನಾಂತರ ಅಭಿವೃದ್ಧಿಗೆ ಕಾರಣವಾಗಲಿದೆ ಎಂದಿರುವ ಶಾ, ಯುವ ಪೀಳಿಗೆಯನ್ನು ಹಿಂದಿ ಕಡೆಗೆ ಆಕರ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com