ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಜನರ ಭಾವನೆಗಳೊಂದಿಗೆ ರಾಜಕಾರಣ ಮಾಡುವುದರಲ್ಲಿ ಮುಂದಿರುವ ಬಿಜೆಪಿ ಈ ಬಾರಿ ಬಿಹಾರ ಚುನಾವಣೆಗೆ ಸುಶಾಂತ್‌ ಪ್ರಕರಣವನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿದೆ.
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಬಿಹಾರ ಮೂಲದ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ನ್ಯಾಯ ಬೇಕೆಂದು ಬಿಜೆಪಿ ಬಿಹಾರದಲ್ಲಿ ಅಭಿಯಾನ ಶುರು ಮಾಡಿದೆ. ಅಭಿಯಾನದ ಅಂಗವಾಗಿ, ಸುಶಾಂತ್‌ ಭಾವಚಿತ್ರವಿರುವ ಸಾವಿರಾರು ಪೋಸ್ಟರ್‌ಗಳನ್ನು ಬಿಹಾರದಾದ್ಯಂತ ಅಂಟಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ʼನಾವು ಮರೆತಿಲ್ಲ, ನಾವು ಮರೆಯಲು ಬಿಡುವುದಿಲ್ಲʼ ಎಂಬ ಘೋಷವಾಕ್ಯವಿರುವ ಪೋಸ್ಟರ್‌ಗಳನ್ನು ಈಗಾಗಲೇ ಮುದ್ರಿಸಲಾಗಿದೆ.

ಬಿಜೆಪಿ ಸಾಂಸ್ಕೃತಿಕ ಮೋರ್ಚಾ ಈಗಾಗಲೇ 30 ಸಾವಿರ ಪೋಸ್ಟರ್‌ ಹಾಗೂ ಸ್ಟಿಕರ್‌ ಮತ್ತು 30 ಸಾವಿರದಷ್ಟು ಸುಶಾಂತ್‌ ಮುಖವಾಡವನ್ನು ʼನಾವು ಮರೆತಿಲ್ಲ, ನಾವು ಮರೆಯಲು ಬಿಡುವುದಿಲ್ಲʼ ಎಂದು ಮುದ್ರಿಸಿಟ್ಟಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುದ್ರಿಸಲಾದ ಪೋಸ್ಟರ್‌ಗಳನ್ನು ಆಟೊರಿಕ್ಷಾದಲ್ಲಿ, ಮನೆಗಳ ಬಾಗಿಲುಗಳಲ್ಲಿ ಅಂಟಿಸಲಾಗಿದೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ. ರಾಜ್‌ಗಿರಿಯಲ್ಲಿ ನಿರ್ಮಿಸ ಹೊರಟಿರುವ ಫಿಲ್ಮ್‌ ಸಿಟಿಗೆ ಮೃತ ನಟನ ಹೆಸರಿಡಬೇಕೆಂದೂ, ಪಾಟ್ನಾದ ರಾಜೀವ್‌ ನಗರದ ಚೌಕಕ್ಕೆ ಸುಶಾಂತ್‌ ಹೆಸರನ್ನು ಮರುನಾಮಕರಣಗೊಳಿಸಬೇಕೆಂದು ಈ ಹಿಂದೆ ಬಿಜೆಪಿ ಒತ್ತಾಯಿಸಿತ್ತು.

ಅದಾಗ್ಯೂ, ಈ ವರ್ಷಾಂತ್ಯದಲ್ಲಿ ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಈ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ. ಈ ಅಭಿಯಾನಕ್ಕೆ ಯಾವುದೇ ರಾಜಕೀಯ ಆಯಾಮಗಳಿಲ್ಲ ಎಂದು ಅಭಿಯಾನವನ್ನು ಪ್ರಾರಂಭಿಸಿದ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ ಹೇಳಿಕೊಂಡಿದೆ.

ಆದರೆ, ಸುಶಾಂತ್‌ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆ. ಸಿಬಿಐ ತನಿಖೆ ನಡೆಸುತ್ತಿದೆ. ತಮ್ಮದೇ ಪಕ್ಷ ಕೇಂದ್ರವನ್ನೂ ಆಳುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಇಷ್ಟೆಲ್ಲಾ ಇದ್ದಾಗ್ಯೂ, ಸುಶಾಂತ್‌ ಮರಣಕ್ಕೆ ನ್ಯಾಯ ಸಿಗಬೇಕೆಂದು ಬಿಜೆಪಿ ಅಭಿಯಾನ ಶುರು ಮಾಡಿರುವುದು, ರಾಜಕೀಯ ಕಾರಣಕ್ಕಾಗಿ ಅಲ್ಲವೆಂದರೆ, ಇನ್ನೇನು ಕೇಂದ್ರ ತನಿಖಾ ಸಂಸ್ಥೆಯ ತನಿಖೆಯ ಮೇಲೆ ನಂಬಿಕೆ ಇಲ್ಲದ ಕಾರಣಾಕ್ಕಾಗಿಯೇ? ಎಂಬ ಪ್ರಶ್ನೆ ಮೂಡುತ್ತದೆ.

