ಕೋವಿಡ್‌-19: ಐದು ರಾಜ್ಯಗಳಲ್ಲಿ ಗುಣಮುಖರಾದವರ ಸಂಖ್ಯೆ ಅತೀ ಹೆಚ್ಚು

ಒಂದು ದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಪಟ್ಟಿಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ.
ಕೋವಿಡ್‌-19: ಐದು ರಾಜ್ಯಗಳಲ್ಲಿ ಗುಣಮುಖರಾದವರ ಸಂಖ್ಯೆ ಅತೀ ಹೆಚ್ಚು

ಈವರೆಗೆ ದೇಶದಲ್ಲಿ 37,02,595 ಜನರು ಕೋವಿಡ್‌ ಸೋಮಕಿಂದ ಗುಣಮುಖರಾಗಿದ್ದಾರೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸೋಂಕಿನಿಂದ ಗುಣಮುಖರಾಗಿರುವ ರೋಗಿಗಳ ಪೈಕಿ 58% ರೋಗಿಗಳು ಕೇವಲ ಐದು ರಾಜ್ಯಗಳಿಗೆ ಸೇರಿದವರು. ಅವುಗಳೆಂದರೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶ.

ವಿಪರ್ಯಾಸವೇನೆಂದರೆ, ದೇಶದ 60% ಕೋವಿಡ್‌ ಸಕ್ರೀಯ ಸೋಂಕಿತರು ಇರುವಂತಹ ರಾಜ್ಯಗಳು ಕೂಡಾ ಇವೇ ಆಗಿವೆ. ದೇಶದಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿರುವವರು ಶೇ. 77.88ರಷ್ಟು ಜನರು. ಉತ್ತರ ಪ್ರದೇಶದಲ್ಲಿ ಶೇ. 7.8, ಮಹಾರಾಷ್ಟ್ರದಲ್ಲಿ ಶೇ. 17.2, ತಮಿಳುನಾಡಿನಲ್ಲಿ ಶೇ. 13.1, ಆಂಧ್ರಪ್ರದೇಶದಲ್ಲಿ ಶೇ. 12.2 ಹಾಗೂ ಕರ್ನಾಟಕದಲ್ಲಿ ಶೇ. 7.9ರಷ್ಟು ಕರೋನಾ ಸೋಂಕಿತರು 24 ಗಂಟೆಗಳಲ್ಲಿ (ಸಕ್ರಿಯ ಪ್ರಕರಣಗಳಿಗೆ ಅನುಗುಣವಾಗಿ) ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 13,000 ಜನರು ಸೋಂಕಿನಿಂದ ಗುಣಮುಖರಾದರೆ ನಂತರದ ಸ್ಥಾನ ಆಂಧ್ರಪ್ರದೇಶಕ್ಕೆ ಲಭಿಸಿದೆ. ಆಂಧ್ರಪ್ರದೇಶದಲ್ಲಿ ಸುಮಾರು 10,000 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಆದರೆ, ಒಂದು ದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಪಟ್ಟಿಯಲ್ಲಿಯೂ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರದಲ್ಲಿ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com