ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ- ಸುಬ್ರಮಣಿಯನ್ ಸ್ವಾಮಿ
ರಾಷ್ಟ್ರೀಯ

ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ- ಸುಬ್ರಮಣಿಯನ್ ಸ್ವಾಮಿ

ತನ್ನದೇ ಪಕ್ಷದ ವಿರುದ್ಧ ನಿರ್ದಾಕ್ಷಿಣ್ಯವಾಗಿ ತೀಕ್ಷ್ಣ ವಿಮರ್ಷೆಗಳು ನಡೆಸಿಕೊಂಡು ಬಂದಿರುವ ಸುಬ್ರಮಣಿಯನ್‌ ಸ್ವಾಮಿ ಅವರು ಪಕ್ಷದ ಐಟಿ ಸೆಲ್‌ ಕಾರ್ಯವನ್ನು ಈ ಬಾರಿ ಟೀಕಿಸಿದ್ದಾರೆ.

ಪ್ರತಿಧ್ವನಿ ವರದಿ

ಪಕ್ಷದ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ನಕಲಿ ಟ್ವೀಟರ್‌ ಖಾತೆಗಳನ್ನು ಬಳಸಿ ತಮ್ಮ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ ಎಂದು ಸೋಮವಾರ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

“ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ. ಅದರ ಕೆಲವು ಸದಸ್ಯರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ನಕಲಿ ಐಡಿಯ ಮೂಲಕ ಟ್ವೀಟ್‌ಗಳನ್ನು ಹಾಕುತ್ತಿದ್ದಾರೆ ”ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. "ಕೋಪಗೊಂಡ ನನ್ನ ಅನುಯಾಯಿಗಳು ವೈಯಕ್ತಿಕ ದಾಳಿಗಳನ್ನು ಮಾಡಿದರೆ ನಾನು ಹೊಣೆಗಾರನಾಗುವುದಿಲ್ಲ" ಎಂದು ಸ್ವಾಮಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‌ವೈಯಕ್ತಿಕ ದಾಳಿಯನ್ನು "ನಿರ್ಲಕ್ಷಿಸಿ" ಎಂದು ಸ್ವಾಮಿ ಕೇಳಿದ ಅದೇ ಪೋಸ್ಟ್ನಲ್ಲಿನ ಪ್ರತಿಕ್ರಿಯೆಗೆ ಮರುಪ್ರತಿಕ್ರಿಯಿಸಿದ ಸ್ವಾಮಿ, "ನಾನು (ವೈಯಕ್ತಿಕ ದಾಳಿಯನ್ನು) ನಿರ್ಲಕ್ಷಿಸುತ್ತಿದ್ದೇನೆ ಆದರೆ ಬಿಜೆಪಿ ಅವರನ್ನು ವಜಾ ಮಾಡಬೇಕು. ನಾವು ರಾವಣನ ಅಥವಾ ದುಶಾಸನನ ಪಕ್ಷದವರಲ್ಲ, ನಾವು ಮರ್ಯಾದ ಪುರುಷೋತ್ತಮನ ಪಕ್ಷ. ” ಎಂದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಮಾಳವಿಯಾ ಅವರನ್ನು ವ್ಯಂಗ್ಯ ಮಾಡುವ ಹಲವಾರು ಪೋಸ್ಟ್‌ಗಳನ್ನು ರಿಟ್ವೀಟ್ ಮಾಡಿದ್ದಾರೆ ಹಾಗೂ ಪರಿಸ್ಥಿತಿಯನ್ನು ಪರಿಹರಿಸಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿ ತನ್ನ ನಿರ್ದಯ ಮತ್ತು ನಿರ್ಭೀತ ನಿಲುವುಗಳಿಗೆ ಹೆಸರುವಾಸಿ, ಕೆಲವೊಮ್ಮೆ ತನ್ನದೇ ಪಕ್ಷದ ವಿರುದ್ಧವೂ ಸಹ ಅವರು ನಿರ್ದಾಕ್ಷಿಣ್ಯವಾಗಿ ಮಾತನಾಡಿದ್ದಾರೆ.

ಜೆಇಇ / ನೀಟ್ ಪರೀಕ್ಷೆಗಳನ್ನು ಮುಂದೂಡುವ ವಿಷಯದಲ್ಲಿ ತಮ್ಮದೇ ಪಕ್ಷದ ನಿಲುವಿಗೆ ವಿರುದ್ಧವಾಗಿ ಹೋಗಿದ್ದ ಸ್ವಾಮಿ ಈ ಹಿಂದೆಯೂ ಹಲವು ಬಾರಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಟೀಕಿಸಿದ್ದರು. ನಿರ್ಮಲಾ ಸೀತರಾಮನ್‌ ಹಣಕಾಸು ಸಚಿವೆಯಾಗಲು ಯೋಗ್ಯವಲ್ಲ ಎಂದೂ ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿರುವ ಅರ್ಥಶಾತ್ರಜ್ಞ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com