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
ಬಿಹಾರ ಚುನಾವಣೆ: ಹಿಂದುಳಿದ ವರ್ಗಗಳ ಆದಾಯ ಮಿತಿ ಹೆಚ್ಚಳಕ್ಕೆ ಮುಂದಾಗುತ್ತಿರುವ ಕೇಂದ್ರ

ಸುಶಾಂತ್‌ ಅಸಹಜ ಮರಣ ಪ್ರಕರಣ ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳ ನಡುವಿನ ಶೀತಲ ಸಮರಕ್ಕೂ ಇದು ಕಾರಣವಾಗಿತ್ತು. ಬಿಹಾರ ಪೊಲೀಸರು ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ನಡೆದ ಬಳಿಕ, ಉಭಯ ರಾಜ್ಯದ ರಾಜಕಾರಣಿಗಳು ಪ್ರಕರಣದ ಕುರಿತಂತೆ ಪರಸ್ಪರ ವೈರುದ್ಧ್ಯದ ಹೇಳಿಕೆ ನೀಡಿದ್ದರು. ಎರಡು ರಾಜ್ಯಗಳ ನಡುವೆ ಉಂಟಾದ ಸಮಸ್ಯೆಯನ್ನು ಬಿಹಾರ ಚುನಾವಣೆಯವರೆಗೆ ಜೀವಂತವಾಗಿಡಲೋಸ್ಕರ ಬಿಜೆಪಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಿಹಾರ ಚುನಾವಣಾ ಉಸ್ತುವಾರಿಗಳಾಗಿ ನೇಮಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಸುಶಾಂತ್‌ ಪರವಾಗಿ ಭಾವನಾತ್ಮಕವಾಗಿ ದನಿ ಏರಿಸಿ, ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಡಿ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಬಿಜೆಪಿ ಬಯಸಿದೆ ಎಂದು ದಿ. ಪ್ರಿಂಟ್‌ ವಿಶ್ಲೇಷಿಸಿದೆ.

ಸುಶಾಂತ್‌ ಸಿಂಗ್‌ ಹಾಗೂ ʼರಜಪೂತʼ ರಾಜಕಾರಣ

ಸುಶಾಂತ್‌ ಸಿಂಗ್‌ ರಜಪೂತ ಸಮುದಾಯಕ್ಕೆ ಸೇರಿದವರು. ಬಿಹಾರದ ಜಾತಿ ಪೀಡಿತ ರಾಜಕಾರಣದಲ್ಲಿ ಸುಶಾಂತ್‌ ಅವರನ್ನು ಎದುರಿಟ್ಟು ರಜಪೂತ ಮತವನ್ನು ಬಾಚಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಬಿಜೆಪಿ ಮಾತ್ರವಲ್ಲ, ಲಾಲೂ ಪ್ರಸಾದ್‌ ಪಕ್ಷ ರಾಷ್ಟ್ರೀಯ ಜನತಾ ದಳ್‌(RJD), ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಲೋಕ್‌ ಜನಶಕ್ತಿ ಪಾರ್ಟಿ ಮೂಲತಃ ಹಿಂದುಳಿದ ವರ್ಗಗಳ ಮತ ಬ್ಯಾಂಕ್‌ ಹೊಂದಿದ್ದರೂ, ಸುಶಾಂತ್‌ ಪ್ರರಣದಿಂದ ರಜಪೂತ ಸಮುದಾಯವನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?

ಉದಾಹರಣೆಗೆ, ಲಾಲೂ ಪ್ರಸಾದ್‌ ಆಪ್ತ, ಮಾಜಿ ಸಚಿವ ಜೆ ಪಿ ಯಾದವ್, “ಸುಶಾಂತ್‌ ಪ್ರಕರಣವನ್ನು ಸಿಬಿಐ ಗೆ ವರ್ಗಾಯಿಸಲು ನಾವು ಮೊದಲು ಆಗ್ರಹಿಸಿದ್ದೆವು” ಎಂದು ಹೇಳಿದ್ದಾರೆ. ಅವರೂ ಕೂಡಾ, ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಜಗ್ದಾನಂದ್‌ ಸಿಂಗ್ ಕೂಡಾ ರಜಪೂತ ಸಮುದಾಯದವರು. ಅನ್ಯಾಯವಾಗಿ ಮೃತಪಟ್ಟ ಬಿಹಾರದ ಮಗನಿಗೆ ನ್ಯಾಯವನ್ನಷ್ಟೇ ನಾವು ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅದಾಗ್ಯೂ, ರಜಪೂತ ಸಮುದಾಯಕ್ಕೆ ಬಿಹಾರದಲ್ಲಿ ಕೇವಲ 4% ಮತ ಹಂಚಿಕೆ ಇದ್ದರೂ, ರಜಪೂತ ಸಮುದಾಯ ಪ್ರಭಾವೀ ಮೇಲ್ಜಾತೀ ಸಮುದಾಯವಾಗಿದ್ದು, ಚುನಾವಣೆಗಳ ಸಂಧರ್ಭದಲ್ಲಿ ಉಳಿದವರ ಮೇಲೆ ಪ್ರಭಾವ ಬೀರಲು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲು ಶಕ್ತರಾಗಿದ್ದಾರೆ. ಸದ್ಯ ರಜಪೂತ ಸಮುದಾಯ ಬಿಜೆಪಿ ಹಾಗೂ ಜೆಡಿಯುವನ್ನು ಬಹುವಾಗಿ ನೆಚ್ಚಿಕೊಂಡಿದೆ.

