ಸ್ವಾಮಿ ಅಗ್ನಿವೇಶ್ ಮರಣಕ್ಕೆ ವಿಕೃತ ಸಂಭ್ರಮಪಟ್ಟ IPS ನಾಗೇಶ್ವರ ರಾವ್
ರಾಷ್ಟ್ರೀಯ

ಸ್ವಾಮಿ ಅಗ್ನಿವೇಶ್ ಮರಣಕ್ಕೆ ವಿಕೃತ ಸಂಭ್ರಮಪಟ್ಟ IPS ನಾಗೇಶ್ವರ ರಾವ್

ಹಲವಾರು ಹಗರಣದ ಆರೋಪಗಳಿರುವ, ಕೋಮು ಪ್ರಚೋದಕ ಸಂದೇಶಗಳನ್ನು ಹರಡಿ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದ ರಾವ್‌, ಸೈದ್ಧಾಂತಿಕ ವಿರೋಧಿಗಳ ಸಾವಿನಲ್ಲಿ ಸಂಭ್ರಮಪಟ್ಟು ತನ್ನ ವಿಕೃತಿ ಮೆರೆದಿದ್ದಾರೆ.

ಶಿವಕುಮಾರ್‌ ಎ

RSS, ಸಂಘಪರಿವಾರದ ಹಿಂದುತ್ವದ ಕಟ್ಟರ್‌ ವಿರೋಧಿಯಾಗಿದ್ದ ಹಿರಿಯ ಸ್ವಾಮೀಜಿ ಅಗ್ನಿವೇಶ್‌ ಅವರ ಸಾವಿಗೆ ವಿಕೃತ ಸಂಭ್ರಮಪಟ್ಟು ಸಿಬಿಐ ಮಾಜಿ ನಿರ್ದೇಶಕ ನಾಗೇಶ್ವರ ರಾವ್‌ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಹಲವಾರು ಹಗರಣದ ಆರೋಪಗಳಿರುವ, ಕೋಮು ಪ್ರಚೋದಕ ಸಂದೇಶಗಳನ್ನು ಹರಡಿ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದ ರಾವ್‌, ಸೈದ್ಧಾಂತಿಕ ವಿರೋಧಿಗಳ ಸಾವಿನಲ್ಲಿ ಸಂಭ್ರಮಪಟ್ಟು ತನ್ನ ವಿಕೃತಿ ಮೆರೆದಿದ್ದಾರೆ.

ಬ್ರಾಹ್ಮಣ್ಯದ ಶ್ರೇಷ್ಟತೆಯ ವ್ಯಸದಿಂದ ಬಳಲುತ್ತಿರುವ ನಾಗೇಶ್ವರ್‌ ರಾವ್‌, ಸ್ವಾಮಿ ಅಗ್ನಿವೇಶ್‌ ಸಾವಿಗೆ ಸಂಭ್ರಮಪಟ್ಟು ಮಾಡಿರುವ ಟ್ವೀಟ್‌ನಲ್ಲಿ ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ ಎಂದು ಹೇಳಿದ್ದಾರೆ. ಜೀತ ಪದ್ಧತಿ, ಹಿಂದುತ್ವದ ಕೋಮುವಾದವನ್ನು ಸದಾ ವಿರೋಧಿಸಿ ಬಂದಿರುವ ಅಗ್ನಿವೇಶ್‌, ಈ ಹಿಂದೆ ಎರಡು ಬಾರಿ RSS ಭಯೋತ್ಪಾದಕರಿಂದ ಹಲ್ಲೆಗೊಳಗಾಗಿದ್ದರು.

ಆರ್ಯಸಮಾಜದ ಪ್ರತಿಪಾದಕರಾಗಿದ್ದ ಅಗ್ನಿವೇಶ್‌ ಸಾವಿಗೆ ವಿಕೃತ ಸಂಭ್ರಮಪಟ್ಟಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಖಂಡಿಸಿದ್ದಾರೆ. ಆದರೆ “ಸ್ವಾಮಿ ಅಗ್ನಿವೇಶ್‌ ತೊಲಗಿರುವುದು ಒಳ್ಳೆದಾಯಿತು, ನೀವು ಕೇಸರಿ ವಸ್ತ್ರಧಾರಿಯಾಗಿದ್ದರೂ ಹಿಂದೂ ಧರ್ಮಕ್ಕೆ ಹಾನಿಯೆಸಗಿದ್ದೀರಿ, ಇಷ್ಟು ಸಮಯ ಯಾಕೆ ಕಾದಿದ್ದೀರಿ ಎಂಬುದೇ ನನಗೆ ಯಮಧರ್ಮನ ಮೇಲಿರುವ ಆಕ್ಷೇಪ” ಎಂಬ ತನ್ನ ಟ್ವೀಟ್‌ ಅನ್ನು ರಾವ್‌ ಸಮರ್ಥಿಸಿಕೊಂಡಿದ್ದಾರೆ.

ಅಧರ್ಮೀಯರನ್ನು ಸಂಹರಿಸಲು ವಿಷ್ಣು ಒಂಭತ್ತು ಜನ್ಮಗಳನ್ನೆತ್ತಿದ, ಈ ಹಬ್ಬಗಳನ್ನು ನಾವು ಹೇಟ್‌ ವೈರಸ್‌ಗಳೆಂದು ಕರೆಯುತ್ತೇವೆಯೇ ಎಂದು ತನ್ನ ವಿಕೃತಿಯನ್ನು ಅನಾವರಣಗೊಳಿಸಿದ್ದಾರೆ

Click here to follow us on Facebook , Twitter, YouTube, Telegram

Pratidhvani
www.pratidhvani.com