ಕಂಗನಾ ಬಂಗಲೆ ತೆರವು; ಚಟುವಟಿಕೆ ಸ್ಥಗಿತಗೊಳಿಸುವಂತೆ BMCಗೆ ಬಾಂಬೆ ಹೈಕೋರ್ಟ್ ಆದೇಶ

ಕಂಗನಾ ಬಂಗಲೆ ತೆರವು; ಚಟುವಟಿಕೆ ಸ್ಥಗಿತಗೊಳಿಸುವಂತೆ BMCಗೆ ಬಾಂಬೆ ಹೈಕೋರ್ಟ್ ಆದೇಶ

ನಟಿ ಕಂಗನಾ ರಾಣಾವತ್‌ ಸೇರಿದ ಬಾಂದ್ರಾದಲ್ಲಿನ ಆಸ್ತಿಯ ಬಗ್ಗೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತೆರವುಗೊಳಿಸುವ ಪ್ರಕ್ರಿಯೆಯನ್ನು ಬಾಂಬೆ ಹೈಕೋರ್ಟ್ ಇಂದು ತಡೆಹಿಡಿದಿದೆ.

ನಟಿ ಕಂಗನಾ ರಾಣಾವತ್‌ ಸೇರಿದ ಬಾಂದ್ರಾದಲ್ಲಿನ ಆಸ್ತಿಯ ಬಗ್ಗೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತೆರವುಗೊಳಿಸುವ ಪ್ರಕ್ರಿಯೆಯನ್ನು ಬಾಂಬೆ ಹೈಕೋರ್ಟ್ ಇಂದು ತಡೆಹಿಡಿದಿದೆ.

ನ್ಯಾಯಮೂರ್ತಿಗಳಾದ ಎಸ್.ಜೆ. ಕಥವಾಲ್ಲಾ ಮತ್ತು ಆರ್.ಐ.ಚಾಗ್ಲಾ ಅವರ ನ್ಯಾಯಪೀಠ ಇಂದು ಈ ವಿಷಯವನ್ನು ಆಲಿಸಿದೆ.

ಈ ವಿಷಯದ ಬಗ್ಗೆ ರಾಣಾವತ್ ಸಲ್ಲಿಸಿದ ಮನವಿಯ ಮೇರೆಗೆ ಯಾವುದೇ ತೆರವುಗೊಳಿಸುವಿಕೆಯ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಬಿಎಂಸಿಗೆ ಆದೇಶಿಸಿದೆ. ಈ ಪ್ರಕರಣವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಹೆಚ್ಚಿನ ವಿಚಾರಣೆಗೆ ತೆಗೆದುಕೊಳ್ಳಲಾಗುವುದು.

ವರದಿಗಳ ಪ್ರಕಾರ, ಇಂದು ಬೆಳಿಗ್ಗೆ 11 ರ ಸುಮಾರಿಗೆ ಉರುಳಿಸುವಿಕೆಯ ಚಟುವಟಿಕೆ ಪ್ರಾರಂಭವಾಗಿತ್ತು.

ಆಸ್ತಿಯಲ್ಲಿ ಅನಧಿಕೃತ ಭಾಗವಿದೆಯೆಂದು ಬಿಎಂಸಿ ಹೇಳಿದರೆ, ರಾಣಾವತ್ ಅದನ್ನು ನಿರಾಕರಿಸಿದ್ದಾರೆ ಮತ್ತು ತೆರವುಗೊಳಿಸುವಿಕೆಯ ಚಟುವಟಿಕೆ ಮಹಾರಾಷ್ಟ್ರದ ಶಿವಸೇನೆ ಆಡಳಿತದೊಂದಿಗೆ ನಟಿಯ ಭಿನ್ನಾಭಿಪ್ರಾಯದ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ.

Click here to follow us on Facebook , Twitter, YouTube, Telegram

Last updated

Pratidhvani
www.pratidhvani.com