ಜಿಡಿಪಿ ಕುಸಿತ ಎಚ್ಚರಿಕೆಯ ಕರೆಗಂಟೆ, ಸರ್ಕಾರ ಅರ್ಥಪೂರ್ಣ ಕ್ರಮ ಕೈಗೊಳ್ಳಬೇಕಾದ ಸಮಯ- ರಘುರಾಮ್ ರಾಜನ್
ರಾಷ್ಟ್ರೀಯ

ಜಿಡಿಪಿ ಕುಸಿತ ಎಚ್ಚರಿಕೆಯ ಕರೆಗಂಟೆ, ಸರ್ಕಾರ ಅರ್ಥಪೂರ್ಣ ಕ್ರಮ ಕೈಗೊಳ್ಳಬೇಕಾದ ಸಮಯ- ರಘುರಾಮ್ ರಾಜನ್

ಜೂನ್ ತ್ರೈಮಾಸಿಕದ ಆರ್ಥಿಕ ಬೆಳವಣಿಗೆಯಲ್ಲಿ ಶೇ 23.9 ರಷ್ಟು ಕುಸಿತ ಕಂಡಿರುವುದು ಆತಂಕಕಾರಿ, ಆಡಳಿತವರ್ಗ ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ

ಪ್ರತಿಧ್ವನಿ ವರದಿ

ಜೂನ್ ತ್ರೈಮಾಸಿಕದ ಆರ್ಥಿಕ ಬೆಳವಣಿಗೆಯಲ್ಲಿ ಶೇ 23.9 ರಷ್ಟು ಕುಸಿತ ಕಂಡಿರುವುದು ಆತಂಕಕಾರಿ, ಆಡಳಿತವರ್ಗ ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಹೆಚ್ಚು ಚಿಂತನಶೀಲ ಮತ್ತು ಸಕ್ರಿಯ ಸರ್ಕಾರದ ಅಗತ್ಯವಿದೆ ಎಂದೂ ಅವರು ಸೇರಿಸಿದ್ದಾರೆ.

ʼಅತೀ ಹೆಚ್ಚು COVID-19 ಪೀಡಿತ ಇಟಲಿಯಲ್ಲಿ ಶೇಕಡಾ 12.4 ರಷ್ಟು ಕುಸಿತ ಮತ್ತು ಅಮೆರಿಕಾದಲ್ಲಿ ಶೇಕಡಾ 9.5 ರಷ್ಟು ಕುಸಿತದೊಂದಿಗೆ ಹೋಲಿಸಿದರೆ ಭಾರತದಲ್ಲಿ ಶೇಕಡಾ 23.9 ರಷ್ಟು ಜಿಡಿಪಿ ಕುಸಿದಿದೆ.(ಅಸಂಘಟಿತ ವಲಯದಲ್ಲಿನ ಹಾನಿಯ ಅಂದಾಜುಗಳನ್ನು ಪಡೆದಾಗ ಈ ಸಂಖ್ಯೆ ಇನ್ನೂ ಕೆಟ್ಟದಾಗಿರಬಹುದು), ಆರ್ಥಿಕ ಬೆಳವಣಿಗೆಯ ಈ ತೀವ್ರ ಕುಸಿತವು ನಮ್ಮೆಲ್ಲರನ್ನೂ ಎಚ್ಚರಿಸಬೇಕು.ʼ ರಾಜನ್ ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಸ್ತುತ ಚಿಕಾಗೊ ಯುನಿವರ್ಸಿಟಿಯಲ್ಲಿ ಪ್ರೊಫೆಸರಾಗಿ ಸೇವೆ ಸಲ್ಲಿಸುತ್ತಿರುವ ರಾಜನ್‌, ಕರೋನಾ ಸಾಂಕ್ರಾಮಿಕ ರೋಗ ಭಾರತದಲ್ಲಿ ಇನ್ನೂ ಉಲ್ಬಣದಲ್ಲಿದೆ. ಆದ್ದರಿಂದ ಜನರು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲಿದ್ದಾರ, ವಿಶೇಷವಾಗಿ ಜನ ಸಂಪರ್ಕ ಹೆಚ್ಚಿರುವ ವಿಶೇಷವಾಗಿ ರೆಸ್ಟೊರೆಂಟ್‌, ಅದಕ್ಕೆ ಸಂಬಂಧಿಸಿದಂತಹ ವ್ಯವಹಾರಗಳು ಕರೋನಾ ನಿಯಂತ್ರಣಕ್ಕೆ ಬರುವವರೆಗೆ ನಿಧಾನಗತಿಯಲ್ಲಿಯೇ ಸಾಗಲಿದೆ ಎಂದಿದ್ದಾರೆ.

ಸಂಭಾವ್ಯ ಅಪಾಯದ ಬೆದರಿಕೆಯಿಂದ ಸರ್ಕಾರ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳದೆ, ಅದರ ಸಂಪನ್ಮೂಲಗಳನ್ನು ವ್ಯಯಿಸದೆ ಶೇಖರಿಸಿಡಲು ಪ್ರಯತ್ನಿಸುತ್ತಿದೆ. ಈ ತಂತ್ರವು ಸ್ವಯಂ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರದ ಪರಿಹಾರ ಅಥವಾ ಬೆಂಬಲದ ಮಹತ್ವವನ್ನು ಒತ್ತಿ ಹೇಳಿದ ರಾಜನ್, "ಪರಿಹಾರ ಕ್ರಮಗಳಿಲ್ಲದಿದ್ದರೆ ಆರ್ಥಿಕತೆಯ ಬೆಳವಣಿಗೆಯ ಸಾಮರ್ಥ್ಯಕ್ಕೆ ಗಂಭೀರವಾಗಿ ಹಾನಿಯಾಗುತ್ತದೆ" ಎಂದು ಎಂದಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com