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ

ಬಿಹಾರದ 243 ವಿಧಾನಸಭಾ ಕ್ಷೇತ್ರದಲ್ಲಿ 40 ಕ್ಷೇತ್ರವನ್ನು ಗೆಲ್ಲುವಷ್ಟು ಛಾತಿ ರಜಪೂತ ಸಮುದಾಯಕ್ಕಿದೆ. 2015 ರ ಚುನಾವಣೆಯಲ್ಲಿ ಬಿಜೆಪಿ 30 ರಜಪೂತ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಮಹಾಘಟ್‌ಬಂಧನ್‌ ಅಡಿಯಲ್ಲಿ 12 ರಜಪೂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಒಟ್ಟಾರೆ ಆ ಚುನಾವಣೆಯಲ್ಲಿ 19 ರಜಪೂತ ಅಭ್ಯರ್ಥಿಗಳು ಗೆದ್ದು ಬಂದಿದ್ದರು. ಅದರಲ್ಲಿ ಓರ್ವ ಸುಶಾಂತ್‌ ಸಂಬಂಧಿ ನೀರಜ್‌ ಸಿಂಗ್‌, ಅವರು ಬಿಜೆಪಿ ಮುಖಾಂತರ ಗೆಲುವು ಸಾಧಿಸಿದ್ದರು.

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಬಿಹಾರ ಚುನಾವಣಾ ದಾಳ?

ಸುಶಾಂತ್ ಪ್ರಕರಣವು ರಜಪೂತ ಸಮುದಾಯದ ನಾಯಕರಿಗೆ ಬಿಹಾರದಲ್ಲಿ ತಮ್ಮ ಪ್ರಭಾವವನ್ನು ಪುನಃ ಪ್ರತಿಷ್ಟಾಪಿಸಲು ಅವಕಾಶ ನೀಡಿದೆ, ʼಮಂಡಲ್ ಯುಗʼದಿಂದ ರಾಜ್ಯದಲ್ಲಿ ಒಂದು ಕಾಲದಲ್ಲಿ ನಿಗ್ರಹಿಸಲ್ಪಟ್ಟಿದ್ದ ಜಾತಿಗಳ ಪ್ರಭಾವ ಏರಿಕೆಯಾಗುತ್ತಿದ್ದಂತೆ ರಜಪೂತರ ಪ್ರಭಾವ ಕ್ಷೀಣಿಸುತ್ತಿದೆ. ಪ್ರಸ್ತುತ ಬಿಹಾರ ವಿಧಾನಸಭೆಯಲ್ಲಿ 61 ಯಾದವ್ ಶಾಸಕರು, 38 ದಲಿತ ಮತ್ತು 24 ಮುಸ್ಲಿಂ ಶಾಸಕರು ಇದ್ದಾರೆ.

ಬಿಜೆಪಿ ನಾಯಕರೊಬ್ಬರ ಪ್ರಕಾರ "ಈ ಪ್ರಕರಣವು ರಜಪೂತ ಮುಖಂಡರಿಗೆ ತಮ್ಮ ಪ್ರಭಾವವನ್ನು ಪುನಃ ಪ್ರತಿಪಾದಿಸಲು ಅವಕಾಶವನ್ನು ಸೃಷ್ಟಿಸಿದೆ". ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವು ರಾಜ್ಯದಲ್ಲಿ ಪ್ರಮುಖ ವಿಷಯವಾಗಿ ಪರಿಣಮಿಸಲು ಇದು ಕೂಡಾ ಒಂದು ಕಾರಣವಾಗಿರಬಹುದು. ರಾಜಕೀಯವು ಸತ್ಯಗಳು ಮತ್ತು ವ್ಯಕ್ತಿಗಳ ಬಗ್ಗೆ ಮಾತ್ರವಲ್ಲದೆ ಭಾವನೆಯ ಸುತ್ತಲೂ ತಿರುಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ರಾಜಕೀಯ ಪಕ್ಷವು ಲಾಭಗಳಿಸಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ”

ಕೃಪೆ: ದಿ ಪ್ರಿಂಟ್

